ಜನಪ್ರತಿನಿಧಿಗಳ ನಿರ್ಲಕ್ಷ್ಯ: ಯರಗೋಳ್ ಡ್ಯಾಂನಲ್ಲಿ ಪೋಲಾಗುತ್ತಿದೆ ನೀರು
ಕೋಲಾರ, ಅಕ್ಟೋಬರ್ 03: ಕೋಲಾರ ತಾಲೂಕು, ಮಾಲೂರು ಮತ್ತು ಬಂಗಾರಪೇಟೆ ಪ್ರದೇಶದ ಜೊತೆಗೆ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯರಗೋಳ್ ಅಣೆಕಟ್ಟು ಯೋಜನೆ ತ್ವರಿತಗತಿಯಲ್ಲಿ ನಡೆಯುತ್ತಿಲ್ಲದ ಕಾರಣ ಸಾಕಷ್ಟು ನೀರು ಪೋಲಾಗುತ್ತಿದೆ. ಈ ಕುರಿತು ಇಲ್ಲಿನ ಜನಪ್ರತಿನಿಧಿಗಳ್ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯರಗೋಳ್ ಯೋಜನೆ ಪೂರ್ಣಗೊಂಡಿಲ್ಲದ ಕಾರಣ ಸ್ಥಳೀಯರಿಗಾಗುತ್ತಿರುವ ನೀರಿನ ನಷ್ಟದ ಕುರಿತು ಹಿರಿಯ ಪರಿಸರ ವಾದಿ ತ್ಯಾಗರಾಜುರವರು ದಾಖಲೆ ಸಮೇತ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜೆತೆಗೆ ಈ ಕುರಿತು ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಹಾಕಿ, ಜನಪ್ರತಿನಿಧಿಗಳಿಗೆ ಈ ವಿಡಿಯೋ ತಲುಪುವವರೆಗೂ ಶೆರ್ ಮಾಡುವಂತೆ ಮನವಿಮಾಡಿಕೊಂದಿದ್ದಾರೆ.

ಈ ವಿಡಿಯೋ ನೋಡಿ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications