ಸಿದ್ದರಾಮಯ್ಯಗೆ ಕಾನೂನು ತಜ್ಞ ಬ್ರಿಜೇಶ್ ಕಾಳಪ್ಪ ಕಿವಿಮಾತು

Written By:
Subscribe to Oneindia Kannada

ಬೆಂಗಳೂರು, ಜುಲೈ, 08: ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ಅಧಿಕಾರಿಗಳ ಸರಣಿ ಆತ್ಮಹತ್ಯೆ ಸಂಬಂಧ ಸಿಎಂ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ. ಹಲವಾರು ಅಂಶಗಳಿರುವ ಪತ್ರವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಪತ್ರದ ಪೂರ್ಣ ಪಾಠ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕದಲ್ಲಿ ಕೆಲ ಬದಲಾವಣೆ ತಂದು ಡಿವೈ ಎಸ್ ಪಿ ಗಣಪತಿ, ಕಲ್ಲಪ್ಪ ಆತ್ಮಹತ್ಯೆಯಂತಹ ಪ್ರಕರಣಗಳಿಗೆ ಅಂತ್ಯ ಹಾಡಬೇಕು ಎಂದು ಒತ್ತಾಯ ಮಾಡುತ್ತೇನೆ. ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಎಂಎಲ್ ಎ ಗಳು ನೇಮಿಸಿಕೊಳ್ಳುವ ಪದ್ಧತಿ ಇದೆ.[ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

karnataka

ಯಾವುದೇ ಕ್ಷೇತ್ರದ ಜನಪ್ರತಿನಿಧಿ ಅಥವಾ ಅವರ ಬೆಂಬಲಿಗರ ಮೇಲೆ ಆಪಾದನೆ ಕೇಳಿ ಬಂದರೆ, ಅದು ಸತ್ಯವಾಗಿರಲಿ ಸುಳ್ಳಾಗಿರಲಿ ಪ್ರಾಮಾಣಿಕ ತನಿಖೆ ಮಾಡಲು ನಿಯಮ ಅಡ್ಡ ಬರುತ್ತಿದೆ. ಆದರೆ ಎಲ್ಲದಕ್ಕೂ ಕಾರಣ ಹುಡುಕಿ ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಅಧಿಕಾರಿ ವರ್ಗಕ್ಕೆ ಅಧಿಕಾರಿಗಳ ನೇಮಕ ಆಯ್ಕೆಯನ್ನು ನೀಡಿದರೆ ಇಂಥ ಅವಘಡ ಸಂಭವಿಸಿದರೆ ಅದಕ್ಕೆ ಅಧಿಕಾರಿ ವರ್ಗವೇ ಜವಾಬ್ದಾರನಾಗುತ್ತದೆ. ಹಿರಿಯ ಅಧಿಕಾರಿಗಳು ತಮ್ಮ ಕೆಳಗಿನವರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇಂಥ ಘಟನೆಗಳು ನಡೆದಾಗ ಆರೋಪ ಮಾಡುವುದು ತಪ್ಪುತ್ತದೆ.[ಡಿವೈಎಸ್‌ಪಿ ಎಂ.ಕೆ.ಗಣಪತಿ ಡೆತ್ ನೋಟ್ ಎಲ್ಲಿ?]

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳನ್ನು ಜನಪ್ರತಿನಿಧಿಗಳೇ ನೇಮಕ ಮಾಡಿಕೊಳ್ಳುವ ಕಾನೂನು ಜಾರಿಗೆ ಬಂದಿತು. ಈಗ ಸರಿಯಾದ ಸಮಯ ಬಂದಿದ್ದು ಕಾನೂನಿಗೆ ತಿದ್ದುಪಡಿ ಮಾಡಬೇಕಿದೆ. 31 ವರ್ಷ ಹಿಂದಿನ ಪಾಲಿಸಿ ಇಂದಿನ ಕಾಲಮಾನಕ್ಕೆ ಹೊಂದಿಕೊಳ್ಳುತ್ತಿಲ್ಲ. ಕೆಲವೊಮ್ಮೆ ಅದಕ್ಷ ಅಧಿಕಾರಿಗಳ ನೇಮಕ ಮತ್ತು ಸ್ವಜನ ಪಕ್ಷಪಾತಕ್ಕೂ ಕಾರಣವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the suicides of Dy.S.P Ganapathy and Dy.S.P Kallappa, CM Siddaramaiah's legal advisor Brijesh Kalappa has written an open letter to CM Siddaramaiah to finally put an end to Public Representatives deciding the postings of Officers.
Please Wait while comments are loading...