DD Hills: ಮಹಿಳೆ ಜೊತೆಗೆ ಕೆಟ್ಟದಾಗಿ ವರ್ತನೆ, ದೇವರಾಯನದುರ್ಗದ ಅರ್ಚಕರ ಮೇಲೆ ಹಲ್ಲೆ..Video Viral
ತುಮಕೂರು, ಆಗಸ್ಟ್ 24: ದೇವಸ್ಥಾನಕ್ಕೆ ಬಂದ ಮಹಿಳೆ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಒಬ್ಬರು ಮಹಿಳೆ ಮತ್ತು ಯುವಕರು ದೇವರಾಯನದುರ್ಗದ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇದು ಜರುಗಿ ನಾಲ್ಕು ದಿನಗಳಾದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರವಾಸಿತಾಣ ಹಾಗೂ ದೇವಸ್ಥಾನ ಪ್ರದೇಶವಾದ ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಹರಿದಾಡುತ್ತಿದೆ. ದೇಗುಲಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕುಂಕುಮ ಇಡುವ ವೇಳೆ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪವು ವಿಡಿಯೋದಲ್ಲಿ ಕೇಳಿಸುತ್ತದೆ.ಇಬ್ಬರು ಯುವಕರು ಹಾಗೂ ಮಹಿಳೆ ಕೈಯಿಂದ ಹಾಗೂ ಕೋಲಿನಿಂದ ಥಳಿಸಿದ್ದಾರೆ. ಅಲ್ಲಿಯೇ ಇದ್ದ ಪ್ರವಾಸಿಗರು, ಭಕ್ತರ ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗಿದೆ.

ಮಹಿಳೆಯ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನಲಾದ ಹಿರಿಯ ಅರ್ಚಕರನ್ನು ನಾಗಭೂಷಣಾಚಾರ್ಯ ಎಂದು ಗುರುತಿಸಲಾಗಿದೆ. ಪವಿತ್ರ ಸ್ಥಳದಲ್ಲೇ ಹೀಗಾದರೆ ಹೇಗೆ ಎಂದು ಕೆಲವರು ವಿಡಿಯೋ ನೋಡಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಇಂತಹ ಕೃತ್ಯಕ್ಕೆ ಅವರ ಮೇಲೆ ಈ ರೀತಿಯ ಹಲ್ಲೆ ಸರಿಯಲ್ಲ ಎಂದು ಕೆಲವು ಘಟನೆಗೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಯುವಕರಿಂದ ಏಟು ತಿಂದರೆ ಪ್ರತಿರೋಧಿಸದೇ ಇದ್ದ ಅರ್ಚಕರನ್ನು ನೋಡಿದರೆ ಏನೋ ತಪ್ಪು ಮಾಡಿದ್ದಾರೆ ಅಂತಲೂ ಅನ್ನಿಸುತ್ತಿದೆ. ಈ ಕುರಿತು ಸ್ಪಷ್ಟ ಹಾಗೂ ಅಧಿಕೃತ ಮಾಹಿತಿ ದೊರೆಯಬೇಕಿದೆ.
वायरल वीडियो में दावा किया जा रहा है कि "पूजा के दौरान DD Hills मंदिर के पुजारी ने महिला को गलत तरीके से छुआ" , "फिर लोगों ने की पिटाई"
— Mahima Yadav (@SinghKinngSP) August 24, 2025
कर्नाटक के तुमकुरू जिले की घटना बताई जा रही है।
अगर सत्य है तो कानूनी कार्रवाई करनी चाहिए थी हिंसा ठीक नहीं है।pic.twitter.com/WjT9LPXv3M
ದೇವರಾಯನ ದುರ್ಗದ ಕುರಿತು..
ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಗಿರಿಧಾಮ ಹಾಗೂ ದೇವಸ್ಥಾನಗಳಲ್ಲಿ ದೇವರಾಯನದುರ್ಗವು ಒಂದಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ, ಐತಿಹಾಸಿಕ ದೇವಾಲಯ ವೀಕ್ಷಣೆಗೆ ಪ್ರವಾಸಿಗರು ಬರುತ್ತಿರುತ್ತಾರೆ. ಟ್ರೆಕ್ಕಿಂಗ್ ಮಾಡುವವರಿಗೆ ಇದೊಂದು ಇಷ್ಟದ ತಾಣವಾಗಿದೆ. ದೇವರಾಯನದುರ್ಗ ತುಮಕೂರಿನಿಂದ ಕೇವಲ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ.












Click it and Unblock the Notifications