ಕರ್ನಾಟಕದಲ್ಲಿ ಒಂದೇ ವಾರದಲ್ಲಿ 40 ಸಾವಿರಕ್ಕೂ ಅಧಿಕ 'ಮದ್ರಾಸ್ ಐ' ಕೇಸ್ ಪತ್ತೆ
ಬೆಂಗಳೂರು, ಆಗಸ್ಟ್ 06: ಕರ್ನಾಟಕದ ಕೆಲವೆಡೆ ಕಂಡು ಬಂದಿದ್ದ ಮದ್ರಾಸ್ ಐ (ಕಾಂಜಂಕ್ಟಿವಿಟಿಸ್) ಪ್ರಕರಣಗಳು ರಾಜ್ಯಾದ್ಯಂತ ವಿಸ್ತರಿಸುವ ಲಕ್ಷಣಗಳು ಕಂಡು ಬರುತ್ತಿರುವೆ. ಕಳೆದ ಒಂದು ವಾರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕಣ್ಣಿನ ಸಮಸ್ಯೆಯ (Pink Eye) ಪ್ರಕರಣಗಳು ವರದಿ ಆಗಿವೆ.
ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜುಲೈ 25 ಮತ್ತು ಆಗಸ್ಟ್ 4 ರ ನಡುವೆ ಕೇವಲ ಒಂದು ವಾರದಲ್ಲಿ 40,477 ಕಣ್ಣಿನ ಸೋಂಕಿನ ಪ್ರಕರಣಗಳು ಕಂಡು ಬಂದಿವೆ. ಪತ್ತೆಯಾದ ಪ್ರಕರಣಗಳಲ್ಲಿ ಜನರ ಕಣ್ಣುಗಳು ಸಾಮಾನ್ಯವಾಗಿರದೇ ವ್ಯತ್ಯಾಸ ಕಂಡು ಬಂದಿದೆ.

ಇನ್ನೂ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾದ ಪೈಕಿ ಜಿಲ್ಲಾವಾರು ಮಾಹಿತಿ ನೋಡುವುದಾದರೆ, ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ 7,693, ರಾಯಚೂರಲ್ಲಿ 6,493, ಹಾವೇರಿಯಲ್ಲಿ 6,558, ಶಿವಮೊಗ್ಗದಲ್ಲಿ 3,411, ಹಾಗೂ ವಿಜಯನಗರ ಜಿಲ್ಲೆಯಲ್ಲಿ 2,200 ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರಲ್ಲಿ 145 ಕೇಸ್ ಪತ್ತೆ
ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಮವಾಗಿ 145 ಮತ್ತು 192 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಮುಖ್ಯವಾದ ವಿಷಯವೇನೆಂದರೆ ಬೆಂಗಳೂರಿನ ನೇತ್ರಶಾಸ್ತ್ರಜ್ಞರು ಹೇಳುವ ಪ್ರಕಾರ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿಯೂ ಸಹ ಪ್ರಕರಣಗಳು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇದೊಂದು ರೀತಿಯಲ್ಲಿ ಸಾಂಕ್ರಾಮಿಕವಾಗಿ ಕಾಡಲಿದೆ. ಕಳೆದ ಎರಡು ವಾರಗಳಲ್ಲಿ ನಾವು ಮಿಂಟೋ ಆಸ್ಪತ್ರೆಯಲ್ಲಿಯೇ 400 ಕಾಂಜಂಕ್ಟಿವಿಟಿಸ್ ಪ್ರಕರಣಗಳು ದಾಖಲಾಗಿವೆ. ನಿತ್ಯ ಕನಿಷ್ಠ 30 ಪ್ರಕರಣಗಳನ್ನು ನೋಡುತ್ತಿದ್ದೇವೆ. ಆಸ್ಪತ್ರೆಯಲ್ಲಿರುವ 33 ವೈದ್ಯರಲ್ಲಿ ಆರು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾಹಿತಿ ನೀಡಿದರು.

ವಾರಕ್ಕೆ 32 ಪ್ರಕರಣಗಳು ವರದಿ: ಆಸ್ಪತ್ರೆ
ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆ ನೇತ್ರತಜ್ಞೆಯಾದ ಡಾ.ಶೀತಲ್ ಬಲ್ಲಾಳ್ ಅವರು ಸಹ ಬೆಂಗಳೂರಿನಲ್ಲಿ ಮದ್ರಾಸ್ ಐ ಪ್ರಕರಣಗಳ ಹೆಚ್ಚಳದ ಸೂಚನೆ ನೀಡಿದ್ದಾರೆ. ಬೆಂಗಳೂರಿನಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ಕಾಂಜಂಕ್ಟಿವಿಟಿಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಾರಕ್ಕೆ 32 ಪ್ರಕರಣಗಳು ವರದಿ ಆಗುತ್ತಿವೆ ಎಂದರು.
ಈ ಮುಂಗಾರು ಮಳೆ ಅಧಿಕ ವಿರುವ ಜುಲೈ, ಆಗಸ್ಟ್ ಋತುವಿನಲ್ಲಿ ಈ ಕಣ್ಣಿನ ಸಮಸ್ಯೆ ಮತ್ತು ಏರಿಕೆ ಅಸಾಮಾನ್ಯವಾಗಿದೆ. 'ಮದ್ರಾಸ್ ಐ' ಕಣ್ಣು ಅಥವಾ ಕೆಂಪು ಕಣ್ಣು ಸಾಮಾನ್ಯವಾಗಿ ಪರಾಗದ ಅಲರ್ಜಿಯಿಂದ ಬೇಸಿಗೆಯ ತಿಂಗಳಲ್ಲಿ ಕಂಡು ಬರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಬ್ಲೀಚ್-ಸಂಬಂಧಿತ ಕಾಂಜಂಕ್ಟಿವಿಟಿಸ್ ಸಹ ಸಾಮಾನ್ಯವಾಗಿರುತ್ತದೆ. ಇನ್ನೂ ನೋಣಗಳು ಸಹ ಈ ಅನಾರೋಗ್ಯ ಕಾರಣವಾಗಿವೆ. ಆದರೆ ಮುಂಗಾರು ಋತುವಿನಲ್ಲಿ ಅನಿರೀಕ್ಷಿತವಾಗಿ ಈ ಸೋಂಕು ವ್ಯಾಪಿಸುತ್ತಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗದ ವಿಚಾರಕ್ಕೆ ಬಂದರೆ, ಈ ವೈರಸ್‌ನಲ್ಲಿ ಬದಲಾವಣೆ ಆಗಬಹುದು. ಮೊದಲು ಅಡೆನೊವೈರಸ್‌ನಿಂದ ಕಣ್ಣಿಗೆ ತೊಂದರೆ ಉಂಟಾಗುತ್ತದೆ. ತಜ್ಞರ ಪ್ರಕಾರ ವಾತಾವರಣದಲ್ಲಿನ ಬದಲಾವಣೆಗಳು, ತಾಪಮಾನ ಮತ್ತು ಮಳೆಯಲ್ಲಿನ ಬದಲಾವಣೆಗಳು ಸೋಂಕು ಸೋಂಕು ವಿಸ್ತರಿಸಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಈ ರೋಗ್ಯ ಬಂದ ವ್ಯಕ್ತಿ ಕಣ್ಣಿ ಬಿಳಿ ಭಾಗ ಕೆಂಪು/ಗುಲಾಬಿ ಬಣ್ಣವಾಗುತ್ತದೆ. ಕಣ್ಣುಗಳಲ್ಲಿ ಉರಿ ಇಲ್ಲವೇ ನೋವಿನ ಅನುಭವವಾಗುತ್ತದೆ. ಕಣ್ಣುಗಳಿಂದ ನಿರಂತರವಾಗಿ ನೀರು ಹೊರ ಬರುತ್ತದೆ. ಇದೆ ಬೆನ್ನಲ್ಲೆ ಕಣ್ಣುಗಳು ಊದಿಕೊಳ್ಳುತ್ತವೆ. ಇವೆಲ್ಲವು ಈ ರೋಗದ ಲಕ್ಷಣಗಳಾಗಿವೆ.
ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಿ
* ಹೆಚ್ಚು ಜನ ನಿಬಿಡ ಪ್ರದೇಶಗಳಿಗೆ ತೆರಳುವುದು ಕಡಿಮೆ ಮಾಡಬೇಕು. ಸಾಧ್ಯವಾದರೆ ಕೆಲ ದಿನ ಬಿಡಬೇಕು.
* ಸೋಪಿನಲ್ಲಿ ಆಗಾಗ ಕೈಗಳನ್ನು ತೊಳೆಯಿರಿ.
* ಕಣ್ಣುಗಳನ್ನು ಹೇಗೆಂದರೆ ಹಾಗೆ ಮುಟ್ಟಿಕೊಳ್ಳಬೇಡಿ.
* ಈಗಾಗಲೇ ಒಬ್ಬ ವ್ಯಕ್ತಿಗೆ ಕಣ್ಣು ಕಂಪಾಗಿದ್ದರು, ಕಣ್ಣಿನಲ್ಲಿ ಉರಿಯೂತ ಬಂದರೆ ಆದಷ್ಟು ಅವರಿಂದ ಸಂಪರ್ಕ ತಪ್ಪಿಸಬೇಕು.
* ಮದ್ರಾಸ್ ಐ ಗೆ ತುತ್ತಾದವರು ಬಳಸುವ ಕರವಸ್ತ್ರ, ಟವೆಲ್ ಬಳಸಬಾರದು. ಹೀಗೆ ಮಾಡುವುದರಿಂದ ಇಂತಹ ಅನಾರೋಗ್ಯ ಬರದಂತೆ ತಡೆಯಬಹುದಾಗಿದೆ.
-
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್











Click it and Unblock the Notifications