ಶಾಯರಿ, ತಾಳ್ಮೆಯ ನೆನಪು ತರುವ ಅಜಾತಶತ್ರು ಧರಂ ಸಿಂಗ್

ಧರಂ ಸಿಂಗ್ ಅಂದಾಕ್ಷಣ ನೆನಪಾಗುವುದು ಅವರ ತಾಳ್ಮೆ. ಜೆಡಿಎಸ್ ಜತೆಗೆ ಕಾಂಗ್ರೆಸ್ ನ ದೋಸ್ತಿ ಸರಕಾರ ರಚನೆಯಾದಾಗ ಮುಖ್ಯಮಂತ್ರಿ ಆದವರು ಧರಂ ಸಿಂಗ್. ತುಂಬ ಒತ್ತಡದ ಸನ್ನಿವೇಶದಲ್ಲೂ ತಾಳ್ಮೆ ಕೆಡುತ್ತಿರಲಿಲ್ಲ. ಅದರಲ್ಲೂ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಧ್ಯೆ ತಿಕ್ಕಾಟ ತಾರಕಕ್ಕೇರಿತ್ತು.

ಇಪ್ಪತ್ತು ತಿಂಗಳ ಕಾಲ ಅವರು ಮುಖ್ಯಮಂತ್ರಿ ಆಗಿದ್ದರು. ಆ ನಂತರ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಸರಕಾರ ರಚಿಸಿ, ಮುಖ್ಯಮಂತ್ರಿ ಕೂಡ ಆದರು. ಆದರೆ ಕೊನೆ ಕ್ಷಣದವರೆಗೆ ದೇವೇಗೌಡರು ತಮ್ಮ ನೇತೃತ್ವದ ಸರಕಾರವನ್ನು ಉಳಿಸುತ್ತಾರೆ ಎಂದೇ ಧರಂ ಸಿಂಗ್ ನಂಬಿದ್ದರು.

Patience, Shayari- memories of Dharam Singh

ಬಹಳ ಸೊಗಸಾಗಿ ಶಾಯರಿಗಳನ್ನು ಹೇಳುತ್ತಿದ್ದ ಅವರು, ಮುಖ್ಯಮಂತ್ರಿಯಾಗಿ ಮಾಡಿದ ಕೊನೆ ಪತ್ರಿಕಾಗೋಷ್ಠಿಯಲ್ಲೂ ಶಾಯರಿ ಹೇಳುವ ಮೂಲಕ ತಮ್ಮ ವಿಶ್ವಾಸ ಹೇಳಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಒಂದೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಆತ್ಮೀಯ ಸ್ನೇಹಿತರು. ಈ ಇಬ್ಬರ ಜೋಡಿ ಕಾಂಗ್ರೆಸ್ ನ ಶಕ್ತಿಯಾಗಿತ್ತು. ಇಬ್ಬರೂ ಹೈಕಮಾಂಡ್ ನ ನಿಷ್ಠರು.

ರಾಜಕಾರಣದಲ್ಲಿ ಅಜಾತಶತ್ರು ಎಂಬ ವಿಶೇಷಣ ಸಿಗುವುದು ಅಪರೂಪ. ಆದರೆ ಧರಂ ಸಿಂಗ್ ಅವರನ್ನು ಹಾಗೆ ಕರೆಯುವುದಕ್ಕೆ ರಾಜ್ಯ ರಾಜಕಾರಣದಲ್ಲಿ ಯಾರೂ ಎರಡನೇ ಯೋಚನೆ ಮಾಡುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+