ಪ್ರಜ್ವಲ್‌ ರೇವಣ್ಣನ ಮಗ ಅಲ್ಲ, ನನ್ನ ಮಗ: ನಾನು ಅಷ್ಟು ಬೇಗ ಸಾಯಲ್ಲ ಎಂದ ಕುಮಾರಸ್ವಾಮಿ

ಹಾಸನ, ಮಾರ್ಚ್‌ 13: ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್‌ ಗೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಹಾಸನ ಅಭ್ಯರ್ಥಿಯನ್ನಾಗಿ ಪ್ರಜ್ವಲ್‌ ರೇವಣ್ಣ ಅವರನ್ನ ಘೋಷಿಸಿದ್ದು, ದೇವೇಗೌಡ್ರ ಕುಟುಂಬ ಈಗಾಗಲೇ ಚುನಾವಣಾ ಪ್ರಚಾರವನ್ನ ಆರಂಭಿಸಿದೆ.

ಈಗಾಗಲೇ ಹಾಸನ ಜೆಡಿಎಸ್‌ ನಾಯಕರ ಜೊತೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡ್ರು ನಿರಂತರ ಸಭೆಗಳನ್ನ ನಡೆಸಿದ್ರೆ, ಇತ್ತ ರೇವಣ್ಣ ಅವರ ದಂಪತಿಗಳು ಮನೆ ಮನೆ ಪ್ರಚಾರವನ್ನ ಕೈಗೊಂಡಿದ್ದು, ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್‌ ಡಿ ಕುಮಾರಸ್ವಾಮಿ ಅವರು ಸಹ ಸ್ಥಳೀಯ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ.

Prajwal is Not Revanna s Son He s Like My Own Son HD Kumaraswamy Asserts I m Not Dying Anytime Soon

ಹಾಸನದ ಜೆಡಿಎಸ್ ಕಾರ್ಯಕರ್ತ ರ ಸಭೆಯಲ್ಲಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಇವನು ರೇವಣ್ಣನ ಮಗ ಅಲ್ಲಾ ನನ್ನ ಮಗ. ಬಹಳಷ್ಟು ಬದಲಾವಣೆ ತರ್ತಿನಿ, ಅವನೂ ಬದಲಾಗುತ್ತಾನೆ
ಎಲ್ಲಾ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಅವರ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ರೇವಣ್ಣ ಅವರ ಅಭಿವೃದ್ಧಿ ಕೆಲಸದ ಮುಂದೆ ನಾನು ಇಲ್ಲ. ಆದರೆ ಸ್ವಲ್ಪ ಮುಂಗೋಪ ಬೈಯ್ತಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಅವನನ್ನು ಕ್ಷಮಿಸಿಬಿಡಿ, ನಮ್ಮಲ್ಲಿ ತಪ್ಪುಗಳಾಗಿರಬಹುದು ಆದರೆ ತಿದ್ದುಕೊಳ್ಳಲು ಅವಕಾಶ ಕೊಡಿ. ಜನರು ಕ್ಷಮಿಸುತ್ತಾರೆ ಅದರಲ್ಲಿ ನಂಬಿಕೆ‌ ಇದೆ.

ಈ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ, ದಯವಿಟ್ಟು ಪಕ್ಷ ಉಳಿಸಿಕೊಡಿ, ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ. ನಾನು ಆಸ್ತಿ ಸಂಪಾದನೆ ಮಾಡಿಲ್ಲ ನಿಮ್ಮಂತಹ ಲಕ್ಷಾಂತರ ಜನರನ್ನು ಸಂಪಾದಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಭಾವುಕರಾದರು.

ನನ್ನ ರೇವಣ್ಣ ಅವರಲ್ಲಿ ಭಿನ್ನಾಭಿಪ್ರಾಯ ಇದ್ದವು. ನಾನು ಕುಟುಂಬ ಒಡೆಯಲು ಬಿಡಲಿಲ್ಲ, ಕಠಿಣ ನಿರ್ಧಾರ ಮಾಡಿ ಸ್ವರೂಪ್‌ಗೆ ಟಿಕೆಟ್ ಕೊಟ್ಟೆ. ರೇವಣ್ಣ ಅವರ ಅಭಿವೃದ್ಧಿ ಕೆಲಸದ ಮುಂದೆ ನಾನು ಇಲ್ಲ, ಆದರೆ ಸ್ವಲ್ಪ ಮುಂಗೋಪ ಬೈಯ್ತಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಅವನನ್ನು ಕ್ಷಮಿಸಿಬಿಡಿ. ಈ ಬಾರಿಯ ಚುನಾವಣೆಗೆ ನಾನು ನಿಲ್ಲುತ್ತಿಲ್ಲ, ಮಂಡ್ಯದಲ್ಲಿ ಅರ್ಜಿ ಹಾಕಿ ಹೋಗು ಅಂತಾರೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ನಿಲ್ಲಲ್ಲು ಒತ್ತಾಯ ಮಾಡುತ್ತಾರೆ. ಪೇಪರ್ ತೆಗೆಯಿರಿ ಯಾ‌ರ್ಯಾರ ಕುಟುಂಬದವರು ಎಷ್ಟೆಷ್ಟು ಜನ ರಾಜಕೀಯದಲ್ಲಿದ್ದಾರೆ. ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆ ಆಗುತ್ತದೆ ಎಂದು ವಿರೋಧಿಗಳ ವಿರುದ್ಧ ಕಿಡಿಕಾರಿದರು.

ಡಾ.ಮಂಜುನಾಥ್ ಅಭ್ಯರ್ಥಿ ಮಾಡಲು ತೀರ್ಮಾನ ಮಾಡಿರಲಿಲ್ಲ. ಹದಿನೇಳು ವರ್ಷ ಅವರ ಸೇವೆ ನೋಡಿ ಅವರೇ ಅಭ್ಯರ್ಥಿ ಆಗಬೇಕು ಅಂತ ಮಾಧ್ಯಮದವರೇ ಶುರು ಮಾಡಿದ್ರು. ಮಾಧ್ಯಮಗಳಲ್ಲೇ ಡಾ.ಮಂಜುನಾಥ್ ರಾಜಕೀಯಕ್ಕೆ ಬರಬೇಕು ಎಂದು ಪ್ರಚಾರ ಮಾಡಿದ್ರು, ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಗೂ ಆ ರೀತಿಯ ಪ್ರಚಾರ ಕೊಡಲಿಲ್ಲ, ಡಾ.ಮಂಜುನಾಥ್ ಈ ಜಿಲ್ಲೆಯ ಮಣ್ಣಿನ ಮಗ. ಬಿಜೆಪಿ ಹೈಕಮಾಂಡ್ ನಿಮ್ಮ ಭಾವ ಅವರನ್ನು ಒಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದು ಹೇಳಿದರು.

ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದ್ದೀರಿ. ಆದರೂ ಅವರು ಹಾಸನ ಮರೆಯಲಿಲ್ಲ, ಅವರು ಜೀವನದಲ್ಲಿ ಎಂದು ಜಿಲ್ಲೆ ಮರೆಯಲಿಲ್ಲ. ಅವರ ಮಗನಾಗಿ ರೇವಣ್ಣ ದೇವೇಗೌಡರು ಮಾಡಲಾಗದ ಹಲವಾರು ಕೆಲಸವನ್ನು ಶ್ರಮ ಹಾಕಿದಾರೆ. ದೇವಸ್ಥಾನ, ರಸ್ತೆಗಳು ಎಲ್ಲವೂ ರೇವಣ್ಣನ ಕೆಲಸ ಹೇಳುತ್ತಿವೆ. ಇಷ್ಟೆಲ್ಲ ಮಾಡಿ ಉಪಯೋಗ ಏನು? ನಮ್ಮಲ್ಲಿರೊ ಸಣ್ಣ ಪುಟ್ಟ ತಪ್ಪು ಆಕ್ರೋಶ ಆಗಿ ತಿರುಗಿದರೆ ಹೇಗೆ ? ನಾವು ಸ್ವಾರ್ಥ ಕ್ಕೆ ಬದುಕಿಲ್ಲ, ಅಧಿಕಾರ ಸಿಕ್ಕಾಗ ನಾಡು ಕಟ್ಟಲು ಕೆಲಸ ಮಾಡಿದ್ದೇವೆ

2018 ರಲ್ಲಿ ನಾನೇ ಸಿಎಂ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಅಯ್ತು. ನಾವು ಬೇಡಾ ಎಂದರು ಹೊಂದಾಣಿಕೆಯಾಯ್ತು. ಈಗ ಸಿಎಂ ಮಂಡ್ಯ ಜಿಲ್ಲೆಯ ಚುನಾವಣೆ ಬಗ್ಗೆ ಸತ್ಯ ಹೇಳಿದಾರೆ. ಅಲ್ಲಿನ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತ ರು ಕಾರಣ ಎಂದು ಸತ್ಯ ಹೇಳಿದಾರೆ, ನಾನು ಮಗನಿಗೆ ಬೇಡಾ ಎಂದು ಹೇಳಿದ್ದೆ. ನಾವು ಅಲ್ಲಿ ಮೂರು ಸಚಿವರು ಶಾಸಕರು ಇದ್ದರೂ ಗೆಲ್ಲಲು ಆಗಲಿಲ್ಲ. ನಾವು ತಪ್ಪು ಮಾಡಿದೆವು ಎಂದು ಸೋಲಿಸಿದ್ರಾ ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+