DCM DK Shivakumar: ಬೆಂಗಳೂರು ಹೊರತಾಗಿ ಇತರೆಡೆ ಕೈಗಾರಿಕೆ ಸ್ಥಾಪನೆಗೆ ಆದ್ಯತೆ: ಡಿ ಕೆ ಶಿವಕುಮಾರ್‌

ಬೆಂಗಳೂರು, ಫೆಬ್ರವರಿ 11: ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದು, ರಾಜಧಾನಿ ಹೊರತಾಗಿ ಇತರ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಜಿಮ್ ಸಮಾವೇಶದಲ್ಲಿ ನೂತನ ಕೈಗಾರಿಕಾ ನೀತಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ಮುಟ್ಟಿದ್ದು, ನಗರದಲ್ಲಿ ವಾಹನಗಳ ಸಂಖ್ಯೆ 1.10 ಕೋಟಿಯಷ್ಟಾಗಿದೆ. ಬೆಂಗಳೂರಿನ ಮೇಲೆ ಹೊರೆ ತಪ್ಪಿಸಬೇಕು. ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಬೇಕು. ಬಂಡವಾಳ ಹೂಡಿಕೆದಾರರು ಬೆಂಗಳೂರಿನ ಹೊರತಾಗಿ ಇತರೆ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬಂದು ನಮಗೆ ಶಕ್ತಿ ತುಂಬಬೇಕು ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರ ತಂಡ ರಾಜ್ಯದಲ್ಲಿ ನೂತನ ಕೈಗಾರಿಕಾ ನೀತಿ ರೂಪಿಸಿದ್ದು, ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಪ್ರಕಟಿಸಿದ್ದಾರೆ. ಈ ನೀತಿಯ ಮೂಲಕ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Priority given to setting up industries in places other than Bangaluru DK Shivakumar

ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದ್ದು, ಇಡೀ ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬರಬೇಕು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿ, ಹೆಚ್ಚು ಅವಕಾಶ ಸೃಷ್ಟಿಸಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ತಿಳಿಸಿದರು.

ವಿಮಾನ ಸೇವೆ ಮತ್ತು ವಿಮಾನಗಳನ್ನು ದುರಸ್ತಿ ಮಾಡುವ ಕ್ಷೇತ್ರದಲ್ಲಿ ಭಾರತ ಮುಂದಿದೆ. ಆದರೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ತಯಾರಿಕೆ ಇನ್ನೂ‌ ಸ್ವಲ್ಪ ಹಿಂದೆ ಬಿದ್ದಿದೆ. ದೇಶವು ಬಳಸುವ ಹೆಚ್ಚಿನ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಇನ್ನೂ ಇತರ ರಾಷ್ಟ್ರಗಳಿಂದ ಖರೀದಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಾಣಿಜ್ಯ ಮತ್ತು ರಕ್ಷಣಾ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿರುವ ವಿಶ್ವದ ಏಕೈಕ ನಗರ ಬೆಂಗಳೂರು. ಈ ಕ್ಷೇತ್ರಕ್ಕೆ ಹೆಚ್ಚಿನ ಮಹಿಳೆಯರು ಕೊಡುಗೆ ನೀಡುತ್ತಿದ್ದಾರೆ. ಯು.ಎಸ್., ಫ್ರಾನ್ಸ್ ಮತ್ತು ರಷ್ಯಾದಂತಹ ದೇಶಗಳೊಂದಿಗೆ ಪಾಲುದಾರಿಕೆಗಳ ಮೂಲಕ ಭಾರತದ ಏರೋಸ್ಪೇಸ್ ಉದ್ಯಮವು ಬೆಳೆಯುತ್ತಿದೆ ಎಂದರು.

ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಈ ಏರ್ ಶೋ ಬಲಪಡಿಸುತ್ತಿದೆ. ಈ ಪ್ರದರ್ಶನವು ದೇಶಗಳು ಒಗ್ಗೂಡಲು, ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಎಲ್ಲರಿಗೂ ಪ್ರಯೋಜನವಾಗುವ ವಾತಾವರಣ ನಿರ್ಮಿಸಲು ಉತ್ತಮ ಅವಕಾಶ ನೀಡುತ್ತದೆ ಎಂದರು.

ಬೆಂಗಳೂರು ಏರ್ ಶೋ ಸಣ್ಣ ಕಾರ್ಯಕ್ರಮವಲ್ಲ. ಇದು ಬಾಹ್ಯಾಕಾಶದಲ್ಲಿ ಭಾರತದ ಶಕ್ತಿ, ಪ್ರಗತಿ ಮತ್ತು ನಾಯಕತ್ವದ ಸಂಕೇತವಾಗಿದೆ. ಬಾಹ್ಯಾಕಾಶ ಮತ್ತು ರಕ್ಷಣಾ ಹೂಡಿಕೆದಾರರು, ಉದ್ಯಮಿಗಳು ಮತ್ತು ವ್ಯಾಪಾರ ನಾಯಕರು ಕರ್ನಾಟಕವನ್ನು ಮೊದಲು ಆಯ್ಕೆ ಮಾಡಬೇಕು ಎಂದು ನಾನು ಕೋರುತ್ತೇನೆ" ಎಂದರು.

2025 ರ ಏರ್ ಶೋ ಎಲ್ಲರಿಗೂ ಯಶಸ್ವಿ ಮತ್ತು ಸ್ಪೂರ್ತಿದಾಯಕ ಅನುಭವವನ್ನು ನೀಡಲಿ. ಭಾರತದ ಶಕ್ತಿ ಪ್ರದರ್ಶನದ ಉದ್ಘಾಟನೆಯಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ. 1996 ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯ ತನಕ ಈ ಕಾರ್ಯಕ್ರಮ ಸಾಕಷ್ಟು ಎತ್ತರಕ್ಕೆ ಬೆಳೆದಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+