ಬೆಸ್ಕಾಂ, ಕೆಪಿಟಿಸಿಎಲ್ ಕಾಮಗಾರಿ; ಹಲವೆಡೆ ಮೂರು ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರು, ಅ.07: ಬೆಂಗಳೂರಿನರು ಈ ವಾರಾಂತ್ಯದಲ್ಲಿ ವಿದ್ಯುತ್ ವ್ಯತ್ಯಯವನ್ನು ಅನುಭವಿಸಬೇಕಾಗುತ್ತದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಕಾಮಗಾರಿಗಳ ಕಾರಣ ಮೂರು ದಿನಗಳು ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ನಗರದಲ್ಲಿ ಈ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು, ಅಂದರೆ ಅಕ್ಟೋಬರ್ 7, 8 ಮತ್ತು 9 ರಂದು ಹಲವು ಬಾರಿ ವಿದ್ಯುತ್ ಕಡಿತವನ್ನು ಕಾಣಲಿದೆ.

ಕೇಬಲ್ ಕಾಮಗಾರಿಗಳಿಗೆ 11 ಕಿಲೋವೋಲ್ಟ್ (ಕೆವಿ) ಓವರ್ ಹೆಡ್ ಚಾರ್ಜ್ ಮಾಡುವುದು, ನಿರ್ವಹಣಾ ಕಾಮಗಾರಿಗಳು, ಮರಗಳ ಕೊಂಬೆಗಳನ್ನು ಕತ್ತರಿಸುವುದು, ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಒದಗಿಸುವುದು, ತ್ರೈಮಾಸಿಕ ನಿರ್ವಹಣಾ ಕೆಲಸ ಮತ್ತು ಅಸ್ತಿತ್ವದಲ್ಲಿರುವ ಉಪಕರಣಗಳ ಸ್ಥಿತಿಯನ್ನು ಪರಿಶೀಲಿಸುವುದು ಇತ್ಯಾದಿ ಕೆಲಸಗಳನ್ನು ವಿದ್ಯುತ್ ಮಂಡಳಿಯು ಕೈಗೊಳ್ಳಲಿದೆ.

ವಾರಾಂತ್ಯದಲ್ಲಿ ಬೆಸ್ಕಾಂನಿಂದ ಹೆಚ್ಚಿನ ಕೆಲಸಗಳು

ವಾರಾಂತ್ಯದಲ್ಲಿ ಬೆಸ್ಕಾಂನಿಂದ ಹೆಚ್ಚಿನ ಕೆಲಸಗಳು

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಶುಕ್ರವಾರ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು, ಬೆಸ್ಕಾಂ ಶನಿವಾರ ಮತ್ತು ಭಾನುವಾರ ಒಂದೆರಡು ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದೆ.

ವಾರಾಂತ್ಯದಲ್ಲಿ ಹೆಚ್ಚಿನ ಕೆಲಸಗಳನ್ನು ನಿಗದಿಪಡಿಸಲಾಗಿದೆ. ಏಕೆಂದರೆ, ಹೆಚ್ಚಿನ ಉದ್ಯೋಗಿಗಳು ಕೆಲಸದಿಂದ ರಜೆ ಪಡೆದಿರುತ್ತಾರೆ. ಹಲವು ಕಂಪನಿಗಳಿಗೆ ರಜೆ ಇರುವ ಕಾರಣದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವೊದ್ಯುತ್ ಕಡಿತ ಮಾಡಿದಾಗ ಅಷ್ಟು ಕಿರಿಕಿಯಾಗುವುದಿಲ್ಲ ಎನ್ನುವುದು ಬೆಸ್ಕಾಂ ಯೋಜನೆ.

ಅ. 7 ರಂದು ಕೆ.ಬಿ ಕ್ರಾಸ್, ದಾವಣಗೆರೆಯಲ್ಲಿ ವಿದ್ಯುತ್ ಕಡಿತ

ಅ. 7 ರಂದು ಕೆ.ಬಿ ಕ್ರಾಸ್, ದಾವಣಗೆರೆಯಲ್ಲಿ ವಿದ್ಯುತ್ ಕಡಿತ

ಹೆಚ್ಚಿನ ವಿದ್ಯುತ್ ಸ್ಥಗಿತಗಳು ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಸಂಭವಿಸಬಹುದು ಎಂದು ತಿಳಿಸಲಾಗಿದೆ.

ಅಕ್ಟೋಬರ್ 7, ಶುಕ್ರವಾರರಂದು ಕೆಟಿಪಿಸಿಎಲ್ ವಿಭಾಗಗಳಾದ ಕೆ.ಬಿ ಕ್ರಾಸ್ ಮತ್ತು ದಾವಣಗೆರೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಕೂಟಗಲ್ಲು ಮತ್ತು ಕುಣಮುಂಡ್ನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು, 66/11 ಕೆವಿ ಬೇವೂರು ಲೈನ್, 66/11 ಕೆವಿ ದಶಾವರ, 66/11 ಕೆವಿ ಸಂಕಲಗೆರೆ, 66 ಕೆವಿ ಸೌರ ವಿದ್ಯುತ್ ಸ್ಥಾವರ, ಚೌಡನಕುಪ್ಪೆ, ತಾವರೆಕೆರೆ ಜಿ.ಪಂ., ನಗರ ಬಸತ್ವಾಜಿ ಗ್ರಾಮಗಳು, ಬೇಳೂರು, ಸವಳಂಗ, ಕೊಡ್ತಾಳು, ಚಿನ್ನಿಕಟ್ಟೆ, ಮಾದಾಪುರ, ಜಯನಗರ, ಕ್ಯಾತಿನಕೊಪ್ಪ, ಮುಸೇನಾಳ, ಮಾಚಿಗೊಂಡನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಕಡಿತ.

ಅ. 8 ರಂದು ರಾಮನಗರ ಭಾಗದಲ್ಲಿ ವಿದ್ಯುತ್ ಕಡಿತ

ಅ. 8 ರಂದು ರಾಮನಗರ ಭಾಗದಲ್ಲಿ ವಿದ್ಯುತ್ ಕಡಿತ

ಅಕ್ಟೋಬರ್ 8ರ ಶನಿವಾರದಂದು ಬಿಡದಿ ಉಪವಿಭಾಗದಡಿ ಬೆಸ್ಕಾಂ ವಿಭಾಗವು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು ರಾಮನಗರ ಭಾಗದಲ್ಲಿ ವಿದ್ಯುತ್ ಕಡಿತವಾಗಲಿದೆ.

ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನದೊಡ್ಡಿ, ರಂಗೇಗೌಡನದೊಡ್ಡಿ, ಲಕ್ಷ್ಮೀಸಾಗರ ಭಾಗಗಳಲ್ಲಿ ತೊಂದರೆಯಾಗಲಿದೆ.

ಅಕ್ಟೋಬರ್ 9ರ ಭಾನುವಾರ ಕೂಡ ಬಿಡದಿ ಉಪವಿಭಾಗದಡಿ ಬೆಸ್ಕಾಂ ವಿಭಾಗವು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು ರಾಮನಗರ ಭಾಗದಲ್ಲಿ ವಿದ್ಯುತ್ ಕಡಿತ ಮುಂದುವರೆಯಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ತೊಂದರೆಯಾಗಲಿದೆ.

ಬೆಸ್ಕಾಂ ಸೇವೆಗಳು ನಿಮ್ಮ ಬೆರಳ ತುದಿಯಲ್ಲಿ!

ಬೆಸ್ಕಾಂ ಸೇವೆಗಳು ನಿಮ್ಮ ಬೆರಳ ತುದಿಯಲ್ಲಿ!

ಇನ್ನು, ವಿದ್ಯುತ್ ಸಂಬಂಧಿತ ಎಲ್ಲಾ ಸೇವೆಗಳಿಗಾಗಿ 'ಬೆಸ್ಕಾಂ ಮಿತ್ರ' ಎಂಬ ಅಪ್ಲಿಕೇಷನ್ ಅನ್ನು ಬೆಸ್ಕಾಂ ಬಿಡುಗಡೆ ಮಾಡಿದೆ.

ಬೆಸ್ಕಾಂ‌ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ ಹಾಗೂ ಬೆಸ್ಕಾಂ ಸೇವೆಯ ಕುರಿತಾದ ದೂರುಗಳು, ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದಾಗಿದೆ.

ಇದರ ಜೊತೆಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ವಿದ್ಯುತ್ ತಂತಿ ತುಂಡಾಗಿದ್ದರೇ, ಜೋತು ಬಿದ್ದಿದ್ದರೇ ಅಥವಾ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡರೇ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ತ್ವರಿತ ಪ್ರತಿಕ್ರಿಯೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+