ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘವೇಶ್ವರ ಶ್ರೀ ಬೆಂಬಲಕ್ಕೆ ನಿಂತ ರಾಮಕಥಾ ಕಲಾವಿದರು

|
Google Oneindia Kannada News

ಬೆಂಗಳೂರು, ಅ. 20 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಸ್ವಾಮೀಜಿಗಳ ವರ್ಚಸ್ಸಿಗೆ ಮಸಿ ಬಳಿಯಲು ಇಂತಹ ಷಡ್ಯಂತ್ರ ರೂಪಿಸಿ ಆರೋಪ ಮಾಡುತ್ತಿದ್ದಾರೆ ಎಂದು ರಾಮಕಥಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು ಹೇಳಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ರಾಮಕಥಾದಲ್ಲಿ ಪಾಲ್ಗೊಳ್ಳುವ ಪಂಡಿತ್ ಪರಮೇಶ್ವರ್ ಹೆಗಡೆ, ವಸುಂಧರ ಶರ್ಮ, ಸಾಗರ್, ಗಜಾನನ ಶರ್ಮ, ಶಶಿಧರ್ ಕೋಟೆ, ಕಾಂಚನ ಶ್ರೀ, ರಾಘವೇಂದ್ರ ಹೆಗೆಡೆ, ನಿರ್ವಳ್ಳಿ ಗಣಪತಿ ಮುಂತಾದ ಕಲಾವಿದರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. [ಆರು ತಾಸು ಸಿಐಡಿಯಿಂದ ರಾಘವೇಶ್ವರ ಶ್ರೀಗಳ ವಿಚಾರಣೆ]

Ramachandrapura Math

ಗಾಯಕಿ ಪ್ರೇಮಲತಾ ದಿವಾಕರ್ ಅವರು, ವ್ಯವಸ್ಥಿತ ಷಡ್ಯಂತ್ರ ರೂಪಿಸಿ ದೂರು ಕೊಟ್ಟಿರುವುದರಿಂದ ರಾಮಕಥಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕಲಾವಿದರ ಬಳಗಕ್ಕೆ ತೀವ್ರ ಮುಜುಗರ ಉಂಟಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಧಾರ್ಮಿಕ ಆಧ್ಯಾತ್ಮಿಕ ಸಂಚಲನ ಮೂಡಿಸುತ್ತಿರುವ ಕಾರ್ಯಕ್ರಮದ ಮೇಲೆ ಪ್ರೇಮಲತಾ ಅವರ ಆರೋಪದಿಂದ ಗದಾ ಪ್ರಹಾರವಾಗಿದೆ ಎಂದು ಹೇಳಿದರು. [ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು]

ರಾಮಕಥೆಯ ಪ್ರಮುಖ ಕಲಾವಿದರು, ತಂತ್ರಜ್ಞರು ಒಟ್ಟಿಗೆ ರಾಘವೇಶ್ವರ ಶ್ರೀಗಳೊಂದಿಗೆ ಚರ್ಚಿಸುತ್ತಿದ್ದೆವು. ಶ್ರೀಗಳು ಪ್ರೇಮಲತಾ ಅವರು ಮಾಡಿರುವ ಆರೋಪದಂತೆ ನಡೆದುಕೊಂಡಿರಲು ಸಾಧ್ಯವಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರೇಮಲತಾ ಅವರು ಈ ರೀತಿಯ ಆರೋಪ ಮಾಡಿಬಹುದು ಎಂದು ಕಲಾವಿದರು ತಿಳಿಸಿದರು. [ಟೀಕಾಕಾರರಿಗೆ ತಕ್ಕ ಉತ್ತರ ಕೊಟ್ಟ ರಾಘವೇಶ್ವರ ಶ್ರೀ]

ಶ್ರೀಗಳು ನಮಗೂ ರಾಮಪ್ರಸಾದವನ್ನು ಕೊಡುತ್ತಿದ್ದರು. ರಾಮಕಥಾ ಕಾರ್ಯಕ್ರಮದಲ್ಲಿ ಹಲವಾರು ಮಹಿಳಾ ಕಲಾವಿದರು ಇದ್ದಾರೆ. ಆದ್ದರಿಂದ ಪ್ರೇಮಲತಾ ಅವರು ಆಪಾದಿಸಿರುವಂತಹ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಕಲಾವಿದರು ಸ್ವಾಮೀಜಿಗಳಿಗೆ ಬೆಂಬಲ ನೀಡಿದರು.

ಅಂದಹಾಗೆ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಕಚೇರಿಯಲ್ಲಿ ರಾಘವೇಶ್ವರ ಶ್ರೀ ಮತ್ತು ಪ್ರೇಮಲತಾ ದಿವಾಕರ್ ಅವರ ವಿಚಾರಣೆ ನಡೆಯಿತು. ದೀಪಾವಳಿ ನಂತರ ಪುನಃ ವಿಚಾರಣೆಗೆ ಹಾಜರಾಗುವಂತೆ ಶ್ರೀಗಳಿಗೆ ಸಿಐಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

English summary
Sri Ramachandrapura Mutt Ramakatha artists denied allegation of sexual abuse complaint by singer Premalatha Divakar against Raghaveshwara Bharathi Swamiji. Ramakatha artists addressed press conference in Bangalore on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X