ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಟ್ಟೆ ವ್ಯಾಪಾರಿ ಭಾರತೀಯ ಮಿಲಿಟರಿ ರಹಸ್ಯ ಸೋರಿಕೆ ಮಾಡಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಸೆ. 20: ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ರವಾನಿಸುತ್ತಿದ್ದ ಅರೋಪದಡಿ ರಾಜಸ್ಥಾನ ಮೂಲದ ಬಟ್ಟೆ ವ್ಯಾಪಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಿಲಟರಿ ಗುಪ್ತಚರದ ದಕ್ಷಿಣ ಕಮಾಂಡೆಂಟ್ ಟೀಮ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ತಾನ ಮೂಲದ ಜಿತೇಂದರ್ ಸಿಂಗ್‌ನನ್ನು ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಂಧಿಸಲಾಗಿದೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜತೆ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ. ವಾಟ್ಸಪ್ ವಿಡಿಯೋ, ವಾಯ್ಸ್ ಚಾಟ್ ಹಾಗೂ ಮೆಸೇಜ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ. ಬಾರ್ಮೆರ್ ಮಿಲಿಟರಿ ಸ್ಟೇಷನ್ ಹಾಗೂ ಮಿಲಿಟರಿ ಓಡಾಟದ ವಾಹನಗಳ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐ ಜತೆ ಹಂಚಿಕೊಂಡಿದ್ದ. ಇದರ ಜತೆಗೆ ಭಾರತೀಯ ಸೇನೆಗೆ ಸಂಬಂಧಿಸಿದ ಪೋಟೊಗಳನ್ನು ರವಾನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.

ರಾಜಸ್ತಾನದ ಗಡಿ ಭಾಗದಲ್ಲಿ ಆರ್ಮಿ ಕಮಾಂಡೋ ಸಮವಸ್ತ್ರ ಧರಿಸಿ ಕಾರ್ಯಾಚರಣೆ ನಡೆಸಿ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ನೀಡಿದ್ದ. ಈ ಬಗ್ಗೆ ಮಿಲಿಟರಿ ಅಧಿಕಾರಿಗಳು ಖಚಿತ ಮಾಹಿತಿಯನ್ನು ಬೆಂಗಳೂರು ಪೊಲೀಸರಿಗೆ ನೀಡಿದ್ದರು. ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Pakistan ISI Agent arrested By ccb police in Bengaluru


ಯುವತಿಯರ ಸೋಗಿನಲ್ಲಿ ಭಾರತೀಯ ಯುವಕರಿಗೆ ಗಾಳ: ಪಾಕಿಸ್ತಾನದ ಗುಪ್ತಚರ ಇಲಾಖೆ ಯುವತಿಯರ ನಕಲಿ ಐಡಿ ರಚಿಸಿ ಭಾರತೀಯ ಯುವಕರಿಗೆ ಗಾಳ ಹಾಕಿ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುವ ಕೆಲಸಕ್ಕೆ ಕೈ ಹಾಕಿದಂತೆ ಕಾಣುತ್ತಿದೆ. ಮಿಲಟರಿ ಸೀಕ್ರೇಟ್ ಕಲೆ ಹಾಕಲು ಯುವತಿಯರ ಸೋಗಿನಲ್ಲಿ ಭಾರತೀಯ ಯುವಕರನ್ನು ಟ್ರಾಪ್ ಮಾಡಲಾಗುತ್ತಿದೆ. ನಕಲಿ ಖಾತೆಗಳ ಮೂಲಕ ಆಯಕಟ್ಟಿನ ಮಿಲಿಟರಿ ಕೇಂದ್ರಗಳ ಸಮೀಪ ವಾಸಿಸುತ್ತಿರುವ ಯುವಕರಿಗೆ ಗಾಳ ಹಾಕಲಾಗುತ್ತಿದೆ. ಇತ್ತೀಚೆಗೆ ಜೈಪುರ ಹಾಗೂ ದೆಹಲಿಯಲ್ಲಿ ಇದೇ ರೀತಿಯ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಯುವತಿಯರ ಗಾಳಕ್ಕೆ ಬೀಳುವ ಭಾರತೀಯ ಯುವಕರು ದೇಶದ ಮಿಲಿಟರಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳಲು ಹೋಗಿ ಜೈಲು ಪಾಲಾಗುತ್ತಿದ್ದಾರೆ. ಜೂನ್‌ನಿಂದ ಈವರೆಗೂ ದೆಹಲಿ ಹಾಗೂ ಜೈಪುರದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದು.

ಸಿಸಿಬಿ ಪೊಲೀರಿಂದ ಬಂಧನಕ್ಕೆ ಒಳಗಾಗಿರುವ ಜೀತೇಂದರ್ ಸಿಂಗ್‌ಗೆ ಫೇಸ್ ಬುಕ್‌ನಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಆಕೆ ಸತತ ಚಾಟ್ ಮಾಡುತ್ತಿದ್ದಳು. ಆಕೆಯ ಜತೆ ಸ್ನೇಹ ಬೆಳೆದ ಬಳಿಕ ಯುವತಿ ಕೇಳಿದಂತೆ ಮಿಲಟರಿ ಕೇಂದ್ರಗಳ ಫೋಟೋ ತೆಗೆದು ರವಾನೆ ಮಾಡಿದ್ದ. ಆಕೆಯ ಬೇಡಿಕೆ ಈಡೇರಿಸಲು ನಕಲಿ ಆರ್ಮಿ ಸಮವಸ್ತ್ರ ಧರಿಸಿ ಮಿಲಿಟರಿ ಕೇಂದ್ರಗಳಿಗೆ ಭೇಟಿ ನಿಡಿ ಫೋಟೋಗಳನ್ನು ಕ್ಲಿಕ್ಕಿಸಿದ್ದ ಮಾಹಿತಿ ಮಿಲಟರಿ ಅಧಿಕಾರಿಗಳಿಗೆ ಸಿಕ್ಕಿತ್ತು. ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಜೀತೇಂದರ್ ಸಿಂಗ್ ನನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Pakistan ISI Agent arrested By ccb police in Bengaluru

ಗೃಹ ಸಚಿವರ ಹೇಳಿಕೆ: ಭಾರತೀಯ ಆರ್ಮಿ ಕುರಿತು ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಸೋರಿಕೆ ಮಾಡುತ್ತಿದ್ದ ಆರೋಪಿಯ ಬಂಧನ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಆರಗ ಜ್ಞಾನೇಂದ್ರ, ದೇಶದ ಭದ್ರತಾ ವ್ಯವಸ್ಥೆಯ ಮಾಹಿತಿಯನ್ನು ಸೋರಿಕೆ ಮಾಡಿದ ಬಗ್ಗೆ ಮಿಲಟರಿ ಇಂಟಲೆಜೆನ್ಸಿ ಮಾಹಿತಿ ನೀಡಿತ್ತು. ಅದರ ಮಾಹಿತಿ ಆಧರಿಸಿ ನಮ್ಮ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬರಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

English summary
Rajastan Based cloth seller arrested in Bengaluru for allegedly leaked the Indian army secretes to Pakistan : Who was the garment dealer who stole the Indian military secret ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X