ಮತ ಬೇಟೆಗಾರ ಮೋದಿ VS ರೈತ ಹಂತಕ ಸಿದ್ದರಾಮಯ್ಯ: ಕಾಂಗ್ರೆಸ್-ಬಿಜೆಪಿ ಪೋಸ್ಟ್ ವಾರ್!
ಬೆಂಗಳೂರು, ಅಕ್ಟೋಬರ್ 07: 2024 ರ ಲೋಕಸಭಾ ಚುನಾವಣೆಯ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ವಾರ್ ಜೋರಾಗಿ ಸದ್ದು ಮಾಡುತ್ತಿದೆ. ಬಿಜೆಪಿಯೂ ರಾಹುಲ್ ಗಾಂಧಿಯನ್ನು ಹತ್ತು ತಲೆಯ ರಾವಣನಂತೆ ಪೋಸ್ಟ್ ಪ್ರಕಟಿಸಿದ ಬೆನ್ನೆಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ವಾರ್ ಮುಂದುವರೆದಿದೆ.
ವಿ.ಸೂ.: @siddaramaiah ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ!
— BJP Karnataka (@BJP4Karnataka) October 7, 2023
ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ! https://t.co/2NjAcR8OlZ pic.twitter.com/916OIIgBtR
ರಾಹುಲ್ ಗಾಂಧಿಯನನು ಹತ್ತು ತಲೆಯ ರಾವಣ ಎಂದು ಬಿಜೆಪಿ ಪೋಸ್ಟರ್ ಪ್ರಕಟಿಸಿದ್ದು, ಇದಕ್ಕೆ ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿಯವರನ್ನು ಮತ ಬೇಟೆಗಾರನಾಗಿ ಚಿತ್ರಿಸಿದ. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಕೂಡಾ ತೀವ್ರ ಪ್ರತಿ ದಾಳಿ ನಡೆಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೈತ ಹಂತಕ ಎನ್ನುವಂತೆ ಚಿತ್ರಿಸಿದೆ. ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಸಮರ ಜೋರಾಗಿದೆ.

ಮತ ಬೇಟೆಗಾರ ಮೋದಿ ಎಂದ ಕಾಂಗ್ರೆಸ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನ ಹತ್ತು ತಲೆಯ ರಾವಣನಂತೆ ಬಿಜೆಪಿ ಪೋಸ್ಟರ್ ಪ್ರಕಟಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಮತ ಬೇಟೆಗಾರ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿ ಪೋಸ್ಟರ್ ಒಂದನ್ನು ಜಾಲತಾಣದಲ್ಲಿ ಹಾಕಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೂರು ದಿನಕ್ಕೊಮ್ಮೆ ಬರುತ್ತಿದ್ದ ಮೋದಿ ಕರ್ನಾಟಕವೇ ನನ್ನ ಕರ್ಮಭೂಮಿ ಎಂದಿದ್ದರು. ಈಗ ಜನರು ಬರದಿಂದ ತತ್ತರಿಸಿದರೂ ಸುದ್ದಿ ಇಲ್ಲ. ಅವರೊಬ್ಬ ಮತ ಬೇಟೆಗಾರ ಮಾತ್ರ ಎಂದು ಕಾಂಗ್ರೆಸ್ ಹೇಳಿತ್ತು.
ಕಾಂಗ್ರೆಸ್ ಟ್ವೀಟ್ ಹೀಗಿದೆ
ಪ್ರಧಾನಿ ಮೋದಿಯವರು, ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು, ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು, ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು, ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು...ಆದರೆ ಈಗ.. ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ. ಬರದಿಂದ ರಾಜ್ಯದ ಜನ ತತ್ತರಿಸಿದರೂ ಪತ್ತೆ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಡುವ ಸುದ್ದಿಯೇ ಇಲ್ಲ. ಪ್ರಧಾನಿಯ ಕೆಲಸ ಮತ ಭೇಟೆ ಮಾತ್ರವೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಪ್ರಧಾನಿ ಮೋದಿಯವರು,
— Karnataka Congress (@INCKarnataka) October 6, 2023
ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು, ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು, ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು, ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು...
ಆದರೆ ಈಗ..
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ.
ಬರದಿಂದ ರಾಜ್ಯದ ಜನ… pic.twitter.com/DI8Jepu1Xe
ಇನ್ನೂ ಕಾಂಗ್ರೆಸ್ ಟ್ವೀಟ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, 10 ತಲೆಗಳ ಮೇಲೆ ಕೇಂದ್ರೀಕರಿಸುವುದನ್ನು ನಿಲ್ಲಿಸಿ, ಕಳೆದುಹೋದ 10000000 ಜೀವಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿದಾಳಿ ಮಾಡಿರುವ ರಾಜ್ಯ ಬಿಜೆಪಿ ರೈತ ಹಂತಕ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದೆ.
ವಿ.ಸೂ.: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿರುವ ಚಿತ್ರದಲ್ಲಿನ ದೋಷಗಳನ್ನು ಸರಿಪಡಿಸಲಾಗಿದೆ! ಬಿತ್ತನೆ ಬೀಜ ಪೂರೈಸದೆ, ಬರ ಪರಿಹಾರ ಒದಗಿಸದೆ, ಜೀವನದಿ ಕಾವೇರಿಯನ್ನು ತಮ್ಮ ಲಾಭಕ್ಕಾಗಿ ತಮಿಳುನಾಡಿಗೆ ಬಿಟ್ಟು, ಕೇವಲ 100 ದಿವಸದ ಆಡಳಿತದಲ್ಲಿ ರಾಜ್ಯದ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವವರು ಇವರೇ! ಎಂದು ರಾಜ್ಯ ಬಿಜೆಪಿ ಪೋಸ್ಟರ್ ರನ್ನ ಪ್ರಕಟಿಸಿದೆ.












Click it and Unblock the Notifications