ವಿಜಯಪುರ: ಆಸ್ತಿ ವಿವಾದದಲ್ಲಿ ತಂದೆ, ಇಬ್ಬರು ಮಕ್ಕಳ ಬರ್ಬರ ಹತ್ಯೆ
ವಿಜಯಪುರ, ಜೂನ್ 24 : ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಂದೆ ಹಾಗೂ ಆತನ ಇಬ್ಬರು ಮಕ್ಕಳ ಬರ್ಬರ ಕೊಲೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಹೊಸತಾವರಖೇಡ ಗ್ರಾಮದಲ್ಲಿ ನಡೆದಿದೆ.
ಸಲಕಿ, ಗುದ್ದಲಿ, ಹಾರಿಯಿಂದ ಹೊಡೆದು ಸಂಗಪ್ಪ ಹರಿಂದ್ರಾಳ(55), ಶರಣಬಸಪ್ಪ ಸಂಗಪ್ಪ ಹರಿಂದ್ರಾಳ(25) ಹಾಗೂ ಮಲ್ಲಿಕಾರ್ಜುನ ಹರಿಂದ್ರಾಳ(23) ಎನ್ನುವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿಂದತೆ ಸಂಗಪ್ಪನ ಅಣ್ಣನ ಮಗ ಸಾಹೇಬಗೌಡ ಹರಿಂದ್ರಾಳ ಹಾಗೂ ಸಹೋದರರು ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು, ಈ ಸಂಬಂಧ ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications