ಕುವೆಂಪು ಅವರ ಶಿಷ್ಯ ಪ್ರೊ. ಪ್ರಭುಶಂಕರ ಇನ್ನಿಲ್ಲ

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 09: ಕುವೆಂಪು ಅವರ ನೇರ ಶಿಷ್ಯ, ಹಿರಿಯ ವಿದ್ವಾಂಸ ಡಾ.ಪ್ರಭುಶಂಕರ(89) ಅವರು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲ ವಾರಗಳಿಂದ ಆಹಾರ ಸೇವನೆ ನಿಲ್ಲಿಸಿದ್ದ ಪ್ರಭುಶಂಕರ ಅವರನ್ನು ಅವರ ಒಂಟಿಕೊಪ್ಪಲಿನ ಅವರ ಮನೆ 'ಶ್ರೀವರ'ಕ್ಕೆ ಕರೆತರಲಾಗಿತ್ತು. ಭಾನುವಾರ ರಾತ್ರಿ ಬಾರದ ಲೋಕಕ್ಕೆ ತೆರಳಿದ್ದಾರೆ.

Prof Prabhushankar passes away

ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಪ್ರಭುಶಂಕರ ಅವರು ಯಳಂದೂರು, ಮೈಸೂರು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಕುವೆಂಪು, ದೇಜಗೌ, ಕ.ವೆಂ.ರಾಘವಾಚಾರ್ ಅವರ ಪ್ರಭಾವದಿಂದ ಮೈಸೂರಿನ ಕಾಲೇಜು ಸೇರಿದರು. ಹಿರಿಯ ಸಾಹಿತಿಗಳಾದ ತೀ.ನಂ.ಶ್ರೀ, ರಾಜರತ್ನಂ, ಎಂ.ವಿ.ಸೀತಾರಾಮಯ್ಯ, ಡಿ.ಎಲ್.ಎನ್. ಮುಂತಾದವರಿಂದ ಕನ್ನಡ ಅಧ್ಯಯನ ಮಾಡಿದರು.

* 1929ನೇ ಫೆಬ್ರುವರಿ 15ರಂದು ಚಾಮರಾಜನಗರದಲ್ಲಿ ಜನಿಸಿದರು.
* ಆರ್. ಕರಿಬಸಪ್ಪ ಮತ್ತು ಶ್ರೀಮತಿ ರುದ್ರಮ್ಮ ಇವರ ತಂದೆ ತಾಯಿ.
* ಬಿ.ಎ., ಆನರ್ಸ್ (೧೯೫೦) ಕನ್ನಡ ಎಂ.ಎ., (೧೯೫೧) ಪ್ರಥಮಶ್ರೇಣಿ ಹಾಗೂ ವಿಶ್ವವಿದ್ಯಾನಿಲಯಕ್ಕೆ ಪ್ರಥಮರಾದರು.
* ತಮ್ಮ ಪಿಎಚ್.ಡಿ ಪದವಿಯನ್ನು ತಮ್ಮ ಗುರುಗಳಾದ ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಪಡೆದರು. ಅದು ಮೈಸೂರು ವಿಶ್ವವಿದ್ಯಾನಿಲಯದ ಪ್ರಪ್ರಥಮ ಕನ್ನಡ ಪಿಎಚ್.ಡಿ ಆಗಿದೆ.
* ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ದುಡಿದು, ಪ್ರಸರಾಂಗದ ನಿರ್ದೇಶಕರಾದರು.
* ಮೈಸೂರು ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
* ಡಾ. ಪ್ರಭುಶಂಕರ ಅವರು 50ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀರಾಮಕೃಷ್ಣ ಆಶ್ರಮದೊಡನೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದ ಡಾ. ಪ್ರಭುಶಂಕರ ಅವರು ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಜೀವನ ಚರಿತ್ರೆ ಕುರಿತು ಕೃತಿಗಳನ್ನು ರಚಿಸಿದ್ದಾರೆ.
*ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ ಇತ್ಯಾದಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
*ಇವರ ಪತ್ನಿ ದಿವಂಗತ ಡಾ. ಶಾಂತಾ ಅವರು ವಿಶ್ವವಿದ್ಯಾನಿಲಯದ ಆರೋಗ್ಯಕೇಂದ್ರದಲ್ಲಿ ವೈದ್ಯಾಧಿಕಾರಿಣಿ ಆಗಿದ್ದರು. ಪ್ರಭುಶಂಕರ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ನಿವೇದಿತ - ಗೃಹಿಣಿ, ಮತ್ತು ಅಸಿತ - ಅಮೆರಿಕಾದಲ್ಲಿ ಖ್ಯಾತ ಉದ್ಯಮಿಯಾಗಿದ್ದಾರೆ.
ಅಕರ ಸೌಜನ್ಯ : ಡಾ.ಕವಿತಾ ರಮೇಶ್ ಅವರ ಪಿಎಚ್.ಡಿ ಮಹಾಪ್ರಬಂಧ
ಚಿತ್ರಕೃಪೆ: ಪಂಡಿತಾರಾಧ್ಯ, ಮೈಸೂರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prof Prabhushankar passes away on April 08. He was renowned litterateur, ardent disciple of Jnanpith laureate Kuvempu (Kuppali Venkatappa Puttappa). His last rites will be performed on April 09 at Mysuru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ