100ಸಿಸಿ: ಹಳೆಯ ಬೈಕ್ ಗಳ ಮೇಲೂ ಡಬಲ್ ರೈಡ್ ನಿಷೇಧದ ತೂಗುಗತ್ತಿ

ಬೆಂಗಳೂರು, ಅಕ್ಟೋಬರ್ 25: 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ 0ಬೈಕ್ ಗಳಲ್ಲಿ ಹಿಂಬದಿ ಸವಾರರ ಸೀಟಿದ್ದರೆ ನೋಂದಣಿ ಮಾಡದಂತೆ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದೀಗ ಈ ಸಂಬಂಧ ಕರ್ನಾಟಕ ಮೋಟಾರು ವಾಹನ ಕಾಯ್ದೆ 1989ಕ್ಕೆ ತಿದ್ದುಪಡಿ ತರಲು ಸರಕಾರ ಹೊರಟಿದೆ.

"ಇತ್ತೀಚೆಗೆ ಹೊರಡಿಸಿದ ಆದೇಶ ಹೊಸ 100ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಇದನ್ನು ಜನರು ತರ್ಕಬದ್ಧವಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಾವು ಇದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನಿರ್ಧರಿಸಲಿದ್ದೇವೆ," ಎಂದು ಮಂಗಳವಾರ ಸಾರಿಗೆ ಸಚಿವ ಎಚ್.ಎಂ ರೇವಣ್ಣ ಹೇಳಿದ್ದಾರೆ.

Pillion riders not allowed in new and old bikes with the capacity of less than 100cc

ಈ ಮೂಲಕ 100ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಬೈಕ್ ಗಳಿಗೂ ಡಬಲ್ ರೈಡ್ ನಿಷೇಧದ ಭೀತಿ ಎದುರಾಗಿದೆ.

ಇನ್ನು ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧಿಸದಂತೆ ಬೈಕ್ ಉತ್ಪಾದಕರು ರಾಜ್ಯ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+