Shivaram Hebbar: ಕಾಂಗ್ರೆಸ್‌ಗೆ ತಲೆನೋವು ತಂದ ಶಿವರಾಮ್ ಹೆಬ್ಬಾರ್ ವಿರುದ್ಧ ಪೇಸಿಎಂ ಪೋಸ್ಟರ್..

ಶಿರಸಿ ಮಾರ್ಚ್ 27: ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಲ್ಲಿದ್ದಾರೆ. ಆದರೆ 'ಬಿಜೆಪಿಯಿಂದ ನಮಗೆ ಕಸ ಬೇಕಾಗಿಲ್ಲ' ಎಂಬ ಭಿತ್ತಿಪತ್ರಗಳು ಶಿರಸಿ ಪಟ್ಟಣದಾದ್ಯಂತ ಕಾಣಿಸಿಕೊಂಡಿವೆ. ಇದು ಶಿವರಾಮ ಹೆಬ್ಬಾರ್ ಅವರಿಗೆ ಬೇಸರ ತಂದಿದೆ.

ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಶಿರಸಿಯಾದ್ಯಾಂತ ಪೋಸ್ಟರ್ ಅಭಿಯಾನ ಶುರುವಾಗಿದೆ. ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಪರ್ವ ಕಾಲದಲ್ಲಿ ಅವರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಪೋಸ್ಟರ್ ಚಳವಳಿ ಆರಂಭವಾಗಿದೆ.

Paycm poster against Shivaram Hebbar which gave headache to Congress

ಜನಪ್ರಿಯ ಮಾರಿಕಾಂಬಾ ಜಾತ್ರೆಯ ಸ್ಥಳದಲ್ಲೂ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಹೆಬ್ಬಾರ್ ಅವರು ಬಿಜೆಪಿ ಸಂಪುಟದಲ್ಲಿ ಭ್ರಷ್ಟ ಸಚಿವರೆಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಇದು 2023ರ ಅಸೆಂಬ್ಲಿ ಚುನಾವಣೆಯ ಮೊದಲು ಕಾಂಗ್ರೆಸ್ ಆರಂಭಿಸಿದ್ದ "PayCM" ಅಭಿಯಾನದ ಚಿತ್ರಗಳನ್ನು ಸಹ ಹೊಂದಿದೆ.

ಪೋಸ್ಟರ್‌ನಲ್ಲಿ ಆಹಾರ ಕಿಟ್ ಹಗರಣವನ್ನು ಉಲ್ಲೇಖಿಸಲಾಗಿದೆ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರದೊಂದಿಗೆ ಹೆಬ್ಬಾರ್ ಅವರ ಚಿತ್ರವನ್ನು ತೋರಿಸಲಾಗಿದೆ. ಪೋಸ್ಟರ್ನಲ್ಲಿ ಹೆಬ್ಬಾರ್ ಅವರನ್ನು "ಡೀಲ್ ನಮ್ಮದು; ಹಣ ನಿಮ್ಮದು" ಎಂದು ಅಣಕಿಸಲಾಗಿದೆ.

ಮಾರಿಕಾಂಬಾ ಜಾತ್ರೆಯ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಅತೃಪ್ತಿ ವ್ಯಕ್ತಪಡಿಸಿದ ಹೆಬ್ಬಾರ್, "ನಾನು ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿಲ್ಲ. ಯಾರೂ ಯಾವುದೇ ಪಕ್ಷವನ್ನು ಗುತ್ತಿಗೆಗೆ ತೆಗೆದುಕೊಂಡಿಲ್ಲ. ಬಿಜೆಪಿಯಿಂದ ಅಸಮಾಧಾನಗೊಂಡವರು ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್‌ನಲ್ಲಿ ಅತೃಪ್ತರು ಬಿಜೆಪಿ ಸೇರುತ್ತಾರೆ'' ಎಂದು ಸಿಡಿಮಿಡಿಗೊಂಡರು.

Paycm poster against Shivaram Hebbar which gave headache to Congress

ಲೋಕಸಭೆ ಚುನಾವಣೆಗೂ ಮುನ್ನ ಹೆಬ್ಬಾರ್ ಮತ್ತೆ ಕಾಂಗ್ರೆಸ್ ಸೇರಲು ಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಈ ಪೋಸ್ಟರ್ ಪ್ರಚಾರ ನಡೆದಿದೆ. ಆದರೆ ಕಾಂಗ್ರೆಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಸೇರಿದಂತೆ ಹಲವರು ಹೆಬ್ಬಾರ್ ಪಕ್ಷಕ್ಕೆ ಸೇರಬೇಕು ಎಂದು ಬಯಸಿದ್ದಾರೆ. ವೈದ್ಯ ಅವರು, "ಅವರು ಮತ್ತೆ ಸೇರಲು ಬಯಸಿದರೆ ಪಕ್ಷಕ್ಕೆ ಸ್ವಾಗತ. ಅವರು ನನ್ನ ಗೆಳೆಯ" ಎಂದಿದ್ದಾರೆ.

ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹೆಬ್ಬಾರ್ ನೆರವಾಗಿದ್ದಾರೆ. ಚುನಾವಣೆಯಿಂದ ದೂರ ಉಳಿಯಲು ಆರೋಗ್ಯದ ಕಾರಣ ಎಂದು ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದರು, ಅದಾದ ನಂತರವು ಅವರು, ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ. ಬಿಜೆಪಿ ಮುಂದೆ ಹೋಗಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತು, ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಮಾರ್ಚ್ 6 ರಂದು ಕದಂಬೋತ್ಸವ ಉತ್ಸವಕ್ಕಾಗಿ ಶಿರಸಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರನ್ನು ಭೇಟಿಯಾದಾಗ ಹೆಬ್ಬಾರ್ ಅವರ ಪ್ರಯತ್ನವು ತೀವ್ರವಾಗಿತ್ತು,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+