Gram Panchayat: ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ

ಬೆಂಗಳೂರು, ನವೆಂಬರ್ 02: ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಬೇಡಿಕೆಗೆ ಮನ್ನಣೆಯನ್ನು ನೀಡಿದೆ. ಪಿಡಿಒಗಳು ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಗ್ರಾಮೀಣ ಮಟ್ಟದಲ್ಲಿರುವ ಸರ್ಕಾರಿ ಅಧಿಕಾರಿ ಎಂದರೆ ಅದು ಪಿಡಿಒಗಳು.

ರಾಜ್ಯದ ಎಲ್ಲಾ ಪಿಡಿಒಗಳ ಹುದ್ದೆಯನ್ನು ಗ್ರೂಪ್ -ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವ ಸಂಬಂಧ ಪರಿಶೀಲಿಸಲು ಸರ್ಕಾರ ಸಮಿತಿಯನ್ನು ರಚಿಸಿ ಆದೇಶವನ್ನು ಹೊರಡಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಸಮಿತಿಯನ್ನು ರಚನೆ ಮಾಡಿದೆ.

PDO Post Upgrade At Gram Panchayat Level Government Forms Committee

ಸಮಿತಿಯಲ್ಲಿ ಯಾರಿದ್ದಾರೆ?: ಪಿಡಿಒಗಳ ಹುದ್ದೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ. ಈ ಸಮಿತಿ ಸರ್ಕಾರಕ್ಕೆ ಯಾವ ರೀತಿಯ ಶಿಫಾರಸು ಮಾಡಿ ವರದಿ ನೀಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ. ಆನಂದ್, ಬೋಧಕರಾದ ಕವಿತಾ ರಾಜಾರಾಮ್, ಗ್ರಾಮೀಣಾಭಿವೃದ್ಧಿ ಇಲಾಖೆ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕ ಎನ್. ನೋಮೇಶ್ ಕುಮಾರ್, ನಿವೃತ್ತ ನಿರ್ದೇಶಕರಾದ ಪಿ. ಶಿವಶಂಕರ್, ಎಂ. ಕೆ. ಕೆಂಪೇಗೌಡ, ಕರ್ನಾಟಕ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಕಲ್ಯಾಣ ಸಂಘದ ಅಧ್ಯಕ್ಷ ರಾಜು ವಾರದ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾನೂನು ಸಲಹೆಗಾರ ಬಿ.ಎಸ್. ಬೂದಿಯಾಳ ಸಮಿತಿಯ ಸದಸ್ಯರು.

ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕ ಆ‌. ಅಮರೇಶ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿ ನೀಡುವ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪಿಡಿಒ ಹುದ್ದೆ ಮೇಲ್ದರ್ಜೆಗೇರಿಸುವ ಸಂಬಂಧ ಸಮಿತಿ ಯಾವ ಕಾಲಮಿತಿಯಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲಿದೆ? ಎಂದು ಕಾದು ನೋಡಬೇಕಿದೆ.

2022ರಲ್ಲಿ ಆದೇಶ: ಕರ್ನಾಟಕ ಸರ್ಕಾರ 2022ರಲ್ಲಿ 1,500 ಪಿಡಿಒಗಳ ಹುದ್ದೆಯನ್ನು ಗ್ರೂಪ್- ಸಿ ಇಂದ ಗ್ರೂಪ್-ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಿ ಆದೇಶವನ್ನು ಹೊರಡಿಸಿತ್ತು. ಇದರಿಂದಾಗಿ ಗ್ರೂಪ್‌-ಸಿನಲ್ಲಿ 37,900-70,850 ವೇತನ ಶ್ರೇಣಿ ಹೊಂದಿದ್ದ 1,500 ಪಿಡಿಒಗಳು 40,900-78,200 ರೂ. ವೇತನ ಶ್ರೇಣಿಗೆ ಉನ್ನತೀಕರಣಗೊಂಡಿದ್ದರು.

ಆದೇಶದಂತೆ 6021 ಹುದ್ದೆಗಳಲ್ಲಿ 4,521 ಹುದ್ದೆಗಳನ್ನು ಗ್ರೂಪ್-ಸಿ ವೃಂದದಲ್ಲಿ ಮುಂದುವರೆಸಲಾಗುತ್ತದೆ. ಅಲ್ಲದೇ ಹಿರಿಯ ಪಿಡಿಒ ಹಾಗೂ ಪಿಡಿಒ ವೃಂದಗಳಿಗೆ ಪ್ರತ್ಯೇಕ ನೇಮಕಾತಿ ಕಾರ್ಯ ವಿಧಾನವನ್ನು ರೂಪಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಆಗ ಪಿಡಿಒಗಳು ಎಲ್ಲಾ ಪಿಡಿಒ ಹುದ್ದೆಗಳನ್ನು ಗ್ರೂಪ್- ಸಿ ಇಂದ ಗ್ರೂಪ್-ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಸರ್ಕಾರಕ್ಕೆ ಈ ಕುರಿತು ವಿವಿಧ ಮಟ್ಟದಲ್ಲಿ ಮನವಿಗಳನ್ನು ಸಲ್ಲಿಕೆ ಮಾಡುತ್ತಲೇ ಇದ್ದರು. ಈಗ ಸರ್ಕಾರ ಈ ಕುರಿತು ಪರಿಶೀಲಿಸಲು ಸಮಿತಿಯನ್ನು ರಚನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+