PM Modi in Belagavi Live : ಬೆಳಗಾವಿಯಿಂದ ನಿರ್ಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರು ಕಾತರರಾಗಿದ್ದಾರೆ. ಪ್ರಧಾನಿಯ ಕರ್ನಾಟಕ ಭೇಟಿ, ಪಾಲ್ಗೊಳ್ಳುವ ಕಾರ್ಯಕ್ರಮ ಸೇರಿದಂತೆ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ.

ಬೆಂಗಳೂರು, ಫೆಬ್ರವರಿ 27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸೋಮವಾರ (ಫೆ. 27) ಕರ್ನಾಟಕಕ್ಕೆ ಭೇಟಿ ನೀಡಿದರು. ಅವರ ಆಗಮನಕ್ಕೆ ಕೆಲವೇ ಕ್ಷಣಗಳು ಬಾಕಿ ಇವೆ. ರಾಜ್ಯದ ಮಲೆನಾಡಿನ ಜಿಲ್ಲೆ ಶಿವಮೊಗ್ಗ ಮತ್ತು ದೊಡ್ಡ ಜಿಲ್ಲೆ ಬೆಳಗಾವಿ ಗೆ ಅವರು ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಮಂತಿಗಳು ಫೆಬ್ರವರಿ ತಿಂಗಳಲ್ಲೇ ಕರ್ನಾಟಕಕ್ಕೆ ಇದು ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಇದರಲ್ಲಿ ಚುನಾವಣಾ ತಂತ್ರವು ಅಡಗಿದೆ ಎನ್ನಲಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಷ್ಟ್ರಕವಿ ಕುವೆಂಪು ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅವರು ಉದ್ಘಾಟಿಸಲಿದ್ದಾರೆ. ಜೊತೆಗೆ ಕೆಲವು ಶಂಕುಸ್ಥಾಪನೆಗಳನ್ನು ಅವರು ನೆರವೇರಿಸಿದರು.

PM Modi in Karnataka Live Updates; PM to Inaugurate Shivamogga Airport & Launch Development Projects in Belagavi

ಶಿವಮೊಗ್ಗ ಭೇಟಿ ಬಳಿಕ ಸೋಮವಾರವೇ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ತೆರಳಿದರು. ಅಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ದೇಶವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಲವು ಷರತ್ತು ವಿಧಿಸಿದ್ದರಿಂದ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. ಇನ್ನು ಎರಡು ಕಾರ್ಯಕ್ರಮಗಳಲ್ಲಿ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಆಸನ ವ್ಯವಸ್ಥೆ, ಶಿವಮೊಗ್ಗ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರು ಕಾತರರಾಗಿದ್ದಾರೆ. ಪ್ರಧಾನಿಯ ಕರ್ನಾಟಕ ಭೇಟಿ, ಪಾಲ್ಗೊಳ್ಳುವ ಕಾರ್ಯಕ್ರಮ ಸೇರಿದಂತೆ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ.

Feb 27, 2023, 5:40 pm IST

ವಿಶೇಷ ಸೇನಾ ಹೆಲಿಕಾಪ್ಟರ್‌ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದತ್ತ ತೆರಳಿದ ಪ್ರಧಾನಿ ಮೋದಿ
Feb 27, 2023, 5:35 pm IST

ಭಾಷಣ ಮುಗಿಸಿ ನಿರ್ಗಮಿಸಿದ ಪ್ರಧಾನಿ

ಬೆಳಗಾವಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಷಣ ಮುಗಿಸಿ ನಿರ್ಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ. ದೆಹಲಿಯತ್ತ ವಾಪಾಸ್ ಪ್ರಯಾಣ ಬೆಳೆಸಿದ ಪ್ರಧಾನಿ.
Feb 27, 2023, 5:32 pm IST

ಕಾಂಗ್ರೆಸ್‌ನ ಪರಿವಾರದ ವಿರುದ್ಧ ಮಾತನಾಡಿದರೆ ನಾಯಕರನ್ನು ಅಪಮಾನ ಮಾಡುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಸ್ಕೃತಿ.- ಪ್ರಧಾನಿ ಮೋದಿ
Feb 27, 2023, 5:28 pm IST

ನಾನು ಬದುಕಿರೋದೆ ಅವರಿಗೆ ಸಮಸ್ಯೆ

ಡಬಲ್ ಎಂಜಿನ್ ಸರ್ಕಾರಕ್ಕೆ ಜನಪರ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಮೋದಿ ಸಮಾಧಿ ತೋಡಬೇಕು ಎಂದು ಕಾಯುತ್ತಿದ್ದಾರೆ. ಕಾಂಗ್ರೆಸ್‌ನವರು ಎಷ್ಟು ನಿರಾಶರಾಗಿದ್ದಾರೆ ಎಂದರೆ, ಅವರಿಗೆ ನಾನು ಬದುಕಿರೋದೆ ಸಮಸ್ಯೆ ಆಗಿದೆ ಎಂದು ಸಮಾವೇಶದಲ್ಲಿ ಪ್ರಧಾನಿ ವಾಗ್ದಾಳಿ ನಡೆಸಿದರು.
Feb 27, 2023, 5:18 pm IST

ವಿಪಕ್ಷಗಳಿಗೆ ಪ್ರಧಾನಿ ಚಾಟಿ

2014ಕ್ಕೂ ಮುನ್ನ ರೈಲ್ವೆ ಇಲಾಖೆಗೆ ಕೇವಲ 4.5 ಸಾವಿರ ಕೋಟಿ ರೂಪಾಯಿ ಅನುದಾನ ಇಡಲಾಗಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7ಸಾವಿರ ಕೋಟಿಗೂ ಅಧಿಕ ಹಣ ಮೀಸಲಿಡಲಾಗಿದೆ. ವಿದೇಶದಲ್ಲಿರುವಂತಹ ರೈಲ್ವೆ ನಿಲ್ದಾಣವನ್ನು ನಾವು ಇಲ್ಲಿ ಸ್ಥಾಪಿಸಿದ್ದೇವೆ. ಕಾಂಗ್ರೆಸ್ ಅವಧಿಯಲ್ಲಿ ಹೀಗೆಲ್ಲ ಇರಲಿಲ್ಲ. ಯೋಚನೆ ಮಾಡಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂದು. ನನಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಗೌರವವಿದೆ. ಕರ್ನಾಟಕದ ನಾಯಕರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಮಂತ್ರಿ ವಾಗ್ದಾಳಿ ನಡೆಸಿದರು.
Feb 27, 2023, 5:12 pm IST

ಕೃಷಿಗೆ ಬಿಜೆಪಿ ಆದ್ಯತೆ

ನಮ್ಮ ಬಿಜೆಪಿ ಸರ್ಕಾರ ಸಿರಿಧಾನ್ಯಗಳ ಬೆಳೆಗೆ ಅನುಕೂಲ ಮಾಡಿಕೊಡುತ್ತಿದೆ. ಎಥೆನಾಲ್ ಬ್ಲೆಂಡಿಂಗ್ ಹೆಚ್ಚಳ ಮಾಡಲಾಗುತ್ತಿದೆ. ಎಥೆನಾಲ್ ಉತ್ಪಾದನೆ ಹೆಚ್ಚಿದ್ದರಿಂದ ಕಬ್ಬು ಬೆಳೆಗೆ ಹೆಚ್ಚು ಬೇಡಿಕೆ. ಸಾವಯವ ಕೃಷಿಗೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಶ್ರೀಅನ್ನವನ್ನು ಸಿರಿಧಾನ್ಯವೆಂದು ಕರೆಯಲಾಗುತ್ತದೆ. ರೈತ ಬಂಧು ಯಡಿಯೂರಪ್ಪ ಅವರು ಸಿರಿಧಾನ್ಯ ಬೆಳೆಗೆ ಸಹಕಾರ ನೀಡಿದ್ದಾರೆ ಎಂದು ಹೊಗಳಿದ ಪ್ರಧಾನಿ ಮೋದಿ.
Feb 27, 2023, 5:08 pm IST

ಆಧುನಿಕತೆಯೊಂದಿಗೆ ಕೃಷಿ ಜೋಡನೆ: ಮೋದಿ

ಆಧುನಿಕತೆಯೊಂದಿಗೆ ಕೃಷಿ ಜೋಡನೆ: ಮೋದಿ
ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ರೈತರಿಗೆ ಅನುಕೂಲ. ಬಜೆಟ್‌ನಲ್ಲಿ ಕೃಷಿಗೆ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಣೆ. ಕೃಷಿ ವಲಯವನ್ನು ಆಧುನಿಕತೆಯೊಂದಿಗೆ ಜೋಡಿಸುತ್ತಿದ್ದೇವೆ. ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿಗೆ ಬಿಜೆಪಿ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಲಕ್ಷಾಂತರ ಮಹಿಳಾ ರೈತರ ಖಾತೆಗೆ ಹಣ ಜಮೆಯಾಗಿದೆ- ಪ್ರಧಾನಮಂತ್ರಿ ಮಾತು.
Feb 27, 2023, 5:03 pm IST

ಭ್ರಷ್ಟಾಚಾರ ಇಲ್ಲದೇ ರೈತರಿಗೆ ನೇರ ಹಣ ವರ್ಗಾವಣೆ

ಮಧ್ಯವರ್ತಿಗಳ ಕಾಟ ಇಲ್ಲದೇ. ಯಾವುದೇ ಭ್ರಷ್ಟಾಚಾರವಿಲ್ಲದೇ ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಆಗುತ್ತದೆ. ತಕ್ಷಣವೇ ರೈತರಿಗೆ ಮೆಸೇಜ್ ಬರುತ್ತದೆ. ಕಾಂಗ್ರೆಸ್‌ ಸಮಯದಲ್ಲಿ ಹೀಗೆ ಇರಲಿಲ್ಲ. ಭಾರತದಲ್ಲಿರುವ ಹೆಚ್ಚಿನ ಸಂಖ್ಯೆಯ ಸಣ್ಣ ರೈತರಿಗೆ ಅನುಕೂಲವಾಗುತ್ತಿದೆ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ.
Feb 27, 2023, 5:00 pm IST

ನೂರು ವರ್ಷದ ಹಿಂದೆ ಸ್ಟಾರ್ಟ್‌ಅಪ್: ಮೋದಿ

ನವಭಾರತದ ನಿರ್ಮಾಣದಲ್ಲಿ ಬೆಳಗಾವಿ ಪಾತ್ರ ಸಾಕಷ್ಟು ಇದೆ. ನೂರು ವರ್ಷಗಳ ಹಿಂದೆಯೇ ಸ್ಟಾರ್ಟ್‌ ಅಪ್‌ಗಳು ಇದ್ದವು. ಬಾಬುರಾವ್‌ ಅವರು ಇಲ್ಲಿ ಸಣ್ಣ ಘಟಕ ಸ್ಥಾಪಿಸಿದ್ದರು. ಸಬ್ ಕಾ ಸಾಥ್, ಸಬ್‌ ಕಾ ವಿಕಾಸ್‌ಗೆ ಬಸವಣ್ಣ ಸ್ಪೂರ್ತಿ. ಇಂದು ಬೆಳಗಾವಿಯಿಂದ ಲಕ್ಷಾಂತರ ರೈತರಿಗೆ ಹಣ ವರ್ಗಾವಣೆ ಆಗಿದೆ- ಪ್ರಧಾನಿ ಮೋದಿ ಹೇಳಿಕೆ.
Feb 27, 2023, 4:55 pm IST

ಬೆಳಗಾವಿ: ಪ್ರಧಾನಿ ಮೋದಿ ಮಾತು ಆರಂಭ

ಶರಣ ಬಸವೇಶ್ವರರನ್ನು ಸ್ಮರಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ. ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭೂಮಿ ಬೆಳಗಾವಿ ಎಂದು ಹೊಗಳಿದ ಮೋದಿ
Feb 27, 2023, 4:52 pm IST

ವೇದಿಕೆಯಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿಗಳು. ಬೆಳಗಾವಿ-ಲೋಂಡಾ ಡಬಲ್ ರೈಲ್ವೆ ಲೈನ್‌ ಉದ್ಘಾಟಿಸಿದ ಪಿಎಂ ಮೋದಿ.
Feb 27, 2023, 4:47 pm IST

ರೈತರಿಗೆ ಪಿಎಂ ಕಿಸಾನ್ ನಿಧಿ ಕಂತು: ಚಾಲನೆ

ಸಮಾರಂಭದ ವೇದಿಕೆಯಲ್ಲಿ ವಿವಿಧ 09 ಸಿರಿಧಾನ್ಯಗಳನ್ನು ಮಣ್ಣಿನ ಮಡಿಕೆಗೆ ತುಂಬಿದರು. ಈ ಮೂಲಕ 2023 ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನಾಗಿ ಆಚರಣೆಗೆ ಅಧಿಕೃತ ಮುದ್ರೆ ಬಿತ್ತು. ರೈತರಿಗೆ ಪಿಎಂ ಸಮ್ಮಾನಿ ನಿಧಿ ಯೋಜನೆಯ 13ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ.
Feb 27, 2023, 4:41 pm IST

ಪ್ರಧಾನಿ ರೋಡ್ ಶೋ ಕೊಂಡಾಡಿದ ಬೊಮ್ಮಾಯಿ

ಪ್ರಧಾನಿ ಮೋದಿ ರೋಡ್ ಶೋ ಅನ್ನು ತಮ್ಮ ಭಾಷಣದಲ್ಲಿ ಕೊಂಡಾಡಿದ ಸಿಎಂ ಬಸವರಾಜ ಬೊಮ್ಮಾಯಿ. ಬೆಳಗಾವಿಯಲ್ಲಿ ಹಿಂದೆಂದೂ ಆಗದ ದಾಖಲೆ ಈಗ ಆಗಿದೆ. ರೈತರಲ್ಲಿ, ಜನರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕೆಲಸ ಡಬಲ್ ಇಂಜಿನ್ ಸರ್ಕಾರ ಮಾಡಿವೆ. ರಸ್ತೆ, ರೈಲ್ವೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡಲಾಗಿದೆ. ಅಸಾಧ್ಯ ಕೆಲಸಗಳು ಪ್ರಧಾನಮಂತ್ರಿ ಮೋದಿ ಅವರಿಂದ ಸಾಧ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.
Feb 27, 2023, 4:26 pm IST

ಪ್ರಧಾನಿಗೆ ಸನ್ಮಾನ

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಏಲಕ್ಕಿ ಹಾರ ಮತ್ತು ಶಾಲು ಹಾಕಿ ಸನ್ಮಾನ. ಸವದತ್ತಿ ಯಲ್ಲಮ್ಮ ದೇವಿಯ ಕಲಾಕೃತಿ ನೀಡಿದ ಕೇಂದ್ರ ಖಾತೆಯ ರಾಜ್ಯ ಸಚಿವ ಶೋಭಾ ಕರಂದ್ಲಾಜೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಶಿ ಹಾಗೂ ಶಾಸಕರು ಮತ್ತಿತರರು ಉಪಸ್ಥಿತರಿದ್ದಾರೆ.
Feb 27, 2023, 4:17 pm IST

1ಗಂಟೆ 35 ನಿಮಿಷದ ರೋಡ್ ಶೋ ಮುಕ್ತಾಯ

ಬೆಳಗಾವಿಗೆ ಮಧ್ಯಾಹ್ನ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 10 ಕಿ.ಮಿ ರೋಡ್ ಶೋ ನಡೆಸಿದರು. ಒಟ್ಟು 1ಗಂಟೆ 35 ನಿಮಿಷದ ರೋಡ್ ಶೋ ಮುಕ್ತಾಯವಾಯಿತು. ರೋಡ್ ಶೋ ಮುಗಿಸಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದ ಪ್ರಧಾನಿ.
Feb 27, 2023, 4:05 pm IST

ಮೋದಿ ಮತ್ತೆ ಪ್ರಧಾನಿ ಆಗಲು ಬೆಂಬಲಿಸಿ: ಲಕ್ಷ್ಮಣ್ ಸವದಿ

ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಧ್ಯೆದ ಜಗಳ ನಿಲ್ಲಿಸುವುದಕ್ಕೆ ಆಗುತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದೇಶಗಳ ನಡುವಿನ ಯುದ್ಧ ‌ನಿಲ್ಲಿಸಿದ್ದಾರೆ. 2024ಕ್ಕೆ ಮತ್ತೆ ಅವರು ಪ್ರಧಾನಿಯಾಗಲು ಮೋದಿಯವರನ್ನು ಬೆಂಬಲಿಸಬೇಕು, ಅವರ ಕೈ ಬಲಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ರಾಜ್ಯದ್ಲಲಿ ಬೊಮ್ಮಾಯಿ ಅವರ ಕೈ ಬಲಪಡಿಸೋಣ ಎಂದು ಲಕ್ಷ್ಮಣ್ ಸವದಿ ಮತದಾರರಲ್ಲಿ ಕೋರಿದರು.
Feb 27, 2023, 3:36 pm IST

ಬೆಳಗಾವಿಯಲ್ಲಿ ನಡೆಯುತ್ತಿರುವ ಬೃಹತ್ ರೋಡ್ ಶೋ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಹೂಗಳ ಹಾಕುತ್ತಿರುವ ಅಭಿಮಾನಿಗಳು/ ಸಾರ್ವಜನಿಕರು. ದಾರಿಯುದ್ದಕ್ಕೂ ಕಿಕ್ಕಿರಿದು ನಿಂತ ಜನರು.
Feb 27, 2023, 3:27 pm IST

ಪ್ರಧಾನಮಂತ್ರಿ ಬೃಹತ್ ರೋಡ್ ಶೋ. ನರೇಂದ್ರ ಮೋದಿ ನೋಡಲು ಹರಿದು ಬಂತು ಜನಸಾಗರ. ರಸ್ತೆಯುದ್ದಕ್ಕೂ ಜನವೋ ಜನ. ನಮೋ ನೋಡಲು ಮನೆ, ಕಟ್ಟಡಗಳನ್ನು ಹತ್ತಿ ನಿಂತ ಸಾರ್ವಜನಿಕರು. ಅವರತ್ತ ಕೈ ಬೀಸುತ್ತಿರುವ ಪ್ರಧಾನಿ ಮೋದಿ
Feb 27, 2023, 3:17 pm IST

ಬೆಳಗಾವಿ: ಸಮಾರಂಭದಲ್ಲಿ ಕುರ್ಚಿ ಕದನ

ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆ ಮುಂದೆ ಕುಳಿತುಕೊಳ್ಳಲು ನಾ ಮುಂದು, ತಾ ಮುಂದು ಎಂದು ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಕಾರ್ಯಕರ್ತರು ಕೈ ಕೈ ಮಿಲಾಯಿಸಿ ಹೊಡೆದಾಡಿದ ವಿಡಿಯೋ ಮಾಡುತ್ತಿದ್ದ ಮಾಧ್ಯಮಗಳ ಛಾಯಾಗ್ರಾಹಕನ ಮೇಲೆ ಹಲ್ಲೆಗೆ ಕಾರ್ಯಕರ್ತರು ಮುಂದಾಗಿ ಬಳಿಕ ಕ್ಷಮೆಯಾಚಿಸಿದ ಘಟನೆ ನಡೆದಿದೆ.
Feb 27, 2023, 3:09 pm IST

ಬೆಳಗಾವಿಯಲ್ಲಿ ಪ್ರಧಾನಿ 'ಮೆಗಾ ರೋಡ್‌ ಶೋ'

ಬೆಳಗಾವಿಯಲ್ಲಿ ಪ್ರಧಾನಿ 'ಮೆಗಾ ರೋಡ್‌ ಶೋ'
ಬೆಳಗಾವಿಯಲ್ಲಿ ಬೃಹತ್ ರೋಡ್​ ಶೋ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ. ಒಟ್ಟು 10 ಕಿಲೋ ಮೀಟರ್ ರೋಡ್ ಶೋ ನಡೆಸಿ ಬಳಿಕ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದ ವೇದಿಕೆಗೆ ಆಗಮಿಸಿದ್ದಾರೆ.
Feb 27, 2023, 2:41 pm IST

ರೋಡ್ ಶೋ ಗೆ ಕ್ಷಣಗಣನೆ

ಬೆಳಗಾವಿಯ ಕೆಎಸ್‌ಆರ್‌ಪಿ ಮೈದಾನ ತಲಪಿದ ಪ್ರಧಾನಮಂತ್ರಿ. ಬೃಹತ್ ಸಮಾವೇಶದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನ ಚನ್ನಮ್ಮ ವೃತ್ತದಿಂದ 10 ಕಿಲೋ ಮೀಟರ್‌ವರೆಗೆ ರೋಡ್ ಶೋ ನಡೆಯಲಿದ್ದಾರೆ. ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಲಿದ್ದಾರೆ.
Feb 27, 2023, 2:12 pm IST

ಬೆಳಗಾವಿಗೆ ಆಗಮಿಸಿದ 'ನಮೋ'

ಕುಂದಾನಗರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಿಲು ಬಿಜೆಪಿಯ ಪ್ರಮುಖ ನಾಯಕರು ಸಜ್ಜಾಗಿದ್ದಾರೆ. ಸೇನಾ ವಿಮಾನದಲ್ಲಿ ಆಗಮಿಸಿದ ನಮೋ.
Feb 27, 2023, 2:03 pm IST

ಬೆಳಗಾವಿ ಕೇಸರಿಮಯ

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಬೆಳಗಾವಿ ಜಿಲ್ಲೆ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಡೆ ಕೇಸರಿ/ಬಿಜೆಪಿ ಭಾವುಟ ರಾರಾಜಿಸುತ್ತಿವೆ. ಇಲ್ಲಿನ ಮಾಲಿನಿ ಸಿಟಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಹೀಗಾಗಿ ರಸ್ತೆಯ ಇಕ್ಕೇಲಗಳಲ್ಲಿ ಜನಸಾಗರ ನಿಂತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
Feb 27, 2023, 1:40 pm IST

ಶಿವಮೊಗ್ಗದಿಂದ ಬೆಳಗಾವಿಯತ್ತ 'ನಮೋ' ಪ್ರಯಾಣ

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಕುಂದಾನಗರಿಗೆ ಆಗಮಿಸಲಿದ್ದಾರೆ. ಬೆಳಗಾವಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳನ್ನು ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ. ಕೆಲವು ಯೋಜನೆ/ಕಾಮಗಾರಿಗಳ ಆರಂಭಕ್ಕೆ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದಾರೆ.
Feb 27, 2023, 1:36 pm IST

'ನಮೋ'ಗೆ ಭರ್ಜರಿ ಸ್ವಾಗತ: ಸೂಕ್ತ ಭದ್ರತೆ

ಕೇಸರಿ ಸೀರೆಯುಟ್ಟು, ತಲೆ ಮೇಲೆ ಕುಂಭ ಹೊತ್ತಿರುವ ನೂರಾರು ಮಹಿಳೆಯರು ಹಾಗೂ ಜಾನಪದ ಕಲಾವಿದರ ತಂಡಗಳು ಬೆಳಗಾವಿಯಲ್ಲಿ ಪ್ರಧಾನಮಂತ್ರಿಯವರ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಬೃಹತ್ ಸಮಾವೇಶ ಜರುಗುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ, ಮುನ್ನೆಚ್ಚರಿಕೆ ವಹಿಸಲಾಗಿದೆ. ವೇದಿಕೆ ಮುಂಭಾಗ, ಪ್ರಧಾನಿ ಓಡಾಡುವ ಎಲ್ಲ ಸ್ಥಳಗಳನ್ನು ಮತ್ತೊಮ್ಮೆ ಪರಿಶೀಲಿಸಿದ ಭದ್ರತಾ ಸಿಬ್ಬಂದಿ.
Feb 27, 2023, 1:32 pm IST

ಕುಂದಾನಗರಿಯತ್ತ 'ನಮೋ' ಪ್ರಯಾಣ

ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ, ಸಾರ್ವಜನಿಕ ಭಾಷಣ ಬಳಿಕ ಕುಂದಾನಗರಿ ಬೆಳಗಾವಿ ಜಿಲ್ಲೆಯತ್ತ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಆರಂಭಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣ ಬೆಳಗಾವಿ ಪ್ರಧಾನಮಂತ್ರಿಯವರ ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಬಂದಿಳಿಯಲಿದ್ದಾರೆ.
Feb 27, 2023, 1:16 pm IST

ಶಿವಮೊಗ್ಗದ ಜನರು, ಇಲ್ಲಿ ಕೃಷಿ, ಸುತ್ತಮುತ್ತಲಿನ ಭಾಗದ ಊರುಗಳು ಮತ್ತು ಅಲ್ಲಿನ ಜನರನ್ನು ಕೊಂಡಾಡಿದ ಪ್ರಧಾನಿ ಮೋದಿ. ರಸ್ತೆ ಮಾರ್ಗ, ರೈಲ್ವೆ ಮಾರ್ಗ ಮುಂದಾದ ಅಭಿವೃದ್ಧಿ ಯೋಜನೆಗಳ ಮೂಲಕ ನಾವು ಪ್ರಗತಿಯತ್ತ ಸಾಗುತ್ತಿದ್ದೇವೆ ಎಂಬುದನ್ನು ಪ್ರಧಾನಿ ತಿಳಿಸಿದರು.
Feb 27, 2023, 1:12 pm IST

ಈಸೂರು ಜನರ ಧೈರ್ಯ ಸ್ಮರಣೆ

ಆಂಗ್ಲರ ವಿರುದ್ಧ ಈಸೂರು ಜನ ಸಿಡಿದೆದ್ದರು. ಉಸಿರು ಬಿಟ್ಟೆವು, ಈಸೂರು ಬಿಡೆವು ಎಂದು ಗುಡುಗಿದ್ದರು. ಈಸೂರು ಗ್ರಾಮದ ಜನರ ಧೈರ್ಯವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸ್ಮರಿಸಿದರು. ಸಿಗಂಧೂರು ಚೌಡೇಶ್ವರಿ ದೇವಿಗೆ ನಮೋ ನಮನ ಸಲ್ಲಿಸಿದರು. ಶ್ರೀ ಶ್ರೀಧರ ಸ್ವಾಮೀಜಿಗಳ ಆಶ್ರಮ ಈ ನೆಲ್ಲದಲ್ಲಿದೆ. ಶಿವಮೊಗ್ಗ-ಶಿಕಾರಿಪುರ- ರಾಣೇಬೆನ್ನೂರಿಗೆ ರೈಲು ಮಾರ್ಗ ಕಲ್ಪಿಸಲಾಗಿದೆ. ಇದರಿಂದ ಹಾವೇರಿ ಜಿಲ್ಲೆಗೂ ಸಂಪರ್ಕ ಸಾಧ್ಯವಾಗುತ್ತದೆ- ಪ್ರಧಾನಿ ಮೋದಿ ಭಾಷಣ.
Feb 27, 2023, 1:08 pm IST

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ಕಾಂಗ್ರೆಸ್‌ನವರು ಅಭಿವೃದ್ಧಿಯನ್ನು ಮಾಡಲೇ ಇಲ್ಲ. ಬಡವರ ಪರ ಬಿಜೆಪಿ ಕೆಲಸ ಮಾಡುತ್ತಿದೆ. ಶಿವಮೊಗ್ಗ ಪಶ್ಚಿಮ ಘಟ್ಟದ ಹೆಬ್ಬಾಗಿಲು. ಈ ಮಲೆನಾಡು ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಣ್ಣ ಸಣ್ಣ ನಗರಗಳನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತ್ತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ವಾಗ್ದಾಳಿ ನಡೆಸಿದರು. ರೈಲ್ವೆ ಮಾರ್ಗ, ಹೆದ್ದಾರಿ ಯೋಜನೆಗಳು, ಅವುಗಳ ಪ್ರಯೋಜನ ಬಗ್ಗೆ 'ನಮೋ' ವಿವರಿಸಿದರು.
Feb 27, 2023, 1:05 pm IST

ಗ್ರಾಮೀಣ, ಸಣ್ಣ ನಗರ ವಿಕಾಸ

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ರಥ ಸಾಗುತ್ತಿದೆ. 50 ವರ್ಷಗಳಿಂದ ಬಿ.ಎಸ್‌.ಯಡಿಯೂರಪ್ಪ ಸೇವೆ ಸಲ್ಲಿಸಿದ್ದಾರೆ. ಭಾರತದತ್ತ ಇಡೀ ಜಗತ್ತು ತಿರುಗಿ ನೋಡುತ್ತಿದೆ. ಗ್ರಾಮೀಣ, ಸಣ್ಣ ನಗರಗಳು ವಿಕಾಸಗೊಳ್ಳುತ್ತಿವೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+