ಉಡುಪಿಯಲ್ಲಿ ಘರ್ಜನೆ ನಿಲ್ಲಿಸಿದ ಹೆಲಿ ಟೂರಿಸಂ?

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಏಪ್ರಿಲ್ 04 : ಉಡುಪಿಯಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರಾಯೋಗಿಕವಾಗಿ ಆರಂಭವಾಗಿದ್ದ 'ಹೆಲಿ ಟೂರಿಸಂ'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೆಲವು ದಿನಗಳ ಕಾಲ ಹಾರಾಟ ನಡೆಸಿದ ಹೆಲಿಕಾಪ್ಟರ್‌ನ ಸದ್ದು ಈಗ ಕೇಳುತ್ತಿಲ್ಲ. ಆದರೆ, ಇದಕ್ಕೆ ಚುನಾವಣಾ ಪ್ರಚಾರ ಕಾರಣ ಎಂದೂ ಹೇಳಲಾಗುತ್ತಿದೆ.

ನವದೆಹಲಿ ಮೂಲದ ಚಿಪ್ಸನ್ ಏವಿಯೇಶನ್ ಸಂಸ್ಥೆ ನೆರವಿನಿಂದ ಫೆಬ್ರವರಿಯಲ್ಲಿ ಉಡುಪಿಯಲ್ಲಿ 'ಹೆಲಿ ಟೂರಿಸಂ' ಯೋಜನೆ ಆರಂಭಿಸಲಾಗಿತ್ತು. ಯೋಜನೆ ಆರಂಭವಾದ ನಂತರ ಶನಿವಾರ ಮತ್ತು ಭಾನುವಾರ ಉಡುಪಿ ಹೆಲಿ ಪ್ಯಾಡ್‌ನಿಂದ ಮೇಲೆ ಸಾಗುತಿದ್ದ ಕಾಪ್ಟರ್ ಸದ್ದು ಕೇಳಿಸುತ್ತಿತ್ತು. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

heli-tourism

ಆನಂತರ ಆ ಸುದ್ದು ಕೇಳಿಸಲೇ ಇಲ್ಲ. ಹಾಗಾದರೆ ಉಡುಪಿ, ಮಲ್ಪೆ, ಮಣಿಪಾಲ ಭಾಗದಲ್ಲಿ ವೀಕೆಂಡ್ ಮಜಾ ನೀಡಿದ ಹೆಲಿ ಟೂರಿಸಂ ಯೋಜನೆ ಸ್ಥಗಿತಗೊಂಡಿತೇ? ಎಂಬ ಅನುಮಾನ ಮೂಡಿದೆ. ಆದರೆ, ಆಯೋಜಕರು ಈ ಮಾತನ್ನು ತಳ್ಳಿಹಾಕುತ್ತಾರೆ. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

ಪಯಣಕ್ಕೆ ಜನರ ಕಾತರ : ಕಾಪ್ಟರ್ ಹಾರಾಡದಿರುವ ವಿಚಾರ ಸಾರ್ವಜನಿಕರಲ್ಲಿಯೂ ಹಲವು ಅನುಮಾನ ಮೂಡಿಸಿದೆ. ಈ ಬಗ್ಗೆ ಹೆಲಿ ಟೂರಿಸಂ ಉಸ್ತುವಾರಿ ಸುದೇಶ್ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, 'ಹೆಲಿಕಾಪ್ಟರ್ ಪ್ರಯಾಣಕ್ಕೆ ಜನರ ಕೊರತೆ ಇಲ್ಲ. ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ' ಎಂದು ಹೇಳಿದ್ದಾರೆ. [ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?]

'ಫೆ.15ರಿಂದ ಅನಂತರದ ಒಂದು ಶನಿವಾರ 170ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. 2ನೇ ಬಾರಿಯೂ ಹಲವು ಜನರು ಪ್ರಯಾಣಿಸಿದ್ದಾರೆ. ಆದರೆ, ಈಗ ಹೆಲಿಕಾಪ್ಟರ್ ಸೌಲಭ್ಯ ನೀಡುತ್ತಿರುವ ಚಿಪನ್ಸ್ ಏವಿಯೇಷನ್ ಸಂಸ್ಥೆಯವರ ಬಿಸಿ ಶೆಡ್ಯೂಲ್‌ನಲ್ಲಿರುವ ಕಾರಣ ಉಡುಪಿಗೆ ಹೆಲಿಕಾಪ್ಟರ್ ನೀಡಲು ಸಂಸ್ಥೆಯವರಿಗೆ ಸಾಧ್ಯವಾಗುತ್ತಿಲ್ಲ' ಎಂದು ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಕಾರಣ : ಶ್ರೀ ರವಿಶಂಕರ್ ಗೂರೂಜಿ ಕಾರ್ಯಕ್ರಮದಿಂದ ಹಿಡಿದು ಐದು ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ರಾಜಕೀಯ ನಾಯಕರು ಪ್ರಯಾಣ ಬೆಳೆಸಲು ಚಿಪನ್ಸ್ ಏವಿಯೇಷನ್ ಸಂಸ್ಥೆಯವರ ಹೆಲಿಕಾಪ್ಟರ್ ಬುಕ್ಕಿಂಗ್ ಆಗಿದೆ. ಆದ್ದರಿಂದ, ಉಡುಪಿಗೆ ಕಾಪ್ಟರ್ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್ ಎರಡನೇ ವಾರದಲ್ಲಿ ಉಡುಪಿಗೆ ಮತ್ತೆ ಕಾಪ್ಟರ್ ಒದಗಿವುದಾಗಿ ಸಂಸ್ಥೆ ಹೇಳಿದೆ. [ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ]

ಉಡುಪಿಯಲ್ಲಿಯೇ ಹೆಲಿಕಾಪ್ಟರ್ ಇರಲು ವ್ಯವಸ್ಥೆ ಮಾಡಲು ಸಾಧ್ಯವಿದೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ತುತ್ತು ಸಂದರ್ಭದಲ್ಲಿ ರೋಗಿಗಳನ್ನು ಕೂಡಾ ಸಾಗಿಸಲು ಅನುವಾಗುವಂತೆ ಸ್ಟ್ರೇಚರ್ ವ್ಯವಸ್ಥೆ ಇರುವ ಹೆಲಿಕಾಪ್ಟರ್ ಅನ್ನು ಮುಂದಿನ ದಿನದಲ್ಲಿ ಕಳುಹಿಸಿಕೊಡುವಂತೆ ಸಂಸ್ಥೆಗೆ ಮನವಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the first time in Karnataka state the Helicopter tourism was inaugurated in Udupi in February 2016. Now heli-tourism getting poor response.
Please Wait while comments are loading...