ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್ ಟಿಸಿ ಟಿಕೆಟ್ ನಲ್ಲಿದೆ ಮತದಾನ ಮಾಡಿ ಎನ್ನುವ ಸಂದೇಶ!

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಮತದಾರರನ್ನು ಮತಗಟ್ಟೆಗೆ ತರಲು ಚುನಾವಣಾ ಆಯೋಗ ಹರ ಸಾಹಸ ಪಡುತ್ತಿದೆ. ಆಯೋಗ ಜೊತೆಗೆ ಈಗ ಕೆಎಸ್ ಆರ್ ಟಿಸಿ ಕೂಡ ಕೈ ಜೋಡಿಸಿದೆ.

ಸಾಮಾನ್ಯವಾಗಿ ನಗರ ಸೇರಿದಂತೆ ಅನೇಕ ಜಿಲ್ಲೆ, ಹಳ್ಳಿಗಳಿಗೆ ಕೆ.ಎಸ್.ಆರ್ ಟಿಸಿ ಬಸ್ ಗಳು ತೆರಳುತ್ತವೆ. ಕೆಲವೊಂದು ಹಳ್ಳಿಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಮಾತ್ರವೇ ತೆರಳುವ ಉದಾಹರಣೆಯೂ ಇದೆ. ಹಾಗಾಗಿ ನಾಗರಿಕರಲ್ಲಿ ಮತದಾನ ಮೂಡಿಸಲು ಟಿಕೆಟ್ ಮೇಲೆ ಮೇ.12ರಂದು ಮತದಾನ ನಡೆಯಲಿದೆ. ಮತದಾನ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಬರೆಯಲಾಗಿದೆ.

ಬಸವೇಶ್ವರ ನಿಲ್ದಾಣಕ್ಕೆ ಬಿಎಂಟಿಸಿ ಫೀಡರ್ ಬಸ್ ಸಂಖ್ಯೆ ಹೆಚ್ಚಳಬಸವೇಶ್ವರ ನಿಲ್ದಾಣಕ್ಕೆ ಬಿಎಂಟಿಸಿ ಫೀಡರ್ ಬಸ್ ಸಂಖ್ಯೆ ಹೆಚ್ಚಳ

ಇಷ್ಟೇ ಅಲ್ಲದೆ ಚುನಾವಣಾ ಆಯೋಗವು ಮತದಾನ ಪ್ರಮಾಣ ಹೆಚ್ಚಿಸಲು ಇದೇ ಮೊದಲ ಬಾರಿಗೆ ವೋಟರ್ಸ್ ಗೈಡ್ ನೀಡಲಿದೆ. ಭಾವಚಿತ್ರವಿರುವ ಪಟ್ಟಿ ನೀಡುವುದರ ಜತೆಗೆ ಮತದಾರರಿಗೆ ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸಲಿದೆ.ಬೂತ್ ಮಟ್ಟದಲ್ಲಿ ಮತದಾರರ ಜಾಗೃತಿ ಕೈಗೆತ್ತಿಕೊಳ್ಳಲಾಗಿದೆ.

Poll awareness on KSRTC travel tickets!

ಬೀದಿನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.ಹೈಸ್ಕೂಲ್, ಪಿಯು ಕಾಲೇಹುಗಳಲ್ಲಿ ಚುನಾವಣಾ ಪಾಠ ಶಾಲೆ ತೆರೆಯಲಾಗಿದೆ. ಬೇಸಿಗೆ ಶಿಬಿರ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮತದಾನದ ಮಹತ್ವ ತಿಳಿಸಲಾಗುತ್ತಿದೆ.

ಮತದಾನಕ್ಕೆ ಮುನ್ನ ಪ್ರತಿ ಕುಟುಂಬದ ಮತದಾರರಿಗೆ ಮಾರ್ಗಸೂಚಿಗಳಿರುವ ಕರಪತ್ರ ವಿತರಣೆ ಮಾಡಲಾಗುವುದು. ಕರಪತ್ರದಲ್ಲಿ ಚುನಾವಣೆಯ ದಿನಾಂಕ ಮತ್ತು ಸಂಖ್ಯೆ, ಬೂತ್ ಮಟ್ಟದ ಅಧಿಕಾರಿಗಳ ಸಂಪರ್ಕ ವಿವರ, ಮುಖ್ಯ ವೆಬ್‌ಸೈಟ್ ಗಳು, ಸಹಾಯವಾಣಿ ಸಂಖ್ಯೆಗಳು, ಮತಗಟ್ಟೆಗಳಲ್ಲಿ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದೆಂಬ ಭಾವಚಿತ್ರವುಳ್ಳ ಮತದಾರರ ಚೀಟಿಯೊಂದಿಗೆ ಬೂತ್ ಮಟ್ಟದ ಅಧಿಕಾರಿಗಳು ವಿತರಿಸುತ್ತಾರೆ .

ಇನ್ನು ಕೆಲವರು ಮತದಾನದ ಕುರಿತು ಕರಪತ್ರವನ್ನು ಕೂಡ ಹಂಚಲು ತಯಾರಿ ನಡೆದಿದೆ. ಬಲೂನ್ ಗಳಲ್ಲಿ ಮತದಾನದ ಅರಿವು ಮೂಡಿಸುವಂತಹ ಚಿತ್ರಗಳನ್ನು ಬರೆಯುವುದು, ಅಥವಾ ಮತದಾನ ಮಾಡುವಂತಹ ಬರಹಗಳನ್ನು ಬರೆದು ಆಕಾಶದಲ್ಲಿ ತೇಲಿಬಿಡುವ ಸಾಹಸವೂ ನಡೆಯುತ್ತದೆ.

English summary
KSRTC has taken an initiative to create awareness among general public through travel ticket. The corporation has printed on ticket an appeal to tender vote compulsory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X