ಪ್ರಜ್ಞಾವಂತ ಮತದಾರ ತಲೆತಗ್ಗಿಸುವಂತಹ ಹೇಳಿಕೆ ನೀಡಿದ ಸಚಿವ ಪಾಟೀಲ್

Posted By:
Subscribe to Oneindia Kannada
   ಪ್ರಜ್ಞಾವಂತ ಮತದಾರ ತಲೆತಗ್ಗಿಸುವಂತಹ ಹೇಳಿಕೆ ನೀಡಿದ ಸಚಿವ ಪಾಟೀಲ್

   ಬೇಕಾದ್ ಆಗಲಕ್ಕ್. ವೀರಶೈವ ಬೇರೆ ಲಿಂಗಾಯಿತ ಬೇರೆ ಎಂದು ತೊಡೆತಟ್ಟಿರುವ ನೀರಾವರಿ ಸಚಿವ ಎಂ ಬಿ ಪಾಟೀಲರು, ನಿಯತ್ತಾಗಿ ವೋಟು ಮಾಡುವ ಮತದಾರ ತಮ್ಮ ಚಪ್ಪಲಿಯನ್ನು ತಾವೇ ಹೊಡ್ಕೊಳ್ಳುವಂತಹ ಹೇಳಿಕೆಯನ್ನು ನೀಡಿದ್ದಾರೆ.

   ವಿಜಯಪುರದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳವಾರ (ನ 14) ಮಾತನಾಡುತ್ತಿದ್ದ ಸಚಿವ ಎಂ ಬಿ ಪಾಟೀಲ್, ರಾಜಕಾರಣಿಗಳು ಹಾಳಾಗಿದ್ದೇ ಮತದಾರರಿಂದ. ರಾಜಕಾರಣಿಗಳು ಚುನಾವಣೆಯ ವೇಳೆ ಹಣ ಹಂಚುವುದರಿಂದ, ಮತದಾರ ಅದರ ಆಮಿಷಕ್ಕೆ ಬಲಿಯಾಗಿದ್ದಾನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

   ಸಚಿವ ಎಂ.ಬಿ.ಪಾಟೀಲ್ ಪ್ರತಿಕೃತಿಗೆ ಚಪ್ಪಲಿ ಹಾರ

   ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲಾ ರಾಜಕಾರಣಿಗಳು ಮತದಾರರಿಗೆ ದುಡ್ಡು, ಹೆಂಡದ ಆಮಿಷವೊಡ್ದುತ್ತಿದ್ದಾರೆ. ಇದನ್ನು ಅಂದೇ ಮತದಾರ ಪ್ರತಿಭಟಿಸಿದ್ದರೆ, ರಾಜಕಾರಣಿಗಳು ಹಾಳಾಗುತ್ತಿರಲಿಲ್ಲ ಎಂದು ಸಚಿವ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   ದೇವಸ್ಥಾನ ಅಥವಾ ಮಸೀದಿಗಳಿಗೆ ಜನರು ಕಾಣಿಕೆಯನ್ನು ನೀಡುತ್ತಾರೆ. ಅದೇ ಹಣವನ್ನು ವಿದ್ಯಾಸಂಸ್ಥೆಗಳಿಗೆ ನೀಡಿದ್ದರೆ ನಮ್ಮ ಶೈಕ್ಷಣಿಕ ಪದ್ದತಿ ಇನ್ನಷ್ಟು ಅಭಿವೃದ್ದಿಗೊಳ್ಳುತ್ತಿತ್ತು. ಒಟ್ಟಾರೆಯಾಗಿ ರಾಜಕಾರಣಿಗಳ ದಾರಿತಪ್ಪಿಸಿದ್ದೇ ಮತದಾರ ಎನ್ನುವ ಹೇಳಿಕೆಯನ್ನು ನೀಡಿ, ಮತದಾನ ನಮ್ಮ ಹಕ್ಕು ಎಂದು ವೋಟ್ ಮಾಡುವ ಪ್ರಜ್ಞಾವಂತ ಮತದಾರ ತಲೆ ತಗ್ಗಿಸುವಂತಹ ಹೇಳಿಕೆಯನ್ನು ಸಚಿವ ಪಾಟೀಲ್ ನೀಡಿದ್ದಾರೆ.

   ಮೃತ್ಯುಂಜಯ ಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ಎಂ.ಬಿ ಪಾಟೀಲ್

   ಚುನಾವಣೆ ಅಂದರೆ ಮತದಾರರಿಗೆ ದುಡ್ಡು, ಹೆಂಡ ಎನ್ನುವಂತಾಗಿದೆ. ಎಲ್ಲಿಯವರೆಗೆ ಮತದಾರ ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ರಾಜಕಾರಣಿಗಳೂ ಸುಧಾರಿಸುವುದಿಲ್ಲ ಎಂದು ಪಾಟೀಲರು ಹೇಳಿದ್ದಾರೆ. ಪ್ರಜ್ಞಾವಂತ ಮತದಾರ ತಲೆತಗ್ಗಿಸುವಂತಹ ಹೇಳಿಕೆ ನೀಡಿದ ಸಚಿವ ಪಾಟೀಲರಿಗೆ ಐದು ಪ್ರಶ್ನೆಗಳು, ಮುಂದೆ ಓದಿ

   ನೀವು ಅಯ್ಕೆಯಾಗಲು ಇದುವರೆಗೆ ಎಷ್ಟು ಹಣ ಹಂಚಿದ್ದೀರಾ?

   ನೀವು ಅಯ್ಕೆಯಾಗಲು ಇದುವರೆಗೆ ಎಷ್ಟು ಹಣ ಹಂಚಿದ್ದೀರಾ?

   1. ದುಡ್ಡು ತೆಗೆದುಕೊಂಡು ಮತದಾರರು ವೋಟ್ ಮಾಡ್ತಾರೆ ಎನ್ನುವ ಮಾತು ಒಂದು ಲೆಕ್ಕದಲ್ಲಿ ಸತ್ಯವೇ. ಮತದಾರನ ಭವಿಷ್ಯ ಮತದಾನದ ಹಿಂದಿನ ದಿನ ದುಡ್ಡು, ಎಣ್ಣೆ ಹಂಚುವ ಲೆಕ್ಕದಲ್ಲಿ ಇರುತ್ತೆ ಅನ್ನೋದೂ ಕೇಳಿಬರುವ ಮಾತು. ಬಬಲೇಶ್ವರ ಕ್ಷೇತ್ರದಿಂದ ಸತತವಾಗಿ ನೀವು ಅಯ್ಕೆಯಾಗಲು ಇದುವರೆಗೆ ಎಷ್ಟು ಹಣ ಹಂಚಿದ್ದೀರಾ? ನಾಲ್ಕು ಬಾರಿ ನೀವು ಶಾಸಕರಾಗಿದ್ದೀರಿ, ಪ್ರತೀ ಬಾರಿ ಮತದಾರ ನಿಮ್ಮನ್ನು ಅಳೆದದ್ದು ದುಡ್ಡಿನಿಂದನೇನಾ?

   ನಿಷ್ಟಾವಂತ ಮತದಾರರ ಮೇಲೆ ನೀವು ತೋರುತ್ತಿರುವ ಉಡಾಫೆಯಲ್ಲವೇ

   ನಿಷ್ಟಾವಂತ ಮತದಾರರ ಮೇಲೆ ನೀವು ತೋರುತ್ತಿರುವ ಉಡಾಫೆಯಲ್ಲವೇ

   2. ದುಡ್ಡು ಕೊಟ್ರೆನೇ ಮತದಾರ ವೋಟ್ ಹಾಕೋದು ಎನ್ನುವ ನಿಮ್ಮ ಮಾತು, ನಿಷ್ಟಾವಂತ ಮತದಾರರ ಮೇಲೆ ನೀವು ತೋರುತ್ತಿರುವ ಉಡಾಫೆಯಲ್ಲವೇ. ಕರ್ನಾಟಕದ ಅದೆಷ್ಟೋ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಕ್ಷೇತ್ರದಲ್ಲಿ ನಿಯತ್ತಾಗಿ ಅಭಿವೃದ್ದಿ ಕೆಲಸ ಮಾಡುತ್ತಿರುವ ಅಭ್ಯರ್ಥಿ ಸತತವಾಗಿ ಜಯಗಳಿಸುತ್ತಿರುವ ಉದಾಹರಣೆಯಿದೆ. ನೀವ್ಯಾಕೆ ಅಂತಹ ರಾಜಕಾರಣಿಯ ಸಾಲಿಗೆ ಸೇರಿಲ್ಲ?

   ಮಕ್ಕಳೂ ರಾಜಕಾರಣಿಗಳು ಹಂಚುವ ದುಡ್ಡು, ಎಣ್ಣೆಗೆ ಜೋತು ಬೀಳಬೇಕಾ

   ಮಕ್ಕಳೂ ರಾಜಕಾರಣಿಗಳು ಹಂಚುವ ದುಡ್ಡು, ಎಣ್ಣೆಗೆ ಜೋತು ಬೀಳಬೇಕಾ

   3. ಮಕ್ಕಳ ದಿನಾಚರಣೆಯ ವೇಳೆ ಇಂತಾ ಮಾತನ್ನು ಹೇಳ್ತೀರಲ್ವಾ, ಒಂದು ಕಡೆ ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಅನ್ನೋ ನೀವು, ಮುಂದೆ ಮಕ್ಕಳೂ ರಾಜಕಾರಣಿಗಳು ಹಂಚುವ ದರಿದ್ರ ದುಡ್ಡು, ಎಣ್ಣೆಗೆ ಜೋತು ಬೀಳಬೇಕಾ?

   ನಿಮ್ಮ ಕ್ಷೇತ್ರದ ಮತದಾರನ ಮೇಲೆ ನಿಮಗೆ ನಂಬಿಕೆಯಿಲ್ಲವೇ

   ನಿಮ್ಮ ಕ್ಷೇತ್ರದ ಮತದಾರನ ಮೇಲೆ ನಿಮಗೆ ನಂಬಿಕೆಯಿಲ್ಲವೇ

   4. ಅಭಿವೃದ್ದಿ ಕೆಲಸದಿಂದ, ಮತದಾರನಿಗೆ ಹತ್ತಿರವಾಗಿ ಮುಂದೆ ಚುನಾವಣೆ ಗೆಲ್ಲುತ್ತೇನೆ ಎಂದು ಮುಂದಿನ ವರ್ಷದಲ್ಲಿ ನೀವ್ಯಾಕೆ ಪ್ರಯತ್ನಿಸಬಾರದು. ಒಂದೊಳ್ಳೆ ಕೆಲಸ ನಿಮ್ಮಿಂದಲೇ ಆರಂಭವಾಗಲಿ. ಅದು ಸಾಧ್ಯವಿಲ್ಲಾಂದರೆ, ನಿಮ್ಮ ಕ್ಷೇತ್ರದ ಮತದಾರನ ಮೇಲೆ ನಿಮಗೆ ನಂಬಿಕೆಯಿಲ್ಲದಂತಲ್ಲವೇ?

   ಜಾತಿ ಒಡೆಯುವ ಕೆಲಸ ಮತ್ತು ಜಾತಿ ಲೆಕ್ಕಾಚಾರ ಯಾಕೆ?

   ಜಾತಿ ಒಡೆಯುವ ಕೆಲಸ ಮತ್ತು ಜಾತಿ ಲೆಕ್ಕಾಚಾರ ಯಾಕೆ?

   5. ಮತದಾರ ದುಡ್ಡಿನ ಆಮಿಷಕ್ಕೆ ಒಳಗಾಗಿ ರಾಜಕಾರಣಿಗಳ ದಾರಿ ತಪ್ಪಿಸುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನೀಡುತ್ತೀರಿ. ಹಾಗಿದ್ದಲ್ಲಿ, ದುಡ್ಡಿನಿಂದಲೇ ಚುನಾವಣೆ ಗೆಲ್ಲಬಹುದಾಗಿದ್ದರೆ, ಜಾತಿ ಒಡೆಯುವ ಕೆಲಸ ಮತ್ತು ಜಾತಿ ಲೆಕ್ಕಾಚಾರ ಪ್ರಮುಖವಾಗಿ ನಿಮ್ಮಿಂದ ಹೆಚ್ಚಾಗಿ ನಡೆಯುತ್ತಿದೆ, ಇದ್ಯಾಕೆ?

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Voters are expecting money and liquor, because of this Politicians are distributing the money during election, Karnataka Water Resources Minister M B Patil controversial statement. Five questions to Minister.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ