ದೇಶಾದ್ಯಂತ ಔಷಧ ಅಂಗಡಿಗಳ ಮುಷ್ಕರ: ಶುಕ್ರವಾರ ಔಷಧ ಸಿಗಲ್ಲ

Recommended Video

      ಸೆಪ್ಟೆಂಬರ್ 28ರಂದು ದೇಶದಾದ್ಯಂತ ಔಷಧ ಅಂಗಡಿಗಳ ಮುಷ್ಕರ | ಶುಕ್ರವಾರ ಎಲ್ಲೂ ಔಷಧ ಸಿಗೋಲ್ಲ | Oneindia Kannada

      ಬೆಂಗಳೂರು, ಸೆ.27: ಔಷಧ ಮಾರಾಟಗಾರರು ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿರೋಧಿಸಿ ಸೆ.28ರಂದು ಔಷಧ ಮಳಿಗೆಗಳ ದೇಶವ್ಯಾಪಿ ಬಂದ್‌ ಗೆ ಕರೆ ನೀಡಿದ್ದಾರೆ. ಹಾಗಾಗಿ ಔಷಧಗಳನ್ನು ಇಂದೇ ಖರೀದಿಸಿಟ್ಟುಕೊಳ್ಳುವುದು ಒಳಿತು.

      ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆಯು ಒಂದು ದಿನದ ಬಂದ್ ಗೆ ಕರೆ ನೀಡಿದೆ.

      ಅಂದು ಮೆಡಿಕಲ್ ಶಾಪ್ ಗಳು ಸಂಪೂರ್ಣವಾಗಿ ಮುಚ್ಚಲಿದ್ದು ಅಗತ್ಯವಿರುವ ಔಷಧಗಳನ್ನು ಒಂದು ದಿನ ಮುಂಚಿತವಾಗಿ ತಂದಿಟ್ಟುಕೊಳ್ಳುವುದು ಒಳಿತು, ವಿವಿಧ ಕಾಯಿಲೆಗೆ ನಿರಂತರವಾಗಿ ಮಾತ್ರ ಔಷಧ ಸೇವಿಸುತ್ತಿರುವವರು ಮೂಮಜಾಗ್ರತೆಯಾಗಿ ಗುರುವಾರವೇ ಔಷಧ, ಮಾತ್ರೆಗಳನ್ನು ತಂದಿಟ್ಟುಕೊಳ್ಳುವುದು ಉತ್ತಮ.

      Pharmacy bundh call against e-pharmacy policy

      ಔಷಧ ಮಳಿಗೆಗಳ ಮಾಲೀಕರು ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಅಗತ್ಯ ಜೀವರಕ್ಷಕ ಔಷಧವನ್ನು ದಾಸ್ತಾನು ಮಾಡಿಕೊಳ್ಳುವಂತೆ ರಾಜ್ಯದ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಜಿಲ್ಲಾ, ತಾಲೂಕು, ಸಾರ್ವಜನಿಕ, ಸಮುದಾಯ ಕೇಂದ್ರ ಹಾಗೂ ಪ್ರಾಥಮಿಕ ಕೇಂದ್ರದಲ್ಲಿ ಜೀವರಕ್ಷಕ ಔಷಧ ಸಿಗಲಿದೆ.

      ರಾಜ್ಯದಲ್ಲಿ 24 ಸಾವಿರ ಔಷಧ ಮಾರಾಟಗಾರರಿದ್ದಾರೆ ಇವರಲ್ಲಿ 6.5 ಸಾವಿರ ಮಂದಿ ಬೆಂಗಳೂರಲ್ಲಿದ್ದಾರೆ, ಬಂದ್ ದಿನ ಸೇವೆ ಸ್ಥಗಿತಗೊಳಿಸಲಿದ್ದಾರೆ ಆದರೆ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳು ರೋಗಿಗಳ ಹಿತದೃಷ್ಟಿಯಿಂದ ತೆರೆದಿರಲಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+