ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ! ಬಸನಗೌಡ ಪಾಟೀಲ್ ಯತ್ನಾಳ್ ಆರೋಪ
ಬೆಂಗಳೂರು, ಜುಲೈ 10: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಈ ಕುರಿತು ವಿಧಾನಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಬೆಳಗಾವಿಯಲ್ಲಿ ಜೈನ ಮುನಿ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಜೈನಮುನಿ ಹತ್ಯೆ ಖಂಡನೀಯ. ಇದು ಕರ್ನಾಟಕಕ್ಕೆ ಕಳಂಕ ತರುವ ಸಂಗತಿಯಾಗಿದೆ. ಜೈನ ಮುನಿಗಳಿಗೆ ಸಂತರಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹಣಕಾಸು ವ್ಯವಹಾರ ಎಂಬುವುದು ಒತ್ತಡದಿಂದ ಪೊಲೀಸರು ಸೃಷ್ಟಿ ಮಾಡಿದ್ದಾರೆ ಎಂದು ಸದನದಲ್ಲಿ ಆರೋಪಿಸಿದರು.

ಈಗ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಈ ಸರ್ಕಾರ ಬಂದ ಬಳಿಕ ಎಲ್ಲೆಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದರು.
ಎಲ್ಲವನ್ನೂ ತ್ಯಾಗ ಮಾಡಿದ ಮುನಿಗಳ ಹತ್ಯೆಯಾಗಿದೆ. ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಕರ್ನಾಟಕ ರಾಜ್ಯಕ್ಕೆ ಹತ್ಯೆ ಕಳಂಕವಾಗಿದೆ. ಈ ಹತ್ಯೆ ಹಿಂದೆ ಹಲವು ಅನುಮಾನಗಳಿವೆ. ಬೆಂಗಳೂರಿನಿಂದ ಪೊಲೀಸ್ ಮೇಲೆ ಏನು ಒತ್ತಡ ಬಂದಿದೇಯೋ? ಪೊಲೀಸ್ ಮೇಲೆ ಒತ್ತಡ ಬರುತ್ತೆ. ಜೈನ ಮುನಿಗಳು ಎಲ್ಲವನ್ನೂ ತ್ಯಾಗ ಮಾಡ್ತಾರೆ
ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಟಿ. ನರಸಿಪುರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಆಗಿದೆ, ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಡುತ್ತಿವೆ ಅಂದ ಯತ್ನಾಳ ಮಾತಿಗೆ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಸಿದರು.
ಈ ವಿಚಾರದಲ್ಲು ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನೂ ಮಾತು ಮುಂದುವರೆಸಿದ ಯತ್ನಾಳ್ ರಾಜ್ಯದ ಪೊಲೀಸ್ ಮೇಲೆ ಭರವಸೆ ಇಲ್ಲ. ಸಿಬಿಐ ತನಿಖೆಗೆ ಈ ಕೇಸ್ ಕೊಡಬೇಕು. ಒಂದು ಕೋಮಿವಿನ ತೃಪ್ತಿ ಪಡಿಸುವ ಕೆಲಸ ಆಗುತ್ತಿದೆ, ಒಂದು ಸಂತಾಪ ಕೂಡ ಸದನದಲ್ಲಿ ಆಗಲಿಲ್ಲ. ಬೇರೆ ಯಾರಾದರೂ ಸತ್ತಿದ್ರೆ ಸಂತಾಪ ಆಗ್ತಿತ್ತು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಯತ್ನಾಳ್ ಮಾತನ ವೇಳೆ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ಯು.ಟಿ ಖಾದರ್ ಇದನ್ನು ರಾಜಕೀಯ ಮಾಡಲು ಹೋಗಬೇಡಿ. ವಿಷಯಕ್ಕೆ ಸೀಮಿತವಾಗಿ ಹೇಳಿ ಎಂದರು.
ಇನ್ನೂ ವಿಧಾನಸಭಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಕಠಿಣ ವೃತವನ್ನ ಮಾಡುವಂತ ಮುನಿಗಳನ್ನ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ. ಇದರ ಹಿಂದೆ ಪಿತೂರಿ ಇದೆ. ಹಿಂದೆ ವಿಜ್ಞಾನಿಗಳನ್ನ ಗುಪ್ತವಾಗಿ ಕೊಲೆ ಮಾಡುತಿದ್ರು, ಅದೇ ರೀತಿ ಈ ಹತ್ಯೆಯನ್ನ ಮಾಡಿದ್ದಾರೆ. ಉಗ್ರಗಾಮಿಗಳ ಪಿತೂರಿ ಇದೆ ಅನ್ನುವುದು ಅನಿಸುತ್ತಿದೆ. ಉಗ್ರಗಾಮಿಗಳು ಈ ಮೂಲಕ ನಮಗೆ ಎಚ್ಚರಿಕೆ ಕೊಡುತ್ತಿದ್ದಾರೇನೋ ಎಂದು ಅನಿಸುತ್ತಿದೆ. ಎನ್ ಕೌಂಟರ್ ಮಾಡಿ ಕೊಲೆ ಮಾಡಿದ್ರು ಪರವಾಗಿಲ್ಲ. ಈ ಆರೋಪಗಳಿಗೆ ಅತ್ಯಂತ ಕಠಿಣವಾದಂತಹ ಶಿಕ್ಷೆ ಕೊಡಬೇಕು. ಜೈನ ಮುನಿಗಳಿಗೆ ಭಯ ಉಂಟಾಗಿದೆ, ಆ ಹಿನ್ನೆಲೆ ಜೈನ ಮುನಿಗಳಿಗೆ ರಕ್ಷಣೆ ಕೊಡಬೇಕು ಎಂದು ಹೇಳಿದರು.












Click it and Unblock the Notifications