ಯಾವ ಕಾರಣಕ್ಕೂ ಅದಾನಿಯ ಹಣ ಹಿಂದಿರುಗಿಸಲ್ಲ: ಪೇಜಾವರ ಶ್ರೀ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಫೆಬ್ರವರಿ,23: ಅದಾನಿಯವರಿಂದ ಹಣ ಪಡೆದರೂ ನನ್ನ ನಿಲುವು, ಧೋರಣೆ, ಸಿದ್ದಾಂತಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದು ವೇಳೆ ಅದಾನಿಯವರ ಯುಪಿಸಿಎಲ್ ಕಂಪನಿಯಿಂದ ಮಾರಕವಾದರೆ ವಿರೋಧಿಸುವುದನ್ನೂ ನಿಲ್ಲಿಸುವುದಿಲ್ಲ. ನಾನು ಹೇಳಿಕೆಗೂ ಸಿದ್ದ, ಹೋರಾಟಕ್ಕೂ ಸಿದ್ದ ಎಂದು ಪೇಜಾವರ ಮಠದ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಹೇಳಿದರು.

ಅದಾನಿ ಅವರು ಪರ್ಯಾಯ ಉತ್ಸವಕ್ಕೆ 50 ಲಕ್ಷ ರೂ. ನೀಡಿರುವುದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಪೇಜಾವರ ಶ್ರೀಗಳು , 'ಆದಾನಿಯವರು 50 ಲಕ್ಷ ನೀಡಿದ್ದು ನಿಜ. ನಾನು ಭ್ರಷ್ಟಚಾರಿಯಲ್ಲ. ಆದ್ದರಿಂದ 50ಲಕ್ಷವನ್ನು ಹಿಂದಕ್ಕೆ ನೀಡುವ ಪ್ರಶ್ನೆಯೇ ಇಲ್ಲ. ಬದಲಿಗೆ ಸಮಾಜ ಕಾರ್ಯಕ್ಕೆ ಬಳಸುತ್ತೇನೆ' ಎಂದರು.[ಉಡುಪಿ ಪರ್ಯಾಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆ]

Udupi

ಸರ್ಕಾರವು ಬೇರೆ ಬೇರೆ ಅನುದಾನದ ಮೂಲಕ ಹಣ ನೀಡುತ್ತದೆ. ಆದ್ದರಿಂದ ಖಾಸಗಿಯವರಿಂದ ಹಣ ಪಡೆದರೆ ಏನು ತಪ್ಪು ಎಂದು ಪ್ರಶ್ನಿಸಿದ ಶ್ರೀಗಳು ನನ್ನ ಹೋರಾಟಕ್ಕೆ ಜನ ಬೆಂಬಲ ಬೇಕು. ಜನ ಬೆಂಬಲ ಇಲ್ಲದಿದ್ದರೆ ಹೇಳಿಕೆ ಮಾತ್ರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

27 ಸೆಂಟ್ಸ್ ಜಾಗದಲ್ಲಿ 40 ಕೊನೆ ಇರುವ ಛತ್ರ ನಿರ್ಮಾಣ ಮಾಡುವ ಯೋಜನೆ ವರ್ಷದೊಳಗೆ ಪೂರ್ಣವಾಗಲಿದೆ. ಪಾಜಕದ ಶಾಲೆಯಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ, ಶಾಸ್ತ್ರಾ ಭ್ಯಾಸದ ದೃಷ್ಟಿಯಿಂದ ಪ್ರಾಧ್ಯಾಪಕರಿಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅವಕಾಶವಿದೆ. ಈ ಪಾಠವನ್ನು ವಿದೇಶದಲ್ಲೂ ನೋಡುವ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದೆ ಎಂಬ ಮಾಹಿತಿ ನೀಡಿದರು.[ಉಡುಪಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಹೈಲೆಟ್ಸ್]

ಅದಾನಿ ಗ್ರೂಪ್ ಕಂಪನಿ:

ಇದು ಭಾರತದ ಮಲ್ಟಿನ್ಯಾಷನಲ್ ಕಂಪನಿ. ಇದರ ಮುಖ್ಯ ಕಚೇರಿ ಇರುವುದು ಭಾರತ, ಅಹಮದಬಾದ್ ಮತ್ತು ಗುಜರಾತಿನಲ್ಲಿ. ಇದನ್ನು 1988ರಲ್ಲಿ ಸ್ಥಾಪನೆ ಮಾಡಲಾಯಿತು. ಇದರ ಈಗಿನ ಮುಖ್ಯಸ್ಥರು ಗೌತಮ್ ಅದಾನಿ. ದೇಶ ಆರ್ಥಿಕವಾಗಿ ಸದೃಢತೆ ಸಾಧಿಸುವಂತೆ ಮಾಡುವುದು ಅದಾನಿ ಕಂಪನಿಯ ಮುಖ್ಯ ಉದ್ದೇಶ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Vishwesha Teertha Swamiji Of Pejawar Mutt presented full details of Paryaya Festival in Press meet, Udupi, on Tuesday, February 23rd. He has taken 50lakhs money from Adani group company purpose of Paryaya Festival.
Please Wait while comments are loading...