Siddaramaiah: ಈ ಬಾರಿ ಪ್ರತಾಪ್ ಸಿಂಹನನ್ನು ದಯವಿಟ್ಟು ಗೆಲ್ಲಿಸಬೇಡಿ: ಸಿದ್ದರಾಮಯ್ಯ

ಮೈಸೂರು, ಆಗಸ್ಟ್‌ 31: ಪ್ರತಾಪ್ ಸಿಂಹರನ್ನ ಗೆಲ್ಲಿಸಬೇಡಿ. ಮುಂದಿನ ಎಲೆಕ್ಷನ್ನಲ್ಲಿ ತಕ್ಕ ಪಾಠ ಕಲಿಸಿ ಅಂತ ಸಿಎಂ ಸಿದ್ದರಾಮಯ್ಯ ನೇರವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಮೈಸೂರನಲ್ಲಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಬೆಂಬಲ ನೀಡಿ. ಭ್ರಷ್ಟಾ, ಕೋಮು ಸಂಘರ್ಷಕ್ಕೆ ಅವಕಾಶ ಮಾಡುವ ಬಿಜೆಪಿಯಲ್ಲಿ ದೂರವಿಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮುಂದಿನ ಚುನಾವಣೆಗಾಗಿಯೇ ಗ್ಯಾಸ್‌ ದರ ಕಡಿಮೆ ಮಾಡಿದ್ದಾರೆ. ದಯಮಾಡಿ ಈ ಬಾರಿ ಪ್ರತಾಪ್ ಸಿಂಹರನ್ನು ಗೆಲ್ಲಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ .

chief-minister-siddaramaiah

ಈ ಬಾರೀ ಮೈಸೂರಿನಲ್ಲಿ ಪ್ರತಾಪ್‌ ಸಿಂಹ ಅಂತ ಇದ್ದಾರೆ, ಅವರನ್ನ ಆಯ್ಕೆ ಮಾಡಿ ಕಳುಹಿಸಬೇಡಿ, ಅವರು ಸಮಾಜಕ್ಕೆ ವಿರೋಧವಾದ ಶಕ್ತಿಗಳು. ಕಾಂಗ್ರೆಸ್‌ ಅಂದ್ರೆ ಧೃಡವಾಗಿರುವ ಪಕ್ಷ, ಕಾಂಗ್ರೆಸ್‌ ಪಕ್ಷ ದಲಿತರಿಗೆ, ಬಡವರಿಗೆ ಇರುವಂತಹ ಪಕ್ಷ. ಗ್ಯಾಸ್‌ ಬೆಲೆಯನ್ನ ಹೆಚ್ಚಿಗೆ ಮಾಡಿದ್ದಾರೆ.400 ಯಿಂದ 1100 ರೂಪಾಯಿ ವರೆಗೂ ಗ್ಯಾಸ್‌ ಬೆಲೆ ಹೆಚ್ಚಿಗೆ ಮಾಡಿದ್ದಾರೆ. ಎಲ್ಲಾ ಬೆಲೆ ಹೆಚ್ಚಿಗೆ ಮಾಡಿದ್ದು, ಮಿಸ್ಟರ್‌ ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದರು.

ಈ ಎಲ್ಲಾ ಬೆಲೆ ಏರಿಕೆಯಿಂದ ನಾವು ಹಣ ಕೊಡಲು ತಿರ್ಮಾನ ಮಾಡಿದ್ದೇವೆ. ನರೇಂದ್ರ ಮೋದಿ ಹೇಳಿದ್ರು ಅಚ್ಚೇ ದಿನ್‌ ಅಂತ. ಆದರೆ, ನಾವು ಒಳ್ಳೆಯ ದಿನಗಳನ್ನ ಕೊಡುತ್ತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಸೋಲಿಸಿ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬಡವರ ಪರ ಕಾಳಜಿ ಇಲ್ಲ. ಕೋಮುವಾದ ಬಿತ್ತುವ ಪ್ರಯತ್ನ ಮೈಸೂರಲ್ಲಿ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಬಡವರು ಹಾಗೂ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತಮ ತೀರ್ಮಾನ ಕೈಗೊಳ್ಳಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಉಳ್ಳವರ ಪರ ನರೇಂದ್ರ ಮೋದಿ ಸರ್ಕಾರ ಆಡಳಿತ ಕೊಟ್ಟಿದೆ. ದೇಶಾದ್ಯಂತ ಬದಲಾವಣೆಯ ಗಾಳಿ ಬೀಸಿದೆ. ಜನರು ಜಾಗೃತರಾಗಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+