PM Modi: ಆದಿಚುಂಚನಗಿರಿ ಮಠಕ್ಕೆ 'ನಮೋ' ಭೇಟಿ: ಕರ್ನಾಟಕ ಸಂಸ್ಕೃತಿ, ಮಠದ ಸೇವೆಗೆ ಮೆಚ್ಚುಗೆ
ಮಂಡ್ಯ: ಕರ್ನಾಟಕ ತಂತ್ರಜ್ಞಾನ, ತತ್ವಜ್ಞಾನ ಎರಡನ್ನು ಸಮೃದ್ಧಿ ಹೊಂದಿದೆ. ಇಂದು ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ದರ್ಶನ ಪಡೆದಿದ್ದು ನನ್ನು ಪುಣ್ಯ, ನನ್ನ ಸೌಭಾಗ್ಯ. ಈ ಅನುಭವವನ್ನು ನಾನು ಎಂದಿಗೂ ಮರೆಯುವುದಿಲ್ಲ ಮಠದ ಪರಂಪರೆ ಸ್ಮರಿಸಿದರು. ಸಕ್ಕರೆ ನಾಡು ಮಂಡ್ಯ ನಾಡು. ಕಬ್ಬಿನಂತೆ ಮಂಡ್ಯದ ಜನರ ಮಾತು ಸಿಹಿ ಎಂದು ರಾಜ್ಯದ ಜನರನ್ನು ಪ್ರಧಾನಿ ಹೊಗಳಿ ಹೊಗಳಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಇಂದು ಬುಧವಾರ (ಏಪ್ರಿಲ್ 15) ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದರು. ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಿಸಿದ ಭಭ್ಯವಾದ "ಶ್ರೀ ಗುರು ಭೈರವೈಕ್ಯ ಮಂದಿರ"ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದೇ ವೇಳೆ 'ಸೌಂದರ್ಯ ಲಹರಿ' ಪುಸ್ತಕವನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಿದರು. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ನವಿಲಿನ ಆಕೃತಿಯನ್ನು ಪ್ರಧಾನಿ ಅವರಿಗೆ ನೀಡಿದರು. ಬಳಿಕ ವೇದಿಕೆ ಮೇಲೆ ಪ್ರಧಾನಿ 'ನಮೋ' ಕನ್ನಡದಲ್ಲಿ ಭಾಷಣ ರಂಭಿಸಿದರು.
ಸಮಾಜಕ್ಕೆ ಆದಿಚುಂಚನಗಿರಿ ಮಠ ಸೇವೆ ಅಪಾರ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬಾಲಗಂಗಾಧರನಾಥ ಶ್ರೀಗಳ ಪರಂಪರೆಯು ಅಮೋಘವಾದದ್ದು. ಈ ಮಠದ ನೈತಿಕ ಮೌಲ್ಯಗಳಿಂದ ದಾರಿ ದೀಪವಾಗಿದೆ. ಆದಿಚುಂಚನಗಿರಿ ಮಠಕ್ಕೆ 1800 ವರ್ಷಗಳ ಇತಹಾಸವಿದೆ ಎಂದು ಮಠದ ಇತಿಹಾಸ, ಸೇವೆಯನ್ನು ಪ್ರಧಾನಿ ಸ್ಮರಿಸಿದರು.
ಶ್ರೀಮಠವು ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಮಠ ಸೇವೆ, ಕಾರ್ಯ ಸದಾ ಜೀವಂತ. ಸಾಮಾನ್ಯ ಜನರ ಜೀವನ ಬಗ್ಗೆ ಬಾಲಗಂಗಾಧರನಾಥ ಶ್ರೀಗಳಿಗೆ ಅರಿವಿತ್ತು. ಅವರು ದಿವ್ಯ ಶಕ್ತಿ ಹೊಂದಿದ್ದರು. ಶ್ರೀಗಳು ಕರುಣೆಯ ಪ್ರತಿರೂಪವಾಗಿದ್ದಾರೆ ಎಂದು ಕೊಂಡಾಡಿದರು. ಇಂದು ಶ್ರೀ ಮಠವನ್ನು ಶ್ರೀ ನಿರ್ಮಲಾನಂದ ಶ್ರೀಗಳು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಸ್ವದೇಶಿ ಆಹಾರದ ಕಡೆ ಗಮನಹರಿಸಿ: ನಮೋ
ಎಣ್ಣೆ ಪದಾರ್ಥ ಸೇವನೆ ಕಡಿಮೆ ಮಾಡಿ, ಆರೋಗ್ಯ ಕಾಳಜಿ ವಹಿಸಿ. ದೇಶಿ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ. ಸ್ವದೇಶಿ ಆಹಾರದ ಕಡೆಗೆ ಗಮನಕೊಡಿ ಎಂದು ಈ ಭಾಗದಲ್ಲಿ ರಾಗಿ ಮುದ್ದೆ ಕುರಿತು ಅವರು ಪ್ರಸ್ತಾಪಿಸಿದರು.
ಈ ಮಹತ್ವದ ಕಾರ್ಯಕ್ರಮಕ್ಕು ಮುನ್ನ ಇದಕ್ಕು ಮುನ್ನ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಸ್ವಾಗತಿಸಿದರು. ಆದಿಚುಂಚನಗಿರಿ ಮಠಕ್ಕೆ ಆಗಮಿಸುತ್ತಿದ್ದಂತೆ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಬರಮಾಡಿಕೊಂಡರು. ಜನರು ಮೋದಿ...ಮೋದಿ...ಎಂದು ಘೋಷಣೆ ಕೂಗಿದ್ದು ಕಂಡು ಬಂತು. ಶ್ರೀಗಳು ಶಾಲು ಹೊದಿಸಿ ಪ್ರಧಾನಿಯವರನ್ನು ಗೌರವಿಸಿದರು.
80 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸಾಮಾಜಿಕ ಸೇವೆಯಲ್ಲಿ ಆದಿಚುಂಚನಗಿರಿ ಶ್ರೀಗಳ ಕೊಡುಗೆ ಅಪಾರ. ಆದಿ ಚುಂಚನಗಿರಿ ಮಠವು ಅಪಾರ ಭಕ್ತರನ್ನು ಹೊಂದಿದೆ ಎಂದು ಮಠ ಐತಿಹಾಸಿಕ ಪರಂಪರೆಯನ್ನು ಅವರು ಸ್ಮರಿಸಿದರು.
ಮೂರು ಆಲಯ ಹೊಂದಿರುವ ಭೈರವೈಕ್ಯ, ಒಟ್ಟು 80 ಕೋಟಿ ರೂಪಾಯಿ ವೆಚ್ಚದಲ್ಲಿ ದ್ರಾವಿಡ್ ಶೈಲಿಯಲ್ಲಿ ನಿರ್ಮಾಣಗೊಂಡ ಭ್ಯವಯ ಮಂದಿ ಇದಾಗಿದೆ ಎಂದರು.
LIVE: PM Shri @narendramodi inaugurates Sri Guru Bhairavaikya Mandira at Sri Kshetra Adichunchanagiri in Mandya, Karnataka. https://t.co/NTQq0BKC9x
— BJP (@BJP4India) April 15, 2026
ಪ್ರಧಾನಿ ಆಡಳಿತ ಕೊಂಡಾಡಿದ ಶ್ರೀಗಳು
ಪ್ರಧಾನಿ ಮೋದಿಗೆ ಅಭಿನಂದಿಸಿದ ಮಠದ ನಿರ್ಮಲಾನಂದ ಶ್ರೀಗಳು ಮಾತನಾಡಿ, ದಿವ್ಯ ಪರಂಪರೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರ ಆಗಮನ ಹರ್ಷ ತಂದಿದೆ. ಪ್ರಧಾನಮಂತ್ರಿಗಳ ಇಂದಿನ ಉಪಸ್ಥಿತಿ ಕೋಟ್ಯಾಂತರ ಭಕ್ತರ ಆಸೆ ನೆರವೇರಿದೆ. ಪ್ರಧಾನಿಯವರ ನಾಯಕತ್ವದಲ್ಲಿ ಭಾರತ ಮುನ್ನುಗ್ಗುತ್ತಿದೆ. ಅವರು ದೇಶದ ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಆರ್ಥಿಕತೆ ಅಭಿವೃದ್ಧಿ ಆಗಿದೆ. ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ನಮ್ಮ ಮಠಕ್ಕೆ ಕೋಟ್ಯಾಂತರ ಭಕ್ತರ ಕೊಡುಗೆ ಇದೆ. ಇಲ್ಲಿ ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತ್ರಿವಿಧ ದಾಸೋಹ ಕುರಿತು ವಿವರಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಕೊಡುಗೆ ಜೊತೆಗೆ ಮಠದ ಪರಂಪರೆ ತಿಳಿಸಿದರು ಮತ್ತು ಪ್ರಧಾನಿ ಆಡಳಿತವನ್ನು ಹಾಡಿ ಹೊಗಳಿದರು.












Click it and Unblock the Notifications