ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಳಿತ ಶುರು ಮಾಡಿ: ಸಮ್ಮಿಶ್ರ ಸರ್ಕಾರಕ್ಕೆ ಪ್ರಕಾಶ್ ರೈ ಮನವಿ

|
Google Oneindia Kannada News

Recommended Video

ಕಾಂಗ್ರೆಸ್ - ಜೆಡಿಎಸ್ ಗೆ ಆಡಳಿತ ಶುರು ಮಾಡುವಂತೆ ಟ್ವಿಟ್ಟರ್ ನಲ್ಲಿ ಪ್ರಕಾಶ್ ರೈ ಮನವಿ | Oneindia Kannada

ಬೆಂಗಳೂರು, ಮೇ 29: ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಬಿಜೆಪಿಯ ವಿರುದ್ಧ ನಿರಂತರ ಪ್ರಶ್ನೆಗಳನ್ನು ಕೇಳುತ್ತಿರುವ ನಟ ಪ್ರಕಾಶ್ ರೈ, ರಾಜ್ಯದಲ್ಲಿ ಸರ್ಕಾರದ ಆಡಳಿತ ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ಹರಿಹಾಯ್ದಿದ್ದ ಪ್ರಕಾಶ್ ರೈ, ಬಳಿಕವೂ ಅದರ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದರು.

ಕರ್ನಾಟಕ ಕೇಸರಿಯಾಗಿಲ್ಲ, ವರ್ಣರಂಜಿತವಾಗಿದೆ: ಪ್ರಕಾಶ್ ರೈಕರ್ನಾಟಕ ಕೇಸರಿಯಾಗಿಲ್ಲ, ವರ್ಣರಂಜಿತವಾಗಿದೆ: ಪ್ರಕಾಶ್ ರೈ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯ ಕಸರತ್ತಿಗೆ ಸಂಬಂಧಿಸಿದಂತೆ ಪ್ರಕಾಶ್ ರೈ ಇದುವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಜೆಡಿಎಸ್ ಮತ್ತು ಕಾಂಗ್ರೆಸ್... ಒಂದು ವಾರವಾಯಿತು. ಖಾತೆ ಹಂಚಿಕೆಯನ್ನು ಬೇಗ ಅಂತಿಮಗೊಳಿಸಿ ಸಚಿವ ಸಂಪುಟವನ್ನು ಪ್ರಕಟಿಸುತ್ತೀರಾ? ನಾಗರಿಕರಾದ ನಾವು ಸರ್ಕಾರವನ್ನು ನೋಡಲು ಬಯಸಿದ್ದೇವೆ. ಆಡಳಿತ ಶುರು ಮಾಡಿ ಎಂದು ರೈ ಅವರು #justasking ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

prakash rai tweet jds congress to start governing

ರಾಜಕೀಯಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಕಡಿಮೆ ಮಾಡಿರುವ ಪ್ರಕಾಶ್ ರೈ, ಈಗ ಸಾಮಾಜಿಕ ಸಮಸ್ಯೆಗಳತ್ತ ಲಕ್ಷ್ಯ ಹರಿಸಿದ್ದಾರೆ. ಪ್ರಕಾಶ್ ರಾಜ್ ಫೌಂಡೇಷನ್‌ ಮೂಲಕ ಜನರನ್ನು ತಲುಪಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಸರ್ಕಾರದ ಮೂಲಕ ಗಮನ ಸೆಳೆಯುವ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ.

English summary
Actor Prakash Rai requested the JDS-Congress coalination government to finalise portfolios and announce the cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X