ಎಂಎಂ ಕಲಬುರ್ಗಿ ಹಂತಕರು ವಿಜಯಪುರದಲ್ಲೇ ಸಿಕ್ಕರೇ?

Posted By:
Subscribe to Oneindia Kannada

ವಿಜಯಪುರ, ಡಿಸೆಂಬರ್ 31: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಖ್ಯಾತ ವಿಮರ್ಶಕ, ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಕೊನೆಗೂ ಇಬ್ಬರನ್ನು ಬಂಧಿಸಲಾಗಿದೆ.

ಕಲಬುರ್ಗಿ ಕೊಲೆ ಸಂಬಂಧ ಸುದೀರ್ಘವಾಗಿ ವಿಚಾರಣೆ ಮತ್ತು ತನಿಖೆ ಮುಂದಾಗಿದ್ದ ಸಿಐಡಿ ಅಧಿಕಾರಿಗಳು ವಿಜಯಪುರದ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಆ ಪೈಕಿ ಇಬ್ಬರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. [ಕಲಬುರ್ಗಿ ಹತ್ಯೆಗೆ ಒಂದು ವರ್ಷ, ತನಿಖೆ ಎತ್ತ ಸಾಗಿದೆ?]

Pro M.M.Kalburgi murder. The two arrested by CID in vijaypur

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ನಾಗರಾಳ ಗ್ರಾಮ ಕಲಬುರ್ಗಿ ಎಂ ಎಂ ಕಲಬುರ್ಗಿಯವರ ಅವರ ಸ್ವಂತ ಊರು. ಆರೋಪಿಗಳು ಈ ಪ್ರದೇಶದವರೇ ಆಗಿದ್ದು ಕಲಬುರ್ಗಿಯವರ ಜಮೀನಿನ ವಿಷಯದಲ್ಲಿ ಗಲಾಟೆಯಾಗಿತ್ತು ಎಂದು ಮೂಲಗಳು ತಿಳಿಸಿವೆ. [ಎಂಎಂ ಕಲಬುರ್ಗಿ ಹತ್ಯೆಗೆ 1 ವರ್ಷ, ಆರೋಪಿ ಎಲ್ಲಿ?]

ನಮಗೆ ಕಲಬುರ್ಗಿಯವರ ಬರಹ, ಪುಸ್ತಕ, ವಿಚಾರ, ಸಿದ್ಧಾಂತಗಳ ಬಗ್ಗೆ ಏನೂ ತಿಳಿದಿಲ್ಲ ಅದರೆ, ಆಸ್ತಿ ವಿಷಯವಾಗಿ ಅವರೊಂದಿಗೆ ಅಸಮಾಧಾನವಿತ್ತು, ಜಗಳವೂ ನಡೆದಿತ್ತು. ಹೀಗಾಗಿ ಹತ್ಯೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ವಿಚಾರ ವಾದಿಗಳಾದ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆ ವೇಳೆಯಲ್ಲಿಯೇ ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ಹಿಂದೂ ಪರ ಸಂಘಟನೆಗಳ ಅಸಹಿಷ್ಣುತೆ ಕಾರಣದಿಂದ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ದೇಶಾದ್ಯಂತ ಅಸಹಿಷ್ಣುತೆ ಕಾರಣಕ್ಕೆ ವಾದ ವಿವಾದಗಳು ನಡೆದಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pro M.M.Kalburgi murder. The two arrested by CID in vijaypur, Sources said the accused have been acknowledged as the property had to assassinate him
Please Wait while comments are loading...