ಜಾರಕಿಹೊಳಿ ವಿರುದ್ದ ಕೇಸ್ ಏನೋ ವಾಪಸ್ ಪಡೆಯಲಾಯಿತು: ಆದರೆ..?
ಜಲಸಂಪನ್ಮೂಲ ಖಾತೆಯ ಸಚಿವರಾಗಿ, ಯಡಿಯೂರಪ್ಪ ಸರಕಾರದಲ್ಲಿ ತಮ್ಮದೇ ಖದರ್ ಅನ್ನು ಹೊಂದಿದ್ದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದದ್ದು ಬೇಡವಾದ ಕಾರಣಕ್ಕೆ.
ರಮೇಶ್ ಜಾರಕಿಹೊಳಿಯವರನ್ನು ಖೆಡ್ದಾಗೆ ಬೀಳಿಸಲಾಯಿತೇ ಅಥವಾ ನಿಜವಾಗಿಯೂ ಆ ಸಿಡಿಯಲ್ಲಿ ಇರುವವರು ಅವರೇನಾ ಎನ್ನುವುದು ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಬಹಿರಂಗವಾಗಬಹುದು.
ಈಗ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಭಾನುವಾರ (ಮಾ 7) ಕೊಟ್ಟ ದೂರನ್ನು ವಾಪಸ್ ಪಡೆದುಕೊಂಡಿದ್ದಾರೆ. "ನಾವು ಸುಮ್ಮನಾಗುತ್ತೇವೆ ಎಂದು ಹೇಳಿಲ್ಲ, ಈ ಪ್ರಕರಣದ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯುತ್ತೇವೆ"ಎಂದು ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ತೀವ್ರ ರಾಜಕೀಯ ಒತ್ತಡ ಅಥವಾ ಬೆದರಿಕೆಯಿಂದ ಕೇಸ್ ಹಳ್ಳ ಹಿಡಿಯಬಹುದು ಎನ್ನುವ ಲೆಕ್ಕಾಚಾರ ಸರಿಯಾದ ದಾರಿಯಲ್ಲೇ ಸಾಗಿದೆ. ಒಂದು ವೇಳೆ ಈ ವಿಚಾರದಲ್ಲಿ ಜಾರಕಿಹೊಳಿ ಮುಗ್ದರಾಗಿದ್ದರೆ, ರಾಷ್ಟ್ರ ಮಟ್ಟದಲ್ಲಿ ಅವರು ಟ್ರೋಲ್ ಆಗಿರುವುದನ್ನು ವಾಪಸ್ ಪಡೆಯಲು ಸಾಧ್ಯವೇ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ
ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿಯಲ್ಲಿ ರಮೇಶ್ ಜಾರಕಿಹೊಳಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳಿ, ಸಿಎಂ ಬಿಎಸ್ವೈ ಅವರನ್ನು ಭ್ರಷ್ಟ ಎಂದು ಜರಿದಿರುವ ಸಂಭಾಷಣೆಯೂ ಇದೆ. ದಿನೇಶ್ ಕಲ್ಲಹಳ್ಳಿ ಕೊಟ್ಟ ದೂರನ್ನು ವಾಪಸ್ ಪಡೆದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಜಾರಕಿಹೊಳಿ ವಿದ್ಯಮಾನ ಬಹಿರಂಗವಾದ ನಂತರ ರಾಷ್ಟ್ರದಲ್ಲಿ ಚರ್ಚೆಯ ವಿಷಯ
"ದೂರೇನೋ ವಾಪಸ್ ಪಡೆಯಲಾಗಿದೆ, ಆದರೆ ಟಿವಿಯಲ್ಲಿ ತೋರಿಸಿದ ವಿಡಿಯೋವನ್ನು ವಾಪಸ್ ಪಡೆಯಲು ಸಾಧ್ಯವೇ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹೌದು, ಸಿದ್ದರಾಮಯ್ಯನವರು ಹೇಳಿದಂತೆ, ರಮೇಶ್ ಜಾರಕಿಹೊಳಿ ವಿದ್ಯಮಾನ ಬಹಿರಂಗವಾದ ನಂತರ ರಾಷ್ಟ್ರದಲ್ಲಿ ಅವರು ಚರ್ಚೆಯ ವಿಷಯವಾಗಿದ್ದರು.

ಸಾಮಾಜಿಕ ತಾಣದಲ್ಲಿ ಜಾರಕಿಹೊಳಿ ಮಾನ ಹರಾಜು
ಈಗ ರಮೇಶ್ ಜಾರಕಿಹೊಳಿ ತಪ್ಪಿತಸ್ಥರಲ್ಲ ಎಂದು ತನಿಖೆಯಿಂದ ಬಹಿರಂಗವಾದರೂ, ಹೋದ ಮಾನ ವಾಪಸ್ ಬರಲು ಸಾಧ್ಯವೇ. ಇವರ ವಿರುದ್ದ ಎಂತೆಂತಹ ಮೀಮ್ಸ್, ಟ್ರೋಲ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು ಎನ್ನುವುದಕ್ಕೆ ಲೆಕ್ಕವೇ ಇಲ್ಲ. ಅಷ್ಟರಮಟ್ಟಿಗೆ ಜಾರಕಿಹೊಳಿ ಮಾನ ಹರಾಜಾಗಿತ್ತು.
Recommended Video

ವೀಕೆಂಡ್ ವಿದ್ ರಮೇಶ್ ಎನ್ನುವ ಟಿವಿಶೋ ಅನ್ನು ಜಾರಕಿಹೊಳಿ ಪ್ರಕರಣಕ್ಕೆ ತಾಳೆ
ವೀಕೆಂಡ್ ವಿದ್ ರಮೇಶ್ ಎನ್ನುವ ಜನಪ್ರಿಯ ಟಿವಿಶೋ ಅನ್ನು ಜಾರಕಿಹೊಳಿ ಪ್ರಕರಣಕ್ಕೆ ತಾಳೆಹಾಕಿ ಮಾನ ಹರಾಜು ಹಾಕಲಾಗಿತ್ತು. 'ಮೊನ್ನೆ ಒಬ್ಬ ಮಾಸ್ಕ್ ಹಾಕಿಕೊಂಡು ಬಂದು, ಸರ್ ನಿಮ್ಮ ವಿಡಿಯೋ ಸಿಡಿ ನನ್ನಲಿ ಇದೆ ಅಂದ, ಗಾಬರಿಯಿಂದ ಯಾರೋ ನೀನು, ಮಾಸ್ಕ್ ತೆಗಿ ಎಂದಾಗ, ಆತ ನನ್ನ ಮ್ಯಾರೇಜ್ ವಿಡಿಯೋ ವಿಡಿಯೋ ಸಿಡಿ ಕೊಡಲು ಬಂದವನಾಗಿದ್ದ' ಈ ರೀತಿಯ ಮೀಮ್ಸ್ ಗಳು ಹರಿದಾಡುತ್ತಿವೆ.












Click it and Unblock the Notifications