Property Price: ಬಿ -ಖಾತಾದಿಂದ ಈ ಭೂಮಿಗೆ ಬಂಗಾರದ ಬೆಲೆ, ರಿಯಲ್ ಎಸ್ಟೇಟ್‌ಗೆ ಬಂಪರ್!
Property Price: ಕರ್ನಾಟಕ ಸರ್ಕಾರವು ವಿವಿಧ ಆಸ್ತಿಗಳ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವು ಹಲವು ಭೂಮಿಗಳಿಗೆ ಬಂಗಾರದ ಬೆಲೆಯನ್ನು ತಂದುಕೊಟ್ಟಿದೆ. ಹೌದು ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಕೆಲವು ನಿರ್ದಿಷ್ಟ ಭೂಮಿಗಳಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಎಲ್ಲಾ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಬಿ - ಖಾತಾ ನೀಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ತಿಂಗಳ ಒಳಗಾಗಿ ಬಿ - ಖಾತೆ ನೀಡಬೇಕು ಅಂತ ಹೇಳಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದೆ. ಅದೇನು ಎನ್ನುವ ವಿವರ ನೋಡೋಣ...
ರಾಜ್ಯದಲ್ಲಿ ಕೆಲವು ಆಸ್ತಿಗಳಿಗೆ ಸರ್ಕಾರದ ನಿರ್ಧಾರವು ಬಂಪರ್ ಆದಾಯವನ್ನು ತಂದು ಕೊಡುತ್ತಿದೆ. ಕರ್ನಾಟಕ ಸರ್ಕಾರವು ಅನಧಿಕೃತ ಆಸ್ತಿಗಳಿಗೆ, ನಿವೇಶನ ಮತ್ತು ರೆವಿನ್ಯೂಗಳಿಗೆ ಬಿ -ಖಾತಾ ನೀಡುವುದಕ್ಕೆ ಮುಂದಾಗಿದೆ. ಇದರೊಂದಿಗೆ ಸರ್ಕಾರದ ಕೆಲವು ಮೂಲಸೌಕರ್ಯಗಳನ್ನು ಸಹ ಕೊಡುವುದಾಗಿ ಹೇಳಿದೆ. ಇದರಿಂದ ಬಿ ಖಾತಾದ ಪ್ರಾಪರ್ಟಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಬಿ ಖಾತಾ ಆಸ್ತಿಗಳು ಸೇಲ್ ಆಗುತ್ತಿರಲಿಲ್ಲ. ಅಲ್ಲದೆ ಅನಧಿಕೃತ ಆಸ್ತಿಗಳಿಗೆ ಬಿ - ಖಾತಾ ನೀಡಲು ಪ್ರಾರಂಭಿಸಿದ ಮೇಲೆ ಬರೋಬ್ಬರಿ 50 ಲಕ್ಷ ಆಸ್ತಿಗಳಿಗೆ ಬಂಪರ್ ಬಂದಿದೆ.

ಯಾವುದೇ ಖಾತೆಗಳು ಇಲ್ಲದೆ ಇರುವುದರಿಂದ ರಿಯಲ್ ಎಸ್ಟೇಟ್‌ದಾರರು, ಅನಧಿಕೃತ ಬಡಾವಣೆ ಹಾಗೂ ನಿವೇಶನವನ್ನು ಹೊಂದಿರುವವರು ಆಯಾ ಆಸ್ತಿಗಳನ್ನು ಸೇಲ್ ಮಾಡುವುದಕ್ಕೆ ಸಾಧ್ಯವಾಗದೆ ಪರದಾಡುತ್ತಿದ್ದರು. ಇದೀಗ ಈಚೆಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ತಿಂಗಳ ಅವಧಿಯ ಒಳಗಾಗಿ ಎಲ್ಲಾ ಆಸ್ತಿಗಳಿಗೂ ಬಿ - ಖಾತಾ ಕೊಡುವುದಕ್ಕೆ ಹೇಳಿದ್ದಾರೆ. ಇದರಿಂದ ಯಾವುದೇ ಖಾತಾ ಇಲ್ಲದ ಅಥವಾ ಅನಧಿಕೃತ ಆಸ್ತಿಗಳಾಗಿರುವ ಅಂದಾಜು 40ರಿಂದ 50 ಲಕ್ಷ ಆಸ್ತಿಗಳಿಗೆ ರಾಜ್ಯದಲ್ಲಿ ಬಂಪರ್ ಬಂದಿದೆ.
ಅನಧಿಕೃತ ನಿವೇಶಗಳಿಗೆ ಬಿ -ಖಾತಾ ನೀಡುವ ಪ್ರಕ್ರಿಯೆ ಶುರುವಾಗಿದ್ದು. ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಿದೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಎ -ಖಾತಾದ ಆಸ್ತಿಗಳಿಗೆ ಬಿ -ಖಾತಾದ ಆಸ್ತಿಗಳು ಪೈಪೋಟಿಯನ್ನೇ ಕೊಡಲಿದೆ ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ಎ - ಖಾತಾ ಆಸ್ತಿಗಳಿಗೆ ಮಾತ್ರ ಬಂಪರ್ ಇತ್ತು. ಇದೀಗ ಬಿ ಖಾತಾದ ಆಸ್ತಿಗಳಿಗೂ ಲಕ್ ಸಹ ಬಂದಿದೆ.
ಮಾರಾಟಕ್ಕೆ ಕಾದಿದ್ದ ರಿಯಲ್ ಎಸ್ಟೇಟ್‌ದಾರರು: ಇನ್ನು ರಾಜ್ಯದಲ್ಲಿ ಲಕ್ಷಾಂತರ ಬಿ -ಖಾತಾ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕೆಲವು ಆಸ್ತಿದಾರರು ಹಾಗೂ ರಿಯಲ್ ಎಸ್ಟೇಟ್‌ದಾರರು ಪರದಾಡುತ್ತಿದ್ದರು ಅಂತವರಿಗೆ ಇದೀಗ ಅದೃಷ್ಟ ಬಂದಿದೆ. ಯಾಕೆಂದರೆ ರಾಜ್ಯ ಸರ್ಕಾರವೇ ಒಂದು ಬಾರಿಗೆ ಬಿ -ಖಾತಾ ನೀಡುವುದಾಗಿ ಹೇಳಿದ್ದು. ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ನೀಡುವುದಾಗಿಯೂ ಹೇಳಿದೆ. ಇಷ್ಟು ದಿನ ಬಿ ಖಾತಾ ತೆಗೆದುಕೊಂಡರೆ ಸರ್ಕಾರದ ಪ್ರಮುಖ ಸೌಲಭ್ಯ ಸಿಗಲ್ಲ ಎನ್ನುವ ಆತಂಕ ಇತ್ತು.
ಅಂದರೆ ವಿದ್ಯುತ್, ನೀರು ಹಾಗೂ ರಸ್ತೆ ಸಂಪರ್ಕದಂತಹ ಪ್ರಮುಖ ಸೇವೆಗಳಿಂದ ವಂಚಿತರಾಗುವ ಆತಂಕ ಇತ್ತು. ಇದೀಗ ಈ ಒಂದು ಬಾರಿ ಖಾತಾ ನೀಡಿ. ಇನ್ಮುಂದೆ ಈ ರೀತಿಯ ಪರಿಕಲ್ಪನೆ ಇರುವುದಿಲ್ಲ ಎಂದು ಹೇಳಿರುವುದು ಅನಧಿಕೃತ ಬಡಾವಣೆದಾರರಲ್ಲಿ ಸಮಾಧಾನ ಮೂಡಿಸಿದೆ. ಮಾತ್ರವಲ್ಲ ಸುಮಾರು 50 ಲಕ್ಷ ಆಸ್ತಿಗಳಿಗೆ ಬಂಗಾರದ ಬೆಲೆ ಬಂದಿದೆ.












Click it and Unblock the Notifications