SCO Summit India: ಪಾಕಿಸ್ತಾನಕ್ಕೆ ಭಯೋತ್ಪಾದಕರ ಮೇಲೆ ಲವ್: ಪಾಕ್ ಪ್ರಧಾನಿ ಎದುರಲ್ಲೇ ಪಾಕಿಸ್ತಾನದ ಮಾನ ಹರಾಜು ಹಾಕಿದ ಮೋದಿ!
ನವದೆಹಲಿ: ಭಾರತಕ್ಕಿಂದು ಐತಿಹಾಸಿಕ ದಿನ, ಹೇಗೆಂದರೆ 'ಶಾಂಘೈ ಸಹಕಾರ ಸಂಘಟನೆ' ಸಭೆಯ ಅಧ್ಯಕ್ಷತೆಯನ್ನ ಭಾರತ ಇದೇ ಮೊದಲ ಬಾರಿ ವಹಿಸಿಕೊಂಡಿದ್ದು, ಈ ಮಹತ್ವದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಆದರೆ ಇದೇ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿಗೆ ಶಾಕ್ ಕೊಟ್ಟರು. ಪಾಕಿಸ್ತಾನ ಹೆಸರು ಹೇಳದೆ 'ಭಯೋತ್ಪಾದಕರಿಗೆ ಬೆಂಬಲ ನೀಡುವ ದೇಶ' ಎಂದು ಪ್ರಧಾನಿ ಮೋದಿ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.
ಹೌದು, ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿ ಬಂದ ಬಳಿಕ ಇಡೀ ಜಗತ್ತು ಇಂದು ಮತ್ತೊಮ್ಮೆ ಭಾರತದ ಕಡೆ ತಿರುಗಿ ನೋಡಿದೆ. 'ಶಾಂಘೈ ಸಹಕಾರ ಸಂಘಟನೆ' ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಪಂಚವೇ ಕಾಯುತ್ತಿತ್ತು. ಅಂದುಕೊಂಡಂತೆ ಸಭೆ ಆರಂಭವಾಗಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಂ ಮೋದಿ ಮಾತು ಆರಂಭಿಸಿದರು. ಆಗ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಸೇರಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪಾಕಿಸ್ತಾನದ ಭಯೋತ್ಪಾದಕ ಪ್ರೀತಿ ಬಗ್ಗೆ ಪ್ರಧಾನಿ ಮೋದಿ ನೇರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಗ್ರವಾದ ಸಹಿಸುವ ಮಾತೇ ಇಲ್ಲ!
ಅಂದಹಾಗೆ ಇಡೀ ಜಗತ್ತೇ 'ಶಾಂಘೈ ಸಹಕಾರ ಸಂಘಟನೆ' ಸಭೆ ಮೇಲೆ ಕಣ್ಣಿಟ್ಟಿರುವಾಗಲೇ ಉಗ್ರರಿಗೆ ಖಡಕ್ ಸಂದೇಶ ಕಳುಹಿಸಿದ್ದಾರೆ ಪ್ರಧಾನಿ ಮೋದಿ. ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕರ ಪೋಷಕ ಎಂದು ಕರೆದ ಪ್ರಧಾನಿ, ನಂತರ ಉಗ್ರರಿಗೆ ಶಾಸ್ತಿ ಕಾದಿರುತ್ತದೆ ಎಂಬ ಸಂದೇಶ ಕೊಟ್ಟರು. ಅಲ್ಲದೆ ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ತನ್ನ ಹೋರಾಟ ಮುಂದುವರಿಸಿದೆ. ಆದರೆ ಕೆಲವು ದೇಶಗಳು ಗಡಿಯಾಚನೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿವೆ ಹಾಗೂ ಅದನ್ನೇ ಅಸ್ತ್ರವಾಗಿ ಬಳಸುತ್ತಿವೆ. ಶಾಂಘೈ ಸಹಕಾರ ಶೃಂಗಸಭೆ ಭಯೋತ್ಪಾದನೆ ಪೋಷಿಸುವ ದೇಶವನ್ನು ಖಂಡಿಸುತ್ತದೆ. ನಾವು ಇದನ್ನ ಸಹಿಸುವ ಮಾತೇ ಇಲ್ಲ ಎಂದರು ಪ್ರಧಾನಿ ಮೋದಿ. ಈ ಮೂಲಕ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಉಗ್ರ ಪೋಷಕ ಪಾಕ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ ಪ್ರಧಾನಿ.
#WATCH | Prime Minister Narendra Modi at the Shanghai Cooperation Organization (SCO), says "Terrorism is a threat to regional and global peace. We will have to fight against terrorism...Some countries use cross-border terrorism as an instrument of their policies and give shelter… pic.twitter.com/qOjYt3Juo5
— ANI (@ANI) July 4, 2023
ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು?
ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಪ್ರತಿಯಾಗಿ 'ಶಾಂಘೈ ಸಹಕಾರ ಸಂಘಟನೆ' 2001ರಲ್ಲಿ ರಚನೆಯಾಗಿತ್ತು. ಈ ಸಂಘಟನೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಸೇರಿದಂತೆ ಕಿರ್ಗಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ. ಈ ಬಾರಿ ಭಾರತ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ಅಧ್ಯಕ್ಷತೆ ವಹಿಸಿದೆ. ಈ ವರ್ಚ್ಯುಯಲ್ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಕಜಕಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ ದೇಶಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಈ ವೇಳೆ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನದ ಮಾನ ಹರಾಜು ಹಾಕಿದ್ದಾರೆ ಪ್ರಧಾನಿ.

ಉಗ್ರ ಪೋಷಕ ಪಾಕಿಸ್ತಾನಕ್ಕೆ ಮುಖಭಂಗ!
ಪಾಶ್ಚಿಮಾತ್ಯ ದೇಶಗಳು & ಚೀನಾ-ರಷ್ಯಾ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಹೀಗಾಗಿ ಅತ್ತ ಅಮೆರಿಕ ಹಾಗೂ ಇತ್ತ ರಷ್ಯಾ ಭಾರತವನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿದ್ದಾಗ ಭಾರತ ಯಾರ ಜೊತೆಗೂ ದ್ವೇಷ ಕಟ್ಟಿಕೊಳ್ಳದೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿದೆ. ಹೀಗೆ ಪಿಎಂ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡರು. ಈ ಬೆಳವಣಿಗೆ ಜಗತ್ತಿನ ಗಮನ ಸೆಳೆದಿತ್ತು. ಹಾಗೇ ರಷ್ಯಾ ಮತ್ತು ಚೀನಾ ಕೂಡ ಭಾರತ ಹಾಗೂ ಅಮೆರಿಕ ಸಂಬಂಧದ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ ಕೆಲ ದಿನಗಳ ನಂತರ, ಶಾಂಘೈ ಸಹಕಾರ ಸಂಘಟನೆ ಸಭೆ ಅಧ್ಯಕ್ಷತೆ ವಹಿಸಿರುವುದು ವಿಶೇಷ. ಇದೇ ಸಭೆಯಲ್ಲಿ ಪಾಕಿಸ್ತಾನಕ್ಕೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಪ್ರಧಾನಿ ಮೋದಿ, ಇದರ ಜೊತೆಗೆ ಪಿಎಂ ಮೋದಿ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.
ಶಾಂಘೈ ಶೃಂಗಸಭೆ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಯಿತು. ಭಾರತ ಮತ್ತು ಚೀನಾ ಮಧ್ಯೆ ಗಡಿ ಫೈಟ್ ನಡೆಯುವಾಗಲೇ ಎರಡು ದೇಶದ ನಾಯಕರು ಒಂದೇ ಕಡೆ ಸೇರಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಒಟ್ಟಿಗೆ ಭಾಗವಹಿಸಿದ್ದರು. ಆದ್ರೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಚಳಿ ಬಿಡಿಸಿದ್ದಾರೆ. ಆದರೂ ಪಾಕಿಸ್ತಾನ ತನ್ನ ಚಾಳಿ ಬಿಡುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications