ಕನ್ನಡ ಕಂಟೆಂಟ್ ಕ್ರಿಯೇಟರ್ಸ್‌ಗಳ ನಡುವೆ ಪೋಸ್ಟ್‌ ವಾರ್!

ಬೆಳಗಾವಿಯಲ್ಲಿ ಪರಿಸ್ಥಿತಿ ತಿಳಿಯಾಗುತ್ತಿದೆ. ಆದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆ ಕನ್ನಡ ಕಂಟೆಂಟ್ ಕ್ರಿಯೇಟರ್ಸ್‌ಗಳ ನಡುವೆಯೇ ವಿವಾದ ಹುಟ್ಟಿಕೊಂಡಿದೆ. ಕನ್ನಡ ಹಾಗೂ ಕನ್ನಡಪರ ನಿಲ್ಲುವಂತೆ ನನ್‌ ಮಿನಿ ರೇಡಿಯೋ ಖ್ಯಾತಿಯ ಹರೀಶ್‌ ಅವರು ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಅವರು ಕೇಳಿರುವ ಒಂದು ಪ್ರಶ್ನೆ ಇದೀಗ ಹೊಸ ಚರ್ಚೆ ಶುರು ಮಾಡಿದೆ. ಅಲ್ಲದೆ ಉತ್ತರ ಕರ್ನಾಟಕದ ಕೆಲವು ಕನ್ನಡ ಕಂಟೆಂಟ್ ಕ್ರಿಯೇರ್ಟಸ್ ಹಾಗೂ ಹರೀಶ್‌ ಅವರ ಬಣ್ಣದ ಬಗ್ಗೆ ಮಾತನಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮರಾಠಿ ಪುಂಡರ ವಿರುದ್ಧ ಕನ್ನಡಿಗರೆಲ್ಲರೂ ಒಂದಾಗಿ ನಿಲ್ಲಬೇಕಾದ ಸಂದರ್ಭದಲ್ಲಿಯೇ ಕನ್ನಡಿಗರ ನಡುವೆಯೇ ಈ ವಿವಾದ ಶುರುವಾಗಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಗಡಿ ವಿವಾದವಿದೆ. ಈ ವಿವಾದ ದಶಕಗಳಿಂದಲೂ ಇದೆ. ಆದರೆ ಇದೀಗ ಭಾಷಾ ವಿವಾದ ಸೃಷ್ಟಿಯಾಗಿದ್ದು. ಭಾಷಾ ವಿವಾದ ಶುರುವಾಗಿದ್ದು. ಇದು ಈಗ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದರ ನಡುವೆ ಕನ್ನಡ ಕಂಟೆಂಟ್‌ ಕ್ರಿಯೇಟರ್ಸ್‌ಗಳ ಬಗ್ಗೆ ಕನ್ನಡಿಗರಿಂದ ಅಸಮಾಧಾನವೂ ಹೆಚ್ಚಾಗಿದೆ.

Post War Between Kannada Content Creators

ಹರೀಶ್‌ ಮಾಡಿದ ಪೋಸ್ಟ್‌ ಏನು: ಕನ್ನಡ ಕಂಟೆಂಟ್ ಕ್ರಿಯೇಟರ್‌ ಹರೀಶ್‌ ಅವರು, ಬೆಳಗಾವಿ ವಿಚಾರವಾಗಿ ವಿಡಿಯೋ ಮಾಡಿದ್ದರು. ಇದರಲ್ಲಿ ಉತ್ತರ ಕರ್ನಾಟಕದ ಯೂಟ್ಯೂಬ್ ಹಾಗೂ ಕಂಟೆಂಟ್‌ ಕ್ರಿಯೇಟರ್‌ಗಳು ಕನ್ನಡ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿದ್ದರು. ಅಲ್ಲದೆ ನನ್‌ ಮಿನಿ ರೇಡಿಯೋ ಎನ್ನುವ ಖಾತೆಯ ಮೂಲಕ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ "ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗೆ ಏನೇ ಸಮಸ್ಯೆ ಆದ್ರೂ, ಅನ್ಯಾಯ ಆದ್ರೂ ಅಲ್ಲಿರೋ Youtuber ಗಳು content creator ಗಳು ಧ್ವನಿ ಏನಿಕ್ಕೆ ಎತ್ತೋದಿಲ್ಲ ನಿಮ್ಮ ಅನಿಸಿಕೆಗಳನ್ನ ತಿಳಿಸಿ" ಎಂದು ಸಹ ಪೋಸ್ಟ್‌ ಮಾಡಿದ್ದರು. ಆದರೆ ಇದಕ್ಕೆ ಕೆಲವು ಕಂಟೆಂಟ್ ಕ್ರಿಯೇರ್ಟಸ್‌ಗಳು ಹರೀಶ್‌ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬೆಳವಣಿಗೆ ಇದೀಗ ಕನ್ನಡ ಕಂಟೆಂಟ್‌ ಕ್ರಿಯೇಟರ್ಸ್‌ಗಳ ನಡುವೆಯೇ ವಾದ - ವಿವಾದಕ್ಕೆ ವೇದಿಕೆ ನಿರ್ಮಿಸಿದಂತಾಗಿದೆ. ಎಕ್ಸ್‌ನಲ್ಲಿ ಕಾರ್ತಿಕ್‌ ವೆಂಕಟೇಶ್‌ ಅವರು, ಕನ್ನಡ ಹಾಗೂ ಕನ್ನಡಿಗರ ಪರ ನಿಲ್ಲೋ @nanminiradio ಹರೀಶ್ ಅವರು ಬೆಳಗಾವಿಯಲ್ಲಿನ ಕಂಡಕ್ಟರ್ ಮೇಲಾದ ಹಲ್ಲೆಯ ವಿಚಾರದ ಬಗ್ಗೆ ಬೆಳಗಾವಿ ಹಾಗೂ ಇನ್ನಿತರ ಕಂಟೆಂಟ್ ಕ್ರಿಯೇಟರ್ಸ್‌ಗೆ ಕಂಡಕ್ಟರ್ ಪರ ನಿಲ್ಲಿ ಎಂದು ಹೇಳಿದ್ದಕ್ಕೆ ಹರೀಶ್ ಅವರ

ಬಣ್ಣದ ಬಗ್ಗೆ ಉಡಾಳ್ pavvya ಎಂಬಾತ ಎನ್ನುವವರು ವೈಯಕ್ತಿಕ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಬೆಳವಣಿಗೆಗಳ ನಂತರ ಹರೀಶ್‌ ಅವರು, ಹೌದು ಈ 5 ವರ್ಷದಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದೀನಿ ಆದರೆ ಇನ್ಮುಂದೆ ಅಲ್ಲಿರೋ ಜನ ಧ್ವನಿ ಎತ್ತೋವರೆಗೂ ನಾನು ಧ್ವನಿ ಎತ್ತಲ್ಲ. ನಂಗೂ ಸಾಕಾಗಿದೆ ಅವರಿಗೆ ಅಲ್ಲೇ ಇರೋ ನಮ್ಮ ಕನ್ನಡ ರಾಜರು ಬೇಡ. ನಾವೇ ನಮ್ಮ ಕನ್ನಡ ರಾಜರನ್ನು ಮೆರೆಸೋಣ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+