ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM Modi Meets Yediyurappa: ಬಿಎಸ್‌ವೈ ಜೊತೆ ಮೋದಿ ಕಳೆದ ಆ 15 ನಿಮಿಷ, ಕೊನೆಗೂ ಅರಿವಾದ 'ಅನಿವಾರ್ಯತೆ'?

|
Google Oneindia Kannada News

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿರುವ ಯಡಿಯೂರಪ್ಪ ನವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಕಷ್ಟು ಅಸಮಾಧಾನಕ್ಕೆ ಒಳಪಟ್ಟಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬಿ.ಎಸ್ ಯಡಿಯೂರಪ್ಪನವರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದ ಈ ರಾಜಕೀಯ ನಾಯಕರಿಗೆ ಇದೇ ಕೊನೆ ಚುನಾವಣೆ: ಯಾರ‍್ಯಾರು ನೋಡಿ? ಕಾರಣವೇನು?
ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಈ ಒಂಬತ್ತು ರಾಜ್ಯಗಳ ಚುನಾವಣಾ ಕಾರ್ಯತಂತ್ರವು ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾರ್ಯಕಾರಿಣಿ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ. ಇದರಲ್ಲಿ ಪಿಎಂ ಮೋದಿ ಮತ್ತು ಪಕ್ಷದ ಪ್ರಮುಖ ನಾಯಕರು ಮತ್ತು ಸಚಿವರು ಭಾಗಯಾಗಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿದ ಬಳಿಕ ಅವರಿಗೆ ಬಿಜೆಪಿಯಲ್ಲಿ ಮಹತ್ವದ ಸ್ಥಾನವೇನೂ ನೀಡಿಲ್ಲ. ಅವರು ಬಿಜೆಪಿ ಕೇಂದ್ರ ಸಂಸದೀಯ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯದಲ್ಲಿ, ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಯಡಿಯೂರಪ್ಪ ಅವರನ್ನು ಕಡೆಗಣಿಸಿದಷ್ಟೂ ಪಕ್ಷಕ್ಕೆ ಹಿನ್ನಡೆ ಎನ್ನುವುದು ಕೇಂದ್ರ ನಾಯಕರಿಗೆ ತಿಳಿದಿದೆ.

ಕರ್ನಾಟಕ ಚುನಾವಣೆ 2023: ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಅವರನ್ನು ಕೆಣಕದಿರುವುದು ಬಿಜೆಪಿಗೆ ಒಳ್ಳೆಯದು!ಕರ್ನಾಟಕ ಚುನಾವಣೆ 2023: ಕಾಂಗ್ರೆಸ್‌ಗಿಂತ ಯಡಿಯೂರಪ್ಪ ಅವರನ್ನು ಕೆಣಕದಿರುವುದು ಬಿಜೆಪಿಗೆ ಒಳ್ಳೆಯದು!

ಅದರಲ್ಲಿಯೂ ಚುನಾವಣೆ ಹತ್ತಿರವಾಗುತ್ತಿದ್ದ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಶಕ್ತಿ ಪಕ್ಷಕ್ಕೆ ಅತಿ ಅಗತ್ಯವಾಗಿದ್ದು, ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಅವರನ್ನು ಪಕ್ಷದ ಉನ್ನತ ನಿರ್ಧಾರ ಕೈಗೊಳ್ಳುವ ಸಂಸದೀಯ ಮಂಡಳಿಗೆ ನೇಮಿಸಲಾಗಿತ್ತು.

 ಮೋದಿ ಮತ್ತು ಬಿಎಸ್ವೈ ನಡುವೆ ಮಾತುಕತೆ

ಮೋದಿ ಮತ್ತು ಬಿಎಸ್ವೈ ನಡುವೆ ಮಾತುಕತೆ

ಬಿ.ಎಸ್.ಯಡಿಯೂರಪ್ಪ ನವರ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರ ನೇತೃತ್ವಲ್ಲಿ ಸರ್ಕಾರ ಸಾಲು ಸಾಲು ಭ್ರಷ್ಟಾಚಾರದ ಆರೋಪವನ್ನ ಎದುರಿಸುತ್ತಿರುವ ನಡುವೆ, ಚುನಾವಣಾ ಉಸ್ತುವಾರಿ ಅವರ ನೇತೃತ್ವದಲ್ಲಿ ನಡೆದರೇ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಹೈಕಮಾಂಡ್ ನಾಯಕರಿಗೆ ಎದುರಾಗಿದೆ.

ಇತ್ತ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ನವರನ್ನ ಕೆಳಗಿಳಿಸಿದ ಬಳಿಕ ಕರ್ನಾಟಕದಲ್ಲಿ ಯಡಿಯೂರಪ್ಪ ನವರ ವರ್ಚಸ್ಸು ಹಾಗೂ ಪಕ್ಷಕ್ಕೆ ಅವರ ಅವಶ್ಯಕತೆ ಈಗ ಹೈಕಮಾಂಡ್ ಗೆ ಅರಿವಾಗಿದೆ. ಇದು ಹಲವು ಸಂದರ್ಭದಲ್ಲಿ ರುಜುವಾತು ಆಗಿದೆ ಕೂಡಾ..

 ಸಿಎಂ ಬೊಮ್ಮಾಯಿ ವಿರುದ್ದ ವಿರೋಧ ಪಕ್ಷಗಳ ಪೇಸಿಎಂ ಅಭಿಯಾನ

ಸಿಎಂ ಬೊಮ್ಮಾಯಿ ವಿರುದ್ದ ವಿರೋಧ ಪಕ್ಷಗಳ ಪೇಸಿಎಂ ಅಭಿಯಾನ

ಈ ಬಾರೀ ಸ್ವಂತ ಬಲದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪನವರ ಕೋಪವನ್ನು ಶಮನ ಮಾಡುವುದು ಅನಿವಾರ್ಯವಾಗಿದ್ದು, ಹಾಗೂ ಮುಂದಿನ ಚುನಾವಣಾ ರೂಪರೇಷೆಗಳ ಕುರಿತು ಪ್ರಧಾನಿ ಮೋದಿಯವರು 15 ನಿಮಿಷಗಳ ಕಾಲ ಯಡಿಯೂರಪ್ಪನವರ ಜೊತೆಗೆ ಚರ್ಚಿಸಿದ್ದಾರೆ.

ಇನ್ನು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೇರಿ PayCM ಅಭಿಯಾನವನ್ನು ಪ್ರಾರಂಭಿಸಿದ್ದರಿಂದ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯು ಕಳೆದ ವರ್ಷ ಅಲುಗಾಡುತ್ತಿತ್ತು. ಆದರೆ ಯಾವುದೇ ಬದಲಾವಣೆ ಇಲ್ಲ ಮತ್ತು ಅವರ ನೇತೃತ್ವದಲ್ಲಿಯೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಹೈಕಮಾಂಡ್ ಸಮರ್ಥಿಸಿಕೊಂಡಿತ್ತು.

 ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ

ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ

ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ ಅವರು ಕರ್ನಾಟಕದ 224 ಕ್ಷೇತ್ರಗಳ ಪೈಕಿ 136ರಲ್ಲಿ ಗೆಲ್ಲುವಂತೆ ಮಿಷನ್ 136 ಗುರಿಯನ್ನು ಕರ್ನಾಟಕದ ಬಿಜೆಪಿ ನಾಯಕರಿಗೆ ನೀಡದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರಸ್ ಈಗಾಗಲೇ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಮಹಿಳಾ ಮತಗಳನ್ನ ಸೆಳೆಯುವ ನಿಟ್ಟಿನಲ್ಲಿ ಉಚಿತ ವಿದ್ಯುತ್ ಹಾಗೂ ಗೃಹಣಿಯರಿಗೆ ಮಾಸಾಶಾನದಂತಹ ಘೋಷಣೆಗಳನ್ನು ಮಾಡುತ್ತಿದ್ದು, ಇದು ಬಿಜೆಪಿ ತಳಮಳ ಶುರುವಾಗುವಂತೆ ಮಾಡಿದೆ.

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಶಾಸಕರ ವಲಸೆಯ ನಂತರ ಸರ್ಕಾರ ಪತನಗೊಂಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಇನ್ನೂ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

 ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ

ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ

ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳನ್ನ ಎದುರಿಸುವಂತ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರು ಹಿಂದೆ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೇ ಯಡಿಯೂರಪ್ಪ ಅನಿವಾರ್ಯ ಎಂದು ಪಕ್ಷದ ಕಾರ್ಯಕರ್ತರಲ್ಲೇ ಈ ರೀತಿಯ ಚರ್ಚೆ ಜೋರಾಗಿ ಕೇಳಿಬರುತ್ತಿದೆ.

ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅಬ್ಬರದ ಪ್ರಚಾರ ಹಾಗೂ ಚುನಾವಣಾ ತಂತ್ರಕ್ಕೆ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾಗಿದ್ದಾರೆ. ಈಗಾಗಲೇ ಚುನಾವಣಾ ಕಾರ್ಯತಂತ್ರದಿಂದ ದೂರ ಉಳಿದಿರುವ ಯಡಿಯೂರಪ್ಪನವರು ಮೌನವಾಗಿದ್ದು, ಕೇವಲ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇತ್ತ ಮುಖ್ಯಮಂತ್ರಿ ಸ್ಥಾನಕ್ಕೆ ಕೆಳಗಿಸುವ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಹಾಗೂ ಪಕ್ಷದಲ್ಲಿ ಮೊದಲಿನಂತೆ ಗೌರವ ಸಿಗುತ್ತಿಲ್ಲ ಎಂಬ ಬೇಸರ ಯಡಿಯೂರಪ್ಪ ಸೇರಿದಂತೆ ಅವರ ಆಪ್ತರಲ್ಲೂ ಹೆಚ್ಚಾಗಿದೆ. ಚುನಾವಣಾ ಹೊತ್ತಲ್ಲಿ ಈ ರೀತಿಯ ಮೌನ ನಡೆ ಸರಿಯಲ್ಲ ಎಂಬ ಕುರಿತು ಮೋದಿಯವರು ಯಡಿಯೂರಪ್ಪನವರ ಜೊತೆ ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

English summary
Karnataka Assembly Elections 2023 : Former CM BS Yediyurappa had a meeting with PM Narendra Modi for around 15 minutes. Speculations BS Yediyurappa's role rise in the organisation ahead of the elections.Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X