ಸೋತರೂ ಯಡಿಯೂರಪ್ಪ ಮೇಲೆ ಪ್ರತಾಪ್ ಸಿಂಹ ವಿಶ್ವಾಸ

Posted By:
Subscribe to Oneindia Kannada

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕಂಡಿರುವ ಸೋಲನ್ನು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು ವಿಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಫೇಸ್ ಬುಕ್ಕಿನಲ್ಲಿ ಪ್ರಕಟವಾದ ಈ ಪೋಸ್ಟಿಗೆ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಇಂಟ್ರೆಸ್ಟಿಂಗ್ ಆದ ಕಾಮೆಂಟುಗಳನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ.

***
ಒಂದು ಸೋಲಿಗೋಸ್ಕರ ಆಳಿಗೊಂದರಂತೆ ಕಲ್ಲು ಹೊಡೆಯುವ ಪ್ರವೃತ್ತಿ ಒಳ್ಳೆಯದಲ್ಲ. ಸತತ ಸೋಲುಗಳನ್ನು ಹಾಗು ಸ್ವಂತ ಸೋಲನ್ನೂ ಜೀರ್ಣಿಸಿಕೊಂಡು ಇದೆ ಯಡಿಯೂರಪ್ಪನವರು 2008ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.

Pratap Simha reposes confidence in Yeddyurappa

2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ನೆಲಕಚ್ಚಿದಾಗಲೂ ಬಿ.ಎಸ್.ವೈ. ಕರ್ನಾಟಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 19 ಎಂಪಿ ಸೀಟ್ ಗೆಲ್ಲಿಸಿದ್ದರು ಎಂಬುದನ್ನು ಮರೆತು ಮಾತನಾಡಬೇಡಿ.

ಈ ಸೋಲನ್ನು ಪಾಠವಾಗಿ ಖಂಡಿತ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷ ಇದೆ ಏಪ್ರಿಲ್ನಲ್ಲಿ ನಿಮ್ಮ ಫೇಸ್ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತದೆ ನಿಮ್ಮ ಆಶೀರ್ವಾದದೊಂದಿಗೆಯೇ. ವಿಶ್ವಾಸವಿಡಿ. ಸೋತ ಈ ಕ್ಷಣದಲ್ಲಿ ನಮಗೆ ಆತ್ಮವಿಶ್ವಾಸ ತುಂಬಿ.

***
ಪ್ರತಿಕ್ರಿಯೆಗಳು

ನಮ್ಮಲ್ಲೇ ಆತ್ಮ ವಿಶ್ವಾಸ ಇಲ್ಲ, ಇನ್ನು ನಿಮಗೆ ಹೇಗೆ ತುಂಬೋದು? 2008ರಲ್ಲಿ ಯಡ್ಯೂರಪ್ಪನವರ ವರ್ಚಸ್ಸು ಹೇಗಿತ್ತು (ಜೊತೆಗೆ ಕುಮಾರಸ್ವಾಮಿಯಿಂದಾದ ಅನ್ಯಾಯದ ವಿರುದ್ಧದ ಅನುಕಂಪ), ಇವತ್ತು ಹೇಗಿದೆ? ರಾಜ್ಯ ಸರ್ಕಾರದಿಂದ ಅಷ್ಟೊಂದು ಅನಾಚಾರಗಳು ನಡೆಯುತ್ತಿದ್ದರೂ ವಿರೋಧ ಪಕ್ಷವಾಗಿ ಬಿಜೆಪಿ ಮಾಡಿದ್ದೇನು? ಜಾಣ ನಿದ್ದೆ!

ಕೇರಳದ ರೀತಿಯಲ್ಲಿ ಹಾಡ ಹಗಲಲ್ಲೇ ಪಕ್ಷದ ಕಾರ್ಯಕರ್ತರ ಕೊಲೆ ನಡೆಯುತ್ತಿದ್ದರೂ, ನಿಮ್ಮನ್ನು ಹೊರತುಪಡಿಸಿ ಇನ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಮೋದಿ ಹೆಸರೊಂದೇ ಸಾಕು 150 ಸ್ಥಾನಗಳನ್ನು ಗೆಲ್ಲಲು ಅಂತ ಇನ್ನೂ ನಂಬಿದ್ದರೆ ದೇವರೇ ಕಾಪಾಡಬೇಕು.

ಮನೋಜ್ ಕೆ ಭಗವತ್

Untill you people make changes in Karnataka BJP strategies and senior leaders clashes. People wont get confidence and these results will continue.

ವಿನಯ್ ಯೆಲಿಗಾರ್

ಇನ್ನೂ ಎಷ್ಟು ಅಂತ ಯಡಿಯೂರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ತೀರಿ ಪ್ರತಾಪ್ ಸಿಂಹ ಅವರೇ? ಮೊದಲು ಪಕ್ಷದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಅವರ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮಾಡಿ, ನಿಮ್ಮಂಥ ಯುವ ರಾಜಕಾರಣಿಗಳಿಗೆ ಪ್ರಾಮುಖ್ಯತೆ ಕೊಡಿ.

ಯಡಿಯೂರಪ್ಪ ಅವರಿಗೆ ಈಗಿನ ಯುವಸಮುದಾಯವನ್ನು ಸೆಳೆಯುವ ಶಕ್ತಿ ಇಲ್ಲಾ. ಮುಂದಿನ ಚುನಾವಣೆಯಲ್ಲಿ ವಿದ್ಯಾವಂತ ಯುವಸಮುದಾಯದ ಮತಗಳೇ ನಿರ್ಣಾಯಕ ಎನ್ನುವುದು ನೆನಪಿರಲಿ! ನಾಲಿಗೆಯ ಮೇಲೆ ಹಿಡಿತವಿಲ್ಲದ ಈಶ್ವರಪ್ಪ ಅವರನ್ನು ಮೊದಲು ಪಕ್ಷದಿಂದ ತೆಗೆದುಹಾಕಿ.

ಬಿಜೆಪಿ ಸಖ್ಯದಿಂದ ದೂರ ಸರಿದಿರುವ ಹಿಂದೂಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮಂಥ ಯುವ ನೇತಾರರ ನೇತೃತ್ವದಲ್ಲಿ ಮುಂದಿನ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿ, ಚುನಾವಣೆಯನ್ನು ಎದುರಿಸಿ ಬಿಜೆಪಿಗೆ ಗೆಲುವು ಸಿಕ್ಕೇ ಸಿಗುತ್ತದೆ.

ಮಹೇಶ್ ನಾಯಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru-Madikeri MP Pratap Simha has reposed confidence in Yeddyurappa, that he will bounce back in the next assembly election. He is of the opinion that his Facebook page will be filled with congratulatory messages.
Please Wait while comments are loading...