ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ಹುಟ್ಟೂರಲ್ಲಿ ಪ್ರವೀಣ್ ಪಾರ್ಥಿವ ಶರೀರ ಮೆರವಣಿಗೆಗೆ ಸಿದ್ಧತೆ

|
Google Oneindia Kannada News

ಬೆಂಗಳೂರು ಜುಲೈ 27: ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಬೆಳ್ಳಾರೆ ಸಿದ್ಧತೆಗಳು ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರ ಹೊತ್ತೆ ವಾಹನ ಬೆಳ್ಳಾರೆಯ ಪ್ರಮುಖ್ಯ ರಸ್ತೆಗಳಲ್ಲಿ ಸಂಚರಿಸಲಿದೆ.

ಮರಣೋತ್ತರ ಪರೀಕ್ಷೆ ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ ಮೂಲಕ ಪ್ರವೀಣ್ ಮೃತದೇಹವನ್ನು ಹುಟ್ಟೂರು ಬೆಳ್ಳಾರೆಗೆ ಕರೆತರಲಾಗುತ್ತಿದೆ. ಹುಟ್ಟೂರಲ್ಲಿ ಅಂತಿಮಯಾತ್ರೆ ನಡೆಸಲು ಹಿಂದುಪರ ಸಂಘಟನೆಗಳು, ಹಿಂದು ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಬೆಳ್ಳಾರೆಗೆ ಬಂದ ತಕ್ಷಣವೇ ಈಗಾಗಲೇ ಸಿದ್ಧ ಮಾಡಿರುವ ವಾಹನದ ಮೂಲಕ ಇಲ್ಲಿನ ಮುಖ್ಯರಸ್ತೆಗಳಲ್ಲಿ, ಬೀದಿಗಳಲ್ಲಿ ಪ್ರವೀಣ್ ಮೃತದೇಹದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ವೇಳೆ ಪಾರ್ಥಿವ ಶರೀರದ ಮೇಲೆ ಪುಷ್ಪವೃಷ್ಟಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಸ್ತೆ ಹಿಡಿಸದಷ್ಟು ಜನರು ಬೆಳ್ಳಾರೆಯತ್ತ ಆಗಮಿಸುತ್ತಿರುವುದು ಕಂಡು ಬಂದಿದೆ.
ಪುತ್ತೂರಿನಿಂದ ಬೆಳ್ಳಾರೆಗೆ ಪ್ರವೀಣ ಮೃತ ದೇಹ ತರುವ ಮಧ್ಯವೇ ಸಾರ್ವಜನಿಕರು ಅಂತಿಮ ದರ್ಶನ ಪಡೆದಿದ್ದಾರೆ. ಪಾರ್ಥಿವ ಶರೀರ ಹೊತ್ತು ತಂದ ಆಂಬುಲೆನ್ಸ್ ನಿಲ್ಲಿಸಿ ಅಂತಿಮ ಸಲ್ಲಿಸಿದ್ದ ಸಹ ಹಲವು ಕಡೆ ಕಂಡು ಬಂದಿದೆ.

ಈಗಾಗಲೇ ಪುತ್ತೂರು, ಸುಳ್ಳ್ಯ, ಕಡಬ ಪಟ್ಟಣಗಳು ಸ್ವಯಂ ಘೋಷಿತ ಬಂದ್ ಆಗಿವೆ. ಬಿಜೆಪಿಯ ಕಾರ್ಯಾಕಾರಿಣಿ ಸದಸ್ಯರು ಆಗಿದ್ದ ಪ್ರವೀಣ್ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ಹೀಗಾಗಿ ಕೆಲವು ರಾಜಕೀಯ ನಾಯರಕು, ಗಣ್ಯರು, ಹಿಂದುಪರ ಸಂಘಟನೆಗಳ ಮುಖಂಡು ಸೇರಿಂತೆ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

Preparations for Praveen Nettar body procession in his native Bellare

ಕೊಲೆ ಕೃತ್ಯ ನಡೆಯುತ್ತಿದ್ದಂತೆ ಹಿಂದು ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದರು. ಮನವಿಯಂತೆ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಕೆ.ವಿ. ಪ್ರವೀಣ್ ಅವರು ಮಾತುಕತೆ ನಡೆಸಿದರು. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

English summary
Praveen Nettar Murder : Preparation for Praveen Netta body procession in the Bellare village at Dakshina Kannada, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X