ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೀವೇನು ಪೊಲೀಸರಾ?' ಶ್ರೀರಾಮ ಸೇನೆಗೆ ಸುಪ್ರೀಂ ಪ್ರಶ್ನೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್. 31: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಗೋವಾ ಪ್ರವೇಶ ಮಾಡದಂತೆ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಗೋವಾ ಪ್ರವೇಶಕ್ಕೆ ವಿಧಿಸಿದ್ದ ನಿರ್ಭಂಧ ಪ್ರಶ್ನಿಸಿ ಮುತಾಲಿಕ್ ಸುಪ್ರೀಂ ಮೆಟ್ಟಿಲೇರಿದ್ದರು. ಗೋವಾ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಮುತಾಲಿಕ್ ಅವರಿಗೆ ಮತ್ತೆ ಹಿನ್ನಡೆಯಾಗಿದೆ.

karnataka

ನೈತಿಕ ಪೊಲೀಸ್ ಗಿರಿ ಯಾಕೆ?
ಅರ್ಜಿ ಸಲ್ಲಿಸಿದ ಮುತಾಲಿಕ್ ಅವರನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ. ನೀವು ಏನು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೇ? ಎಂದು ಪ್ರಶ್ನೆ ಮಾಡಿದೆ.

ಗೋವಾ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಮುಂದಿನ ಆರು ತಿಂಗಳ ಕಾಲ ಈ ಬಗ್ಗೆ ಏನೂ ಕೇಳಬೇಡಿ. ನೀವೇನು ಪೊಲೀಸ್ ಕೆಲಸ ಮಾಡುತ್ತಿದ್ದೀರಾ? ಮಂಗಳೂರಿನಲ್ಲಿ ನೀವು ಮಾಡುತ್ತಿರುವ ಕೃತ್ಯಗಳೇನು? ಎಂದು ಪ್ರಶ್ನೆ ಮಾಡಿದೆ.

ನನ್ನ ಮೇಲೆ ವಿಧಿಸಿರುವ ನಿಷೇಧ ಕಾನೂನು ಬಾಹಿರವಾಗಿದ್ದು ಇದನ್ನು ಕೂಡಲೇ ತೆರವು ಮಾಡಬೇಕು ಎಂದು ಒತ್ತಾಯಿಸಿ ಮುತಾಲಿಕ್ ಸುಪ್ರೀಂ ಗೆ ಮನವಿ ಸಲ್ಲಿಸಿದ್ದರು. ಮುಂದಿನ ಆರು ತಿಂಗಳ ಕಾಲವಂತೂ ಮುತಾಲಿಕ್ ಅವರಿಗೆ ಗೋವಾ ಪ್ರವೇಶ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ಖಡಾಖಂಡಿತವಾಗಿ ಹೇಳಿದ್ದಾರೆ.

English summary
The Supreme Court has upheld the ban imposed on Shri Ram Sene Chief Pramod Muthalik from entering Goa. Muthalik had moved the Supreme Court after he was prevented from entering Goa after the administration had cited law and order problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X