"ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೋ ರಕ್ಷಣೆಗೆ, ಧರ್ಮ ರಕ್ಷಣೆಗೆ ಕಳಿಸುತ್ತಾರಾ?"

ಬೆಂಗಳೂರು, ಸೆಪ್ಟೆಂಬರ್‌ 15: ತಲೆ ತೆಗೆಯಿರಿ, ತೊಡೆ ಮುರಿಯಿರಿ" ಎನ್ನುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳ ಕೈಗೆ ದೊಣ್ಣೆ, ಲಾಂಗು ಮಚ್ಚುಗಳನ್ನು ಕೊಟ್ಟು ಬೀದಿಗೆ ಬಿಡುತ್ತಾರೆಯೇ? ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಗೊರಕ್ಷಣೆಗೆ, ಧರ್ಮ ರಕ್ಷಣೆಗೆ ಕಳಿಸುತ್ತಾರಾ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬಡವರ ಮನೆ ಮಕ್ಕಳನ್ನು ಬಾವಿಗೆ ತಳ್ಳಿ ರಾಜಕೀಯದ ಆಳ ನೋಡುವ ಬದಲು ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು, ಕೈಗೆ ದೊಣ್ಣೆ ಮಚ್ಚು ಕೊಟ್ಟು ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ಬಿಡಬೇಕು. ಬಿಜೆಪಿ ನಾಯಕರು ಧರ್ಮರಕ್ಷಣೆಯ ಬೋಧನೆ, ಪ್ರಚೋದನೆಗಳನ್ನು ತಮ್ಮ ಮನೆಯಿಂದಲೇ ಶುರು ಮಾಡಲಿ, ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಲಿ, ಕೈಗೆ ದೊಣ್ಣೆ ಕೊಡಲಿ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಎಂಬ RSS ಫಾರ್ಮಾನನ್ನು ಯಾವ ಬಿಜೆಪಿಗರು ಪಾಲನೆ ಮಾಡಲು ಮುಂದಾಗಿದ್ದಾರೆ? ಮಕ್ಕಳು ಹೆರುವುದರ ಹೊರೆಯೂ ಬಡವರಿಗೆ ಮಾತ್ರವೇ? ಬಿಜೆಪಿಗರಿಗೂ ಅನ್ವಯಿಸುತ್ತದೆಯೇ? ಎಂದು ಪ್ರಶ್ನಿಸಿದರು.

Priyank Kharge Questioned Whether BJP Leaders Send Their Children To Protect Cows

ಅಮಾಯಕ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರೆದುರು "ತಲೆ ತೆಗೆಯುವ ಕೆಲಸಕ್ಕೆ ನಿಮ್ಮ ಮಕ್ಕಳು ಮುಂದಿರಲಿ, ನಾವು ಅವರ ಹಿಂದೆ ಇರುತ್ತೇವೆ" ಎಂಬ ಒಂದೇ ಒಂದು ಬೇಡಿಕೆ ಮುಂದಿಡಲಿ. ಬಿಜೆಪಿ ನಾಯಕರ ಅಸಲಿತ ಬಂಡವಾಳವನ್ನು ಕಾಣಬಹುದು. ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ‌ ಚಲೋ, ಬಿಜೆಪಿಯವರಿಗೆ ಬೇಕಾಗಿರುವುದಾದರೂ ಏನು ? ಕಾಮನ್ ಸೆನ್ಸ್ ಇದೆಯಾ ? ಸೌಜನ್ಯ ಅವರ ಮನೆಗೆ ಹೋದಾಗ ರಾಶಿ ರಾಶಿ‌ ಬುರುಡೆ ಸಿಕ್ಕ ಬಗ್ಗೆ ಗೊತ್ತಾಗಿದೆ. ಆ ಬಗ್ಗೆ ಏನು ಹೇಳುತ್ತಾರೆ.

ಧರ್ಮಸ್ಥಳ, ಮದ್ದೂರು ಚಲೋ ಆಯ್ತು. ತಲೆ ಕಡಿರಿ ಅಂತ ಪ್ರಚೋದನೆ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ. ಸಿಟಿ ರವಿ ಸೇರಿದಂತೆ ಯಾವ ಬಿಜೆಪಿ‌ನಾಯಕರು ತಮ್ಮ ಮಕ್ಕಳ‌ಕೈಗೆ ಮಚ್ಚು ಲಾಂಗು ಕೊಟ್ಟಿದಾರ? ಬಿಜೆಪಿಗರು ರಾಜ್ಯವನ್ನು ಯುಪಿ, ಬಿಹಾರ ಮಾಡಹೊರಟಿದ್ದಾರ? ಬಾಡಿಗೆ ಬಾಷಣಕಾರರು ಸೇರಿದಂತೆ ಪ್ರತಾಪ್ ಸಿಂಹ, ರವಿ ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರ?

ನಿನ್ನೆ ಭಾರತ ಪಾಕಿಸ್ತಾನ ಕ್ರಿಕೆಟ್ ನಡೆತಲ್ಲ ಬಿಜೆಪಿಗರಿಗೆ ನಾಚಿಕೆಯಾಗಬೇಕು..ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿಗೆ ಸಮಜಾಯಿಷಿ ನೀಡುತ್ತಾರೆ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯನಾ? ಸರ್ಕಾರ ಬಿಸಿಸಿಐ ಗೆ ನಿರ್ದೇಶನ ಯಾಕೆ ನೀಡಿಲ್ಲ. ಪ್ರಧಾನಿ ಯಾಕೆ ಗೃಹ ಸಚಿವರಿಗೆ ಹೇಳಿಲ್ಲಾ? ಹುತಾತ್ಮರ ಮನೆಯವರು ಪಂದ್ಯ ಆಡುವುದು‌ಬೇಡ ಅಂದಿದ್ದಾರೆ, ಆದರೂ ಪಂದ್ಯ ಯಾಕೆ ನಡೆಸಿದರು.?

ಪಿಡಿಓ ನೇಮಕಾತಿ ವಿಚಾರ, ಕೆಪಿಎಸ್ ಸಿ ನೇಮಕಾತಿ ವಿಚಾರದಲ್ಲಿ‌ ನೆಪ ಹೇಳುತ್ತಿದೆ. ಕೆಪಿಎಸ್ ಸಿ ಹುದ್ದೆಗಳ ನೇಮಕಾತಿ ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ, ಚುನಾವಣೆ ನಡೆಸಲೇಬೇಕು. ಮೊದಲು ಮೀಸಲಾತಿ ಗೊಂದಲವಿತ್ತು ಅದನ್ನು ಸರಿಪಡಿಸಲಾಯಿತು. ಹಿಂದಿನ ಸರ್ಕಾರದಲ್ಲಿ‌ ಕೆಲ ಪಂಚಾಯತ್ ಗಳು ನಗರ ವ್ಯಾಪ್ತಿಗೆ ಸೇರಿ ಕ್ಷೇತ್ರ ಮರುವಿಂಗಡನೆಗೆ ತಡವಾಯ್ತು. ಬ್ಯಾಲೆಟ್ ಮೂಲಕ‌ ಚುನಾವಣೆ ನಡೆಸಿದರೆ ತಡವಾಗುತ್ತದೆ ಎನ್ನುವ ವಿಚಾರ, ಆದರೆ ಆಗಲಿ ಬಿಡಿ ಅಮೇರಿಕಾ ಫ್ರಾನ್ಸ್ ಗಳಲ್ಲಿ ತಿಂಗಳುಗಟ್ಟಲೇ ಎಣಿಕೆ ನಡೆಯುತ್ತದಲ್ಲ?. ಮತದಾರರ ಸ್ವಚ್ಛ ಪಟ್ಟಿ ನೀಡಲು ಚುನಾವಣೆ ಆಯೋಗ ವಿಫಲವಾಗಿದೆ. ಆಯೋಗ ಬಿಜೆಪಿ‌ ಕೈಗೊಂಬೆಯಾಗಿದೆ. ನಾವು ನೀಡಿದ ದೂರಿನ ಬಗ್ಗೆ ವಿಚಾರಣೆನೆ‌ ನಡೆಸುತ್ತಿಲ್ಲ ಎಂದರು.

ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಲು ನಿಖಿಲ್ ಕುಮಾರಸ್ವಾಮಿ ಬರುತ್ತಿರುವ ವಿಚಾರ ಒಳ್ಳೆಯದು. ಅವರ ತಂದೆಯೆ ಕೇಂದ್ರ ಸಚಿವರಾಗಿದ್ದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ‌ ನೀಡಲಿ. ರಾಜ್ಯ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುತ್ತಿದೆ. ನಾವು ನೀಡುವ ತೆರಿಗೆಯಲ್ಲಿಯೇ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕಳೆದ ಬಾರಿ 4.50 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ, ಕೇಂದ್ರ ನಮಗೆ ಎಷ್ಟು ವಾಪಸ್ ನೀಡಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ‌ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು‌ ಡಿಸಿಎಂ ಅವರಗೆ ಮಾತನಾಡಿರುತ್ತಾರೆ. ಅವರು ಏನು ಮಾತನಾಡಿರುತ್ತಾರೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರ್ ರಚನೆ ಅವರ ವಿವೇಚನೆಗೆ ಬಿಟ್ಟಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+