• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬ: ಖಾಸಗಿ ಬಸ್‌ಗಳಿಂದ ಪ್ರಯಾಣಿಕರಿಗೆ ಶಾಕ್: ಎಷ್ಟೇಷ್ಟು ಹಣ ವಸೂಲಿ? ಇಲ್ಲಿದೆ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 25: ದಸರಾ ಹಬ್ಬ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಡುವ ಪ್ರಯಾಣಿಕರಿಗೆ ಬಸ್ ದರ ಏರಿಕೆ ಬಿಸಿ ತಟ್ಟುತ್ತಿದೆ.

ಹೌದು, ಸೋಮವಾರಿಂದ ಒಂಭತ್ತು ದಿನ ವಿಜಯ ದಶಮಿ, ನವದುರ್ಗೆಯ, ಬನ್ನಿಮರ ಪೂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 5ರಂದು ವಿಜಯದಶಮಿ ನಡೆಯಲಿದೆ. ಅಂದು ನಾಡಿನಾದ್ಯಂತ ಎಲ್ಲಿಲ್ಲದ ಸಂಭ್ರಮ ಸಡಗರ ತುಂಬಿರುತ್ತದೆ. ಈ ಹಿನ್ನೆಲೆ ಅಕ್ಟೋಬರ್ 1 ಶನಿವಾರ ಬರುವ ಹಿನ್ನೆಲೆಯಲ್ಲಿ ಅಂದಿನಿಂದಲೇ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿಸಿದೆ.

Dasara 2022- ನವರಾತ್ರಿ ಮೊದಲ ದಿನ ಸೆ. 26, ಶೈಲಪುತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರDasara 2022- ನವರಾತ್ರಿ ಮೊದಲ ದಿನ ಸೆ. 26, ಶೈಲಪುತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಹಬ್ಬದ ಸನ್ನಿವೇಶವನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ಬಸ್ ದರ ದುಪ್ಪಟ್ಟು ಬೆಲೆಗೆ ಏರಿಕೆ ಆಗಿದ್ದು, ಇದು ಜನರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಸಾರ್ವಜನಿಕ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್ ಈಗಾಗಲೇ ಬುಕ್ಕಿಂಗ್ ಆದ ಕಾರಣ ಅನಿವಾರ್ಯವಾಗಿ ಹೆಚ್ಚಿನ ದುಡ್ಡು ಕೊಟ್ಟು ಪ್ರಯಾಣಿಕರು ಖಾಸಗಿ ಬಸ್ಸಿನಲ್ಲೇ ಪ್ರಯಾಣಿಸಬೇಕಾದ ಸ್ಥಿತಿ ಇದೆ.

ಬೆಂಗಳೂರಿನಿಂದ- ಧಾರವಾಡ, ಕಲಬುರಗಿ, ಬೆಳಗಾವಿ, ಮಂಗಳೂರು, ಉಡುಪಿ, ಬಳ್ಳಾರಿ ಸೇರಿದಂತೆ ಮುಂತಾದ ಊರುಗಳಿಗೆ ಹೋಗುವ ಖಾಸಗಿ ಬಸ್‌ಗಳ ದರ ದುಬಾರಿಯಾಗಿದೆ. ಸಾರಿಗೆ ಸಚಿವರೇ ಹಬ್ಬದ ಸನ್ನಿವೇಶದಲ್ಲಿ ಹೆಚ್ಚುವರಿ ಬಸ್ ಬಿಡಬೇಕು. ಜತೆಗೆ ಖಾಸಗಿ ಬಸ್ ಮಾಲೀಕರ ಸುಲಿಗೆಗೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿಗೆ ಎಷ್ಟು ದುಬಾರಿ ದರ ನಿಗದಿ?
ಸಾಮಾನ್ಯ ದಿನಗಳಲ್ಲಿ ಇದ್ದ ದರಕ್ಕಿಂತ ಒಂದೂವರೆಯಿಂದ ಎರಡು ಪಟ್ಟು ಹಣ ಹೆಚ್ಚಿಗೆ ಮಾಡಲಾಗಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುವ ಖಾಸಗಿ ಬಸ್ ಸಾಮಾನ್ಯ ದರ 700-740ರೂ. ಇತ್ತು, ಇದೀಗ ಹಬ್ಬದ ಸಂದರ್ಭ ಹಿನ್ನೆಲೆ ಆ ದರವನ್ನು 1400ನಿಂದ ರೂ.1800ವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ಬೆಳಗಾವಿ ಕ್ರಮವಾಗಿ 800-900ರೂ,ನಿಂದ 1100-1300ರೂ. ಗೆ ಏರಿದೆ. ಧಾರವಾಡಕ್ಕೆ 600-650ರೂ. ಇದ್ದದ್ದು ಈಗ 900-1000ರೂ. ಆಗಿದೆ.

Private Buses Capitalises on High Demand in Dasara, Government Show Ignorance

ಮಂಗಳೂರು ಹಳೆಯ 700-800ರೂ. ಇತ್ತು ಈಗ 1000-1300ರೂ.ಗೆ, ಹುಬ್ಬಳ್ಳಿ 750-800ರೂ. ನಿಂದ 1200-1500ರೂ.ಗೆ ಮತ್ತು ಕಲಬುರಗಿಗೆ 800-900ರೂ.ನಿಂದ ಇದೀಗ 1200-1550ರೂ.ವರೆಗೆ ಹೆಚ್ಚಿಸಲಾಗಿದೆ. ಇದು ಹಬ್ಬದ ಸನ್ನಿವೇಶಗಲ್ಲಿ ಊರಿಗೆ ತೆರಳುವವರ ಜೇಬಿಗೆ ಕತ್ತರಿ ಹಾಕುತ್ತಿದೆ. ಸರ್ಕಾರ ಕೂಡಲೇ ಹೆಚ್ಚುವರಿ ಬಸ್ ಬಿಡುವ ಜತೆಗೆ ಖಾಸಗಿ ಬಸ್ ಮಾಲೀಕರು ಸುಲಿಗೆಗೆ ಕಡಿವಾಣ ಹಾಕಿ, ಮುಂದೆ ರೀತಿ ಆಗದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ನವರಾತ್ರಿ 2022: ನವರಾತ್ರಿಯಲ್ಲಿ ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ

ಕೇವಲ ಭರವಸೆ ಬೇಡ ಕ್ರಮ ಕೈಗೊಳ್ಳಿ

ಹಬ್ಬದ ವೇಳೆ ಆಗೊಮ್ಮೆ ಈಗೊಮ್ಮೆ ಮಾತ್ರ ಸ್ಥಳಕ್ಕೆ ಬಂದು ಪರಿಶೀಲಿಸುವ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕಳೆದ ಗಣೇಶ ಚತುರ್ಥಿ ಸಂದರ್ಭದಲ್ಲೂ ಹೀಗೆಯೇ ಆಗಿತ್ತು. ಆಗ ಸಾರಿಗೆ ಸಚಿವ ಶ್ರೀರಾಮುಲು ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡುವ ಖಾಸಗಿ ಬಸ್ ಮಾಲೀಕರು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಸಚಿವರ ಮಾತು ಕೇವಲ ಭರವಸೆ ಆಗಿದ್ದರಿಂದಲೇ ಹಬ್ಬದ ಸನ್ನಿವೇಶಗಳಲ್ಲಿ ದುಪ್ಪಟ್ಟು ದರ ವಸೂಲಿ ಮುಂದುವರಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Dussehra festival season. Shock for passengers from private buses in Bengaluru. How much to charge? and Know more information here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X