Property Tax: ಆಸ್ತಿ ತೆರಿಗೆ ಪಾವತಿ ಕುರಿತು ಗ್ರಾಮೀಣ ಜನತೆಗೆ ಗುಡ್ ನ್ಯೂಸ್
Property Tax: ಆಸ್ತಿ ತೆರಿಗೆ ಪಾವತಿ ಕುರಿತಂತೆ ಆಗಾಗ ಹೊಸ ನಿಯಗಳನ್ನು ಜಾರಿಗಾಗುತ್ತಲೇ ಇರುತ್ತದೆ. ಹಾಗೆಯೇ ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರ ಸರಳ ಮಾರ್ಗವೊಂದನ್ನು ಪರಿಚಯಿಸಿದೆ. ಹಾಗಾದ್ರೇ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರವ ಸಿಹಿಸುದ್ದಿ ನೀಡಿದ್ದು, ಯುಪಿಐ ಮೂಲಕವೇ ಇನ್ಮುಂದೆ ಆಸ್ತೆ ತೆರಿಗೆ ಪಾವತಿಸಬಹುದು ಎಂದು ತಿಳಿಸಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಬಾಪೂಜಿ ಸೇವಾ ಕೇಂದ್ರದ ವೆಬೈಟ್ ಮೂಲಕ ಪಾವತಿಸಿ ಅಥವಾ Google Pay, PhonePe, Paytm ಅಥವಾ BHIM ಆಪ್ ಮೂಲಕ ತೆರಿಗೆ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ https://bsk.karnataka.gov.in/ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಮೊಬೈಲ್ ಆಪ್ ಬಳಕೆ ಹೇಗೆ?
* ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಅಪ್ಲಿಕೇಷನ್ ಇದೀಗ ಅಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಲಭ್ಯವಿದೆ.
* ನಿಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ Bapuji Seva Kendra ಎಂದು ಸರ್ಚ್ ಮಾಡಿ ಮತ್ತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ
* ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿ ಲಾಗಿನ್‌ಆಗಿ ಮತ್ತು ಬಾಪೂಜಿ ಸೇವಾ ಕೇಂದ್ರದ ಸೇವೆಗಳನ್ನು ಪಡೆಯಿರಿ
ಆಸ್ತಿ ರಶೀದಿ ಪಡೆಯುವುದು ಹೇಗೆ?
* https://bsk.karnataka.gov.in ಗೆ ಭೇಟಿ ನೀಡಿ
* ಸೇವೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ
* ಆಸ್ತಿ ಸಂಬಂಧಿತ ವಿಭಾಗದಲ್ಲಿ ರಶೀದಿ ಡೌನ್‌ಲೋಡ್ ಮಾಡಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಆಸ್ತಿ ತೆರಿಗೆ ಆಯ್ಕೆ ಮಾಡಿ ಮತ್ತು ನಿಮ್ಮ ಆಸ್ತಿ ಐಡಿ ಸಂಖ್ಯೆ ನಮೂದಿಸಿ
* ಬಳಿಕ ನಿಮ್ಮ ಆಸ್ತಿ ರಶೀದಿಯನ್ನು ಡೌನ್‌ಲೋಟ್ ಮಾಡಬಹುದಾಗಿದೆ
ಅರ್ಜಿದಾರರಿಗೆ ಮಾಹಿತಿ: ಬಿ ಖಾತಾ ನೀಡಲು ಅರ್ಜಿದಾರರಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ ಎನ್ನುವ ಆರೋಪ ಕೇಳಿಬಂದಿತ್ತು. ದಾವಣಗೆರೆ ಪಾಲಿಕೆಯಲ್ಲಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತು ಸರ್ಕಾರ ಸಮರ ಸಾರಲು ಮುಂದಾಗಿದೆ. ಹಾಗಾದ್ರೆ ಅರ್ಜಿದಾರರು ಈ ಹಣವನ್ನು ಪಾಪಾಸ್ ಪಡೆಯಲು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಿ, ಇ-ಆಸ್ತಿ ಸೃಷ್ಟಿಸಿ ಬಿ ಖಾತೆ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅರ್ಜಿದಾರರಿಂದ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಸರ್ಕಾರವು ಪಾಲಿಕೆಯಲ್ಲಿ ಪಡೆಯುತ್ತಿದ್ದ 10,000 ರೂಪಾಯಿ ಶುಲ್ಕವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಗಮನಿಸಬೇಕಾದ ಅಂಶಗಳು
* ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಿನಲ್ಲಿ ಪಡೆಯುತ್ತಿದ್ದ 10,000 ರೂಪಾಯಿ ಹೆಚ್ಚುವರಿ ಶುಲ್ಕ ರದ್ದುಪಡಿಸಲಾಗುತ್ತದೆ.
* ಸರ್ಕಾರ ಬಿ ಖಾತೆಗೆ ನಿಗದಿಪಡಿಸಿದ್ದ ದರದ ಜೊತೆಗೆ ದಾವಣಗೆರೆ ಮಹಾನಗರ ಪಾಲಿಕೆ ಹೆಚ್ಚುವರಿ ಶುಲ್ಕ ಪಡೆಯತ್ತಿತ್ತು.
* ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿ ಮಾಡಿದವರು ರಶೀದಿಯೊಂದಿಗೆ ಪಾಲಿಕೆ ವಲಯ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ರೆ ಶುಲ್ಕ ಹಿಂದಿರುಗಿಸಲಾಗುತ್ತದೆ ಎನ್ನವ ಮಾಹಿತಿ ಲಭ್ಯವಾಗಿದೆ.
ಭೂಪರಿವರ್ತನೆ ಆಗದೇ ಅನಧಿಕೃತ ಬಡಾವಣೆಯ ನಿವೇಶನ, ಮನೆ, ಕಟ್ಟಡಗಳಿಗೆ ಬಿ ಖಾತಾ ನೀಡುವ ಅಭಿಯಾನ ನಡೆಯುತ್ತಿದ್ದು, ಈ ವೇಳೆ ದಾವಣಗೆರೆ ಮಹಾನಗರ ಪಾಲಿಕೆಯು ಅರ್ಜಿದಾರರಿಂದ ಬಿ ಖಾತಾ ನೀಡಲು ಹೆಚ್ಚುವರಿ 10,000 ರೂಪಾಯಿ ಶುಲ್ಕ ಪಡೆಯುತ್ತಿರುವ ಆರೋಪ ಕೇಳಿಬಂದಿತ್ತು.
ರಾಜ್ಯದ ಯಾವುದೇ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಮತ್ತು ಸುಧಾರಣೆ ಶುಲ್ಕ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರಲಿಲ್ಲ. ಆದರೆ, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಾತ್ರ ಹೊಸದಾಗಿ ಡೋರ್ ನಂಬರ್ ನೀಡಲು ಶುಲ್ಕ ಪಡೆಯಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿತ್ತು.
ನಿಯಮದ ಪ್ರಕಾರ ಖಿ ಖಾತಾ ಮಾಡಿಸಲು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕು. ಬೇರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯ ಇಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ತಿಳಿಸಿದ್ದರು.












Click it and Unblock the Notifications