ಪೇಜಾವರಶ್ರೀ ಅವಹೇಳನ ಖಂಡಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ

ಉಡುಪಿ, ನವೆಂಬರ್, 25 : ಫೇಸ್ ಬುಕ್ ನಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳಿಗೆ ಮುಸ್ಲಿಂ ಯುವಕನೊಬ್ಬ ಅವಹೇಳನಕಾರಿ ಹೇಳಿಕೆಯೊಂದಿಗೆ ಬೆದರಿಕೆ ನೀಡಿದವರ ವಿರುದ್ದ 'ಪೇಜಾವರ ಸ್ವಾಮೀಜಿ ಬ್ಲಡ್ ಡೊನೇಟಿಂಗ್ ಮುಸ್ಲಿಂ ಸಂಘಟನೆ' ಉಡುಪಿಯ ಕ್ಲಾಕ್ ಟವರ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು.

ಪೇಜಾವರ ಶ್ರೀಗಳ ವ್ಯಕ್ತಿತ್ವಕ್ಕೆ, ಘನತೆಗೆ ಮಸಿ ಬಳಿಯಲು ಯತ್ನಿಸಿರುವ ಫೇಸ್ ಬುಕ್ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದ ಸಂಘಟಕರು, ದುಷ್ಕರ್ಮಿಗಳ ವಿರುದ್ಧ ಪೊಲೀಸರು ತಕ್ಷಣವೇ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸಂಘಟನೆ ಉಪಾಧ್ಯಕ್ಷ ನಬೀಲ್, ನೌಶಾದ್ ಮತ್ತಿತರರು ಆಗ್ರಹಿಸಿದರು.[ಪೇಜಾವರ ಶ್ರೀಗಳಿಗೆ 'ನಿನ್ನ ತಿಥಿ ದಿನವೇ ಬಾಬ್ರಿ ಮಸೀದಿ ಕಟ್ತೇವೆ' ಅಂದವರ್ಯಾರು?]

Pejawar Seer Blood Donate Muslim Organization take protest against of face book status criminals

ಫೇಸ್ ಬುಕ್ ನಲ್ಲಿ ದುಷ್ಕರ್ಮಿಗಳು ಹೇಳಿದ್ದೇನು?

ಫೇಸ್ ಬುಕ್ ನಲ್ಲಿ " ಓ ಮುದುಕ ಪೇಜಾವರ ನೀನು ಹಗಲು ಕಣಸು ಕಾಣುವುದು ಬಿಡು. ನೀನು ಹೆದರಬೇಡ ನಿನ್ನ ತಿಥಿ ದಿನ ನಾವು ಬಾಬರಿ ಮಸೀದಿ ಕಟ್ಟುತ್ತೇವೆ.[ಪೇಜಾವರ ಶ್ರೀಗಳ ಕ್ಷಮೆಯಾಚಿಸಿದ ಸಾಹಿತಿ ಸಿದ್ದಲಿಂಗಯ್ಯ]

ಅದಲ್ಲದೇ ಓ ಮುದುಕ ನಿನಗ್ಯಾಕೆ ಪೋಪಿಕಾಲ, ನಿನ್ನ ಒಂದು ಕಾಲು ಸ್ಮಶಾನದಲ್ಲೂ ಹಾಗೂ ಮತ್ತೊಂದು ಕಾಲು ನರಕದಲ್ಲಿ ಇದೆ. ಸುಮ್ಮನೆ ಬೊಬ್ಬೆ ಹಾಕಿ ಟೆನ್ಷನ್ ತೆಗೆದು ಬಿ.ಪಿ, ಶುಗರ್ ಹೈ ಮಾಡ್ಕೊಂಡು ಬೇಗನೆ ಹೋಗೆ ಹಾಕೊಲ್ ಬೇಡ. ಇದ್ದಷ್ಟು ದಿನ ನಿನ್ನ ದುರ್ಗಾವಾಹಿಣಿಯ ಕಾರ್ಯಕರ್ತೆಯರ ಜೊತೆ ಮಜಾ ಮಾಡ್ಕೊಂಡು ಇರು"..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+