Prajwal Case: ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ: ಕಾರ್ತಿಕ್‌ಗೌಡ, ನವೀನ್‌ಗೌಡರ ರಕ್ಷಣೆ ಗೆ ನಿಂತಿದ್ದೀಯಾ ಸರ್ಕಾರ?
ಬೆಂಗಳೂರು, ಮೇ 13: ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಮುಖ ರೂವಾರಿಗಳು ಎನ್ನಲಾದ ಕಾರ್ತಿಕ್ ಗೌಡ ಹಾಗೂ ನವೀನ್ ಗೌಡ ರಕ್ಷಣೆಗೆ ಸರ್ಕಾರ ಮುಂದಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆದರೆ, ಪ್ರಕರಣ ಸಂಬಂಧ ಯಾರೆಲ್ಲ ಬಂಧನಕ್ಕೊಳಗಾಗಿದ್ದಾರೆಯೋ? ಯಾರ ವಿರುದ್ಧ ಎಲ್ಲ ದೂರು ದಾಖಲಾಗಿದೆಯೋ ಆ ವಿವರಗಳನ್ನು ನೋಡಿದರೆ ಎಸ್ಐಟಿ (SIT) ಮೇಲೆ ಸಾಕಷ್ಟು ಅನುಮಾನಗಳು ಮೂಡುವಂತಾಗಿದೆ. ಕಾಂಗ್ರೆಸ್ ನಾಯಕರು, ಮುಖಂಡರ ಜೊತೆ ಗುರುತಿಸಿಕೊಂಡ ನಾಲ್ವರ ವಿರುದ್ಧ ಕ್ರಮ ಆಗದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಇತ್ತ ಏಪ್ರಿಲ್ 26 ರಂದು ಮತದಾನ ಮಾಡಿದ ಬಳಿಕ ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರಿಸಿಕೊಂಡಿದ್ರೆ, ಇತ್ತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನ ಬಂಧಿಸಲಾಗಿದೆ. ಇತ್ತ ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಕುರಿತು ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡದ ಮೇಲೆ ಸರ್ಕಾರ ಹಾಗೂ ಎಸ್ಐಟಿ ಕ್ರಮ ಕೈಗೊಳ್ಳುತ್ತಿವೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಪ್ರಕರಣದಲ್ಲಿ ವಿಡಿಯೋ ಬಹಿರಂಗಪಡಿಸಿದ ಆರೋಪದಲ್ಲಿ ಕೇಸ್ ದಾಖಲಾಗಿದ್ದರೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳದೇ ಇರುವುದು ಸಾಕಷ್ಟು ಅನುಮಾನವನ್ನ ಹುಟ್ಟಿಸಿವೆ.
ಇತ್ತ ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನನೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿಸಲಾಗಿದ್ದು, ವಿಡಿಯೋ ಹಂಚಿಕೆ ಮಾಡಿದ್ದಾರೆಂಬ ಆರೋಪದಡಿ ಬಿಜೆಪಿಯ ಚೇತನ್, ಲಿಖಿತ್ ಅವರನ್ನೂ ಎಸ್ಐಟಿ ಬಂಧಿಸಿದೆ. ಇತ್ತ ಕಾರ್ತಿಕ್, ನವೀನ್ ಗೌಡ, ಪುಟ್ಟರಾಜ್ ಅಲಿಯಾಸ್ ಪುಟ್ಟಿ, ಚೇತನ್ ಬಂಧನ ಆಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು, ಸರ್ಕಾರ ಬೆಂಬಲಕ್ಕೆ ನಿಂತಿದಿಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣದ ಕುರಿತು ನವೀನ್ ಗೌಡ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ ಮಂಜುಗೆ ಕೊಟ್ಟಿದ್ದೆ. ಹೆಚ್ಡಿ ಕುಮಾರಸ್ವಾಮಿ, ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡ ಇದೆ ಅಂದಿದ್ದರು. ಆ ಮಹಾನಾಯಕ ಅರಕಲಗೂಡು ಶಾಸಕ ಎ ಮಂಜುನಾ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕರಾದ ಎ. ಮಂಜು ಅವರಿಗೆ ಏಪ್ರಿಲ್ 21 ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಆಗಿರಬಹುದು ಎಂದು ಆತ ಬರೆದುಕೊಂಡಿದ್ದಾನೆ.












Click it and Unblock the Notifications