ಬೀದರ್‌ : ಕಾಂಗ್ರೆಸ್ ಕಾಲೆಳೆದು ಚಪ್ಪಾಳೆ ಗಿಟ್ಟಿಸಿದ ಮೋದಿ

ಬೀದರ್, ಅಕ್ಟೋಬರ್ 29 : ಪ್ರಧಾನಿ ನರೇಂದ್ರ ಮೋದಿ ಬೀದರ್‌ಗೆ ಆಗಮಿಸಿದ್ದಾರೆ. ನೆಹರು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ.

In Pics : ಧರ್ಮಸ್ಥಳದಲ್ಲಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಬೀದರ್-ಕಲಬುರಗಿ ರೈಲು ಮಾರ್ಗವನ್ನು ಉದ್ಘಾಟಿಸಿದರು. ನಂತರ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

Narendra Modi

ಮೋದಿ ಸಮಾವೇಶದಲ್ಲಿ ಹೇಳಿದ್ದೇನು?

* ಬೀದರ್-ಕಲಬುರಗಿ ರೈಲು ಮಾರ್ಗ ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು.

* ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, 'ಪ್ರಚಾರಕ್ಕಾಗಿ ಅವರು ಜನಪರ ಯೋಜನೆಗಳನ್ನು ಘೋಷಣೆ ಮಾಡಿದರು. ಆದರೆ, ಅದನ್ನು ಜಾರಿಗೆ ತರಲಿಲ್ಲ' ಎಂದು ಟೀಕಿಸಿದರು.

* ನಾನು ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ. ರೈಲು ಮಾರ್ಗ ಪೂರ್ಣವಾಗಲು ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೋದಿ ಹೇಳಿದರು

* ನಾನು ಕೆಂಪುಕೋಟೆ ಮೇಲೆ ಘೋಷಣೆ ಮಾಡಿದ್ದೆ. 18000 ಮನೆಗಳಿಗೆ 1000 ದಿನದಲ್ಲಿ ವಿದ್ಯುತ್ ಸೌಲಭ್ಯ ಒದಗಿಸುತ್ತೇನೆ ಎಂದು. ಇನ್ನೂ ಸಾವಿರ ದಿನ ಕಳೆದಿಲ್ಲ 15000 ಮನೆಗಳಿಗೆ ವಿದ್ಯುತ್ ಸೌಲಭ್ಯ ಸಿಕ್ಕಿದೆ.

* ಒಬ್ಬ ಶ್ರೀಮಂತನಿಗೆ ಅನಾರೋಗ್ಯವಾದರೆ ಸರ್ಕಾರದ ಅಗತ್ಯವಿಲ್ಲ. ಆದರೆ, ಬಡವನಿಗೆ ಅನಾರೋಗ್ಯವಾದರೆ ಸರ್ಕಾರದ ಅಗತ್ಯವಿದೆ. ಬಡವರ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿಯಾಗಿದೆ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.

* ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರು ವರ್ಷಗಳಲ್ಲಿ 26 ಸಾವಿರ ಕಿ.ಮೀ.ರೈಲು ಮಾರ್ಗ ನಿರ್ಮಾಣವಾಗಿದೆ.

* ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿರಲಿಲ್ಲ. ಹಣ ರೈತರನ್ನು ತಲುಪುವ ಮೊದಲೇ ಅದನ್ನು ಲೂಟಿ ಮಾಡಲಾಗುತ್ತಿತ್ತು. ಆದರೆ, ನಮ್ಮ ಸರ್ಕಾರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಹಾಕುವ ಮೂಲಕ ಲೂಟಿಯನ್ನು ತಪ್ಪಿಸಿದೆ.

* ನಾವು ಯಾವುದೇ ಯೋಜನೆಯನ್ನು ಘೋಷಣೆ ಮಾಡಿ ಸುಮ್ಮನೆ ಕೂರಲಿಲ್ಲ. ಅದನ್ನು ಪರಿಣಾಮಗಾರಿಯಾಗಿ ಜಾರಿಗೆ ತಂದೆವು. ಜನರಿಗೆ ಅದು ತಲುಪುವಂತೆ ನೋಡಿಕೊಂಡೆವು.

ಮೋದಿ ಭಾಷಣದ ವಿಡಿಯೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+