ದೇವರ ಕಾರ್ಯಕ್ಕೆ ದೇವಾಲಯಕ್ಕೆ ಹೋದಾಗ ನಮ್ಮವರಿಗೆ ಕೊಟ್ಟ ಗೌರವವಿದು: ಜಗ್ಗೇಶ್ ತೀವ್ರ ವಿಷಾದ

ಬೆಂಗಳೂರು, ಡಿ 24: ವೈಯಕ್ತಿಕ ಭೇಟಿಗಾಗಿ ಕೇರಳಕ್ಕೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ದಾಳಿ ಮಾಡಲು ಮುಂದಾದ ಪ್ರತಿಭಟನಾಕಾರರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸೂರ್ಯಗ್ರಹಣದ ನಿಮಿತ್ತ, ಜ್ಯೋತಿಷಿಗಳ ಸಲಹೆಯ ಮೇರೆಗೆ ಯಡಿಯೂರಪ್ಪ, ಕೇರಳದ ಪ್ರಸಿದ್ದ ತಳಿಪರಂಬ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದರು

ಅಲ್ಲಿಂದ, ಕಣ್ಣೂರು ಜಿಲ್ಲೆಯ ಮಡಾಯಿಕಾವುನಲ್ಲಿರುವ ತಿರುವಾರ್ಕಾಟ್ ಭಗವತಿ ದೇವಸ್ಥಾನಕ್ಕೆ ತೆರಳುವ ವೇಳೆ, ಡಿವೈಎಫ್ಐ ಕಾರ್ಯಕರ್ತರು, ಯಡಿಯೂರಪ್ಪನವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಎಸ್ಕಾರ್ಟ್ ವಾಹನದ ಮೇಲೆ ಮುಗಿಬಿದ್ದಿದ್ದರು.

Protest Against CM Yediyurappa At Kerala, Jaggesh Condemned Through Tweet

ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಬಿಜೆಪಿ ಮುಖಂಡ ಜಗ್ಗೇಶ್, ಈ ಬಗ್ಗೆ ಟ್ವೀಟ್ ಅನ್ನು ಮಾಡಿದ್ದಾರೆ. "ದೇವರ ಕಾರ್ಯಕ್ಕೆ ದೇವಾಲಯಕ್ಕೆ ಹೋದಾಗ ನಮ್ಮವರಿಗೆ ಕೊಟ್ಟ ಗೌರವ!"

"ಅದೇ ನಮ್ಮ ರಾಜ್ಯದಲ್ಲಿ ಉದಾರಿತನ ತೋರಿ ಸರ್ವೇ ಜನಃ ಸುಖಿನೋಭವಂತು ಎನ್ನುತ್ತೇವೆ! ಇಂಥ ದೃಶ್ಯ ಕಂಡಮೇಲಾದರೂ, ನಾವು ಬದಲಾಗದಿದ್ದರೆ! ನಮ್ಮಂತಹ ದೌರ್ಭಲ್ಯ ಹೃದಯದವರು ಮತ್ಯಾರು!"

"ಕನ್ನಡಿಗರು ಕನ್ನಡಿಗನಿಗಾಗಿ ಬಾಳುವ ಗುಣ ರೂಢಿಸಿಕೊಳ್ಳುವ! ಕನ್ನಡಿಗ ಮೊದಲು ಕನ್ನಡಿಗನಿಗೆ ಹರಸುವವನಾಗಲಿ!" ಇದು ಜಗ್ಗೇಶ್ ಮಾಡಿರುವ ಟ್ವೀಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+