ಪೊಲೀಸ್ ಎಸ್ಕಾರ್ಟ್‌ ಶುಲ್ಕಗಳಲ್ಲಿ ಭಾರೀ ಏರಿಕೆ!

ಬೆಂಗಳೂರು, ಡಿಸೆಂಬರ್ 05 : ಪೊಲೀಸ್ ಬೆಂಗಾವಲು ಪಡೆಯುವುದು ಇನ್ನು ಮುಂದೆ ದುಬಾರಿಯಾಗಲಿದೆ. ಕೇಂದ್ರ ಸರ್ಕಾರ ಬೆಂಗಾವಲು ಪಡೆಯಲು ವಿಧಿಸುತ್ತಿದ್ದ ಶುಲ್ಕವನ್ನು ಶೇ 600ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.

1992ರ ನಂತರ ನಿಗದಿ ಮಾಡಿದ್ದ ದರವನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಳ ಮಾಡಿದೆ. ಪೊಲೀಸ್ ಪೇದೆ, ಬೆಂಗಾವಲು ವಾಹನ ಯಾವುದೇ ಸೌಲಭ್ಯ ಪಡೆದರೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

Police escort service tariff hiked

ನವೆಂಬರ್ 30ರಂದು ಗೃಹ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ. ಸರ್ಕಾರ, ಖಾಸಗಿ ಸಂಸ್ಥೆ, ಖಾಸಗಿ ವ್ಯಕ್ತಿಗಳಿಗೆ ಒದಗಿಸುವ ಎಲ್ಲಾ ಸೇವೆಗಳಿಗೂ ಈ ಶುಲ್ಕ ಹೆಚ್ಚಳ ಅನ್ವಯವಾಗಲಿದೆ.

ದರಗಳ ವಿವರ :

ಕೇಂದ್ರ ಸರ್ಕಾರಿ ಇಲಾಖೆ ಅಥವ ಸಂಸ್ಥೆಗಳು

* ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನೇಮಿಸಿಕೊಂಡರೆ ಒಂದು ದಿನಕ್ಕೆ 400 ರೂ. (68 ಹಿಂದಿನ ದರ)
* ಹೆಡ್ ಕಾನ್‌ಸ್ಟೆಬಲ್‌ಗೆ ರೂ. 425 (ಹಿಂದಿನ ದರ ರೂ. 72)
* ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗೆ 572 ರೂ. (ಹಿಂದಿನ ದರ 83)
* ಸಬ್ ಇನ್‌ಸ್ಪೆಕ್ಟರ್‌ಗೆ 700 ರೂ. (ಹಿಂದಿನ ದರ 115)
* ಇನ್‌ಸ್ಪೆಕ್ಟರ್‌ಗೆ 725 ರೂ. (ಹಿಂದಿನ ದರ 126)

ವಾಹನ ಶುಲ್ಕ : ಬೆಂಗಾವಲು ವಾಹನಗಳನ್ನು ಪಡೆದರೆ ಪ್ರತಿ ಪೆಟ್ರೋಲ್ ವಾಹನಕ್ಕೆ ಕಿ.ಮೀ.ಗೆ 60 ರೂ., ಡೀಸೆಲ್ ವಾಹನಕ್ಕೆ ರೂ. 30 ಪಾವತಿ ಮಾಡಬೇಕು. ಈ ಹಿಂದೆ ಈ ದರ ಕೇವಲ 10 ಮತ್ತು 5ರೂ. ಇತ್ತು.

ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು

* ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನೇಮಿಸಿಕೊಂಡರೆ ಒಂದು ದಿನಕ್ಕೆ 775 ರೂ.(136 ಹಿಂದಿನ ದರ)
* ಹೆಡ್ ಕಾನ್‌ಸ್ಟೆಬಲ್‌ಗೆ ರೂ. 900 (ಹಿಂದಿನ ದರ ರೂ. 146)
* ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗೆ 950 ರೂ. (ಹಿಂದಿನ ದರ 166)
* ಸಬ್ ಇನ್‌ಸ್ಪೆಕ್ಟರ್‌ಗೆ 1,400 ರೂ. (ಹಿಂದಿನ ದರ 230)
* ಇನ್‌ಸ್ಪೆಕ್ಟರ್‌ಗೆ 1, 500 ರೂ. (ಹಿಂದಿನ ದರ 252)

ಬೆಂಗಾವಲು ವಾಹನಗಳನ್ನು ಪಡೆದರೆ ಪ್ರತಿ ಪೆಟ್ರೋಲ್ ವಾಹನಕ್ಕೆ ಕಿ.ಮೀ.ಗೆ 120 ರೂ., ಡೀಸೆಲ್ ವಾಹನಕ್ಕೆ ರೂ. 60 ಪಾವತಿ ಮಾಡಬೇಕು. ಈ ಹಿಂದೆ ಈ ದರ ಕೇವಲ 20 ಮತ್ತು 10 ರೂ. ಇತ್ತು.

ಖಾಸಗಿ ಬ್ಯಾಂಕುಗಳು ಪೆಟ್ರೋಲ್ ವಾಹನವನ್ನು ಬೆಂಗಾವಲಿಗೆ ಪಡೆದರೆ ಪ್ರತಿ ಕಿ.ಮೀ.ಗೆ 120 ರೂ. ಡೀಸೆಲ್ ವಾಹನ ಪಡೆದರೆ 60 ರೂ. ಪಾವತಿ ಮಾಡಬೇಕಿದೆ. ಸರ್ಕಾರದ ಖಜಾನೆಯ ವಾಹನಗಳಿಗೆ ಈ ಯಾವುದೇ ಶುಲ್ಕಗಳು ಅನ್ವಯವಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+