ಮೆಗಾಸ್ಟಾರ್‌ ಚಿರಂಜೀವಿ ಭೇಟಿ ಮಾಡಿದ ಪ್ರದೀಪ್‌ ಈಶ್ವರ್‌

ಹೈದರಾಬಾದ್‌, ನವೆಂಬರ್‌ 10: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವೀಕ್ಷಕರಾಗಿ ನೇಮಕಗೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಅವರನ್ನು ಭೇಟಿ ಮಾಡಿದರು.

ಮೊದಲ ಬಾರಿ ಶಾಸಕರಾಗಿ ತಮ್ಮ ಮಾತುಗಳಿಂದ ಜನರನ್ನು ಸೆಳೆಯುತ್ತಿರುವ ಪ್ರದೀಪ್‌ ಈಶ್ವರ್‌ ಅವರು ತೆಲಂಗಾಣ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಧುಮಿಕಿದ್ದಾರೆ. ಕರ್ನಾಟಕದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಪ್ರದೀಪ್‌ ಈಶ್ವರ್‌ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಕೈಗೊಂಡು ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಾಲ್ಕೊಂಡ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

Pradeep Eshwar met Megastar Chiranjeevi

ಮುಂಬರುವ ಚುನಾವಣೆಗೆ ಬಾಲ್ಕೊಂಡ ಕ್ಷೇತ್ರದ ವೀಕ್ಷಕರಾಗಿ ಕಾಂಗ್ರೆಸ್ ಪಕ್ಷವು ತನ್ನ ಶಾಸಕ ಪ್ರದೀಪ್‌ ಈಶ್ವರ್‌ ಅವರನ್ನು ನೇಮಿಸಿದೆ. ತೆಲುಗು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಈಶ್ವರ್ ಅವರು ಬಾಲ್ಕೊಂಡದ ಜನರನ್ನು ಅವರದೇ ಭಾಷೆಯಲ್ಲಿ ಸಂಬೋಧಿಸಿ ಮಾತನಾಡಿದರು.

"ನಾನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್. ನಾನು ಹಿಂದುಳಿದ ವರ್ಗದಿಂದ ಬಂದವನು. ನಾನು ಐದು ತಿಂಗಳ ಹಿಂದೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ನನ್ನ ಬಳಿ ಮೂರು ಮುಕ್ತ ಪ್ರಶ್ನೆಗಳಿವೆ. ಬಿಆರ್ ಎಸ್ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಹುಸಿ ಭರವಸೆ ನೀಡಿ ಕೆಸಿಆರ್ ತೆಲಂಗಾಣ ಜನತೆಗೆ ಮೋಸ ಮಾಡಿದ್ದಾರೆ. ನಿಜವಾಗಿ ಕಾಂಗ್ರೆಸ್ ಮಾಡಿದ ತೆಲಂಗಾಣ ರಚನೆಯ ಶ್ರೇಯಸ್ಸನ್ನೂ ಕೆಸಿಆರ್ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

ಪ್ರಚಾರದ ನಂತರ ಶಾಸಕ ಪ್ರದೀಪ್‌ ಈಶ್ವರ್‌ ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು. ಮಾಜಿ ಸಚಿವ, ಬಿಜೆಪಿ ಮುಖಂಡ ಡಾ.ಕೆ.ಸುಧಾಕರ್ ಅವರನ್ನು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ನಂತರ ಪ್ರದೀಪ್ ಈಶ್ವರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಶಾಸಕರಾಗಿ ಆಯ್ಕೆಯಾದ ಬಳಿಕ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಶ್ವರ್ ಕನ್ನಡ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಂಡ ನಂತರ ಟೀಕೆಗೆ ಗುರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+