ಬೆಳಗಾವಿ, ಏಪ್ರಿಲ್ 09 : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಬಲ್ಕ್ ಎಸ್‍ಎಂಎಸ್ (ಒಟ್ಟಾಗಿ ಹಲವು ಜನರಿಗೆ ಮೊಬೈಲ್ ಸಂದೇಶ)/ ವಾಟ್ಸಾಪ್ ಅಥವಾ ವಾಯ್ಸ್ ಮೆಸೇಜ್ ಕಳುಹಿಸಬೇಕಾದರೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಸಮಿತಿ ವತಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ(ಏ.9) ನಡೆದ ಬಲ್ಕ್ ಮೆಸೇಜ್ ಸರ್ವೀಸ್ ಪ್ರೊವೈಡರ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಒಂದು ವೇಳೆ ಅನುಮತಿ ಪಡೆಯದೇ ಬಲ್ಕ್ (ಒಟ್ಟಾಗಿ ಹಲವು ಜನರಿಗೆ) ಮೊಬೈಲ್ ಸಂದೇಶ ಕಳುಹಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ, ಎಷ್ಟು ಪ್ರಕರಣ ದಾಖಲಾಗಿದೆ?
ಚುನಾವಣಾ ಪ್ರಚಾರಕ್ಕಾಗಿ ಬಲ್ಕ್ ಮೆಸೇಜ್ ಕಳುಹಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ) ವತಿಯಿಂದ ಪೂರ್ವಾನುಮತಿ ಪಡೆಯಬೇಕು.
ಜಾತಿ-ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಮತ ಕೇಳುವುದು; ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ನಿಂದನೆ ಅಥವಾ ಪ್ರಚೋದನಾತ್ಮಕ ಸಂದೇಶಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮೆಸೇಜ್‌ಗಳನ್ನು ಪರಿಶೀಲಿಸಿ ಪೂರ್ವಾನುಮತಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಪೂರ್ವಾನುಮತಿ ಪಡೆಯದ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಬಲ್ಕ್ ಮೆಸೇಜ್ ಸೇವೆ ಒದಗಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಆದ್ದರಿಂದ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಲ್ಕ್ ಸೇವೆ ಒದಗಿಸುವ ಮುಂಚೆ ಪೂರ್ವಾನುಮತಿ ಪ್ರಮಾಣಪತ್ರ ಪರಿಶೀಲಿಸುವಂತೆ ಸರ್ವೀಸ್ ಪ್ರೊವೈಡರ್‌ಗಳಿಗೆ ಸಲಹೆ ನೀಡಿದರು.
2 ಸೀಟಿಗೆ ಸ್ಪರ್ಧಿಸುವ 'ಜೀವವಿಮೆ' ಕರ್ನಾಟಕದಲ್ಲೇ ಶುಭಂ, ಏಕೆ ಗೊತ್ತೆ?
ಮೂರನೇ ವ್ಯಕ್ತಿ ನೀಡಿದರೆ ಕ್ರಮ
ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಮಾತ್ರ ಚುನಾವಣಾ ಪ್ರಚಾರ ಕೈಗೊಳ್ಳಬಹುದು. ಅವರನ್ನು ಹೊರತುಪಡಿಸಿ ಮೂರನೇ ವ್ಯಕ್ತಿ ಯಾವುದೇ ರೀತಿಯ ಬಲ್ಕ್ ಮೆಸೇಜ್ ಕಳುಹಿಸಬೇಕಾದರೆ ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಯ ಒಪ್ಪಿಗೆ ಪಡೆದುಕೊಂಡಿರಬೇಕು. ಸಂಬಂಧಿಸಿದವರ ಒಪ್ಪಿಗೆ ಇಲ್ಲದೇ ಪ್ರಚಾರ ಕೈಗೊಂಡರೆ ಅಂತಹವರ ವಿರುದ್ಧ ಜನತಾ ಪ್ರತಿನಿಧಿ ಕಾಯೆ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಯಾವುಲ್ಲಾ ಎಚ್ಚರಿಕೆ ನೀಡಿದರು.
ಅದೇ ರೀತಿ ಬಲ್ಕ್ ಮೆಸೇಜ್ ಸೇವೆ ಒದಗಿಸಿದಾಗ ಜಾಹೀರಾತು ನೀಡಿದ ಪಕ್ಷ ಅಥವಾ ಅಭ್ಯರ್ಥಿಗಳಿಗೆ ನಿಖರವಾಗಿ ಬಿಲ್ ನೀಡಬೇಕು, ಪಕ್ಷ ಅಥವಾ ಅಭ್ಯರ್ಥಿ ಯಾರು ಬಲ್ಕ್ ಮೆಸೇಜ್ ನೀಡಿರುತ್ತಾರೋ ಅವರ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎಂದರು.
ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ಚು.ಆಯೋಗಕ್ಕೆ ದೂರು
ಪೂರ್ವಾನುಮತಿ ಅರ್ಜಿ
ಬಲ್ಕ್ ಮೆಸೇಜ್ ಕಳುಹಿಸಲು ಇಚ್ಛಿಸುವ ಪಕ್ಷ ಅಥವಾ ಅಭ್ಯರ್ಥಿಗಳು 'ವಾರ್ತಾಭವನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಯಾಲಯ ಆವರಣ ಬೆಳಗಾವಿ' ಇಲ್ಲಿ ನಿಗದಿತ ನಮೂನೆಯ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ಮೆಸೇಜ್‌ನ ಪ್ರತಿಯನ್ನು ನೀಡಿದರೆ ಅದನ್ನು ಪರಿಶೀಲಿಸಿ, ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಯ ಅಧ್ಯಕ್ಷರೂ ಆಗಿರುವ ಎಸ್.ಜಿಯಾವುಲ್ಲಾ ತಿಳಿಸಿದರು.
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್‌ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ, ಜಿಲ್ಲಾ ಗಣಕ ಅಧಿಕಾರಿ ಎಸ್.ಆರ್.ಕ್ಷೀರಸಾಗರ, ಬಿಎಸ್‍ಎನ್‍ಎಲ್ ಅಧಿಕಾರಿಗಳಾದ ಮೂಲಿಮನಿ ಮತ್ತಿತರರು ಉಪಸ್ಥಿತರಿದ್ದರು. ಬಲ್ಕ್ ಎಸ್‍ಎಂಎಸ್ ಸರ್ವೀಸ್ ಪ್ರೊವೈಡರ್‍ಗಳಾದ ಯುನಿಕ್ ಸಲ್ಯೂಷನ್ಸ್, ಪಿಸಾಫ್ಟ್, ಇಟಿಎಚ್1, ಆಡ್ ಸಿಂಡಿಕೇಟ್ ಸೇರಿದಂತೆ ವಿವಿಧ ಏಜೆನ್ಸಿಯವರು ಸಭೆಯಲ್ಲಿ ಪಾಲ್ಗೊಂಡಿದ್ದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!