Padma Shri: ನಡೆದಾಡುವ ವಿಶ್ವಕೋಶ ಶತಾವಧಾನಿ ಆರ್. ಗಣೇಶ್‌ರಿಗೆ 'ಪದ್ಮಶ್ರೀ' ಗೌರವ, ಯಾರಿವರು?
ಶತಾವಧಾನಿ ಆರ್. ಗಣೇಶ್ (Shatavadhani R Ganesh) ಅವರ ಕಲಾ ಸಾಧನೆ ಗುರುತಿಸಿ ಭಾರತದ ಅತ್ಯುನ್ನತ ಗೌರವವಾದ 'ಪದ್ಮಶ್ರೀ' ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಲೆಯಲ್ಲಿ ಮಾತ್ರವಲ್ಲದೇ ವಿವಿಧ ವಿಭಾಗಗಳಲ್ಲೂ ಉತ್ತಮ ಕಾರ್ಯ ನಿರ್ವಹಣೆಯಿಂದ ಸಾಕಷ್ಟು ಹೆಸರು ಮಾಡಿದ್ದಾರೆ. ಅನೇಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವ್ಯಾಸ ಪುರಸ್ಕಾರ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರಿಗೆ ಬಂದಿದ್ದು, ಇದೀಗ ಪ್ರದ್ಮಶ್ರೀ ಗೌರವಕ್ಕು ಪಾತ್ರರಾಗಿದ್ದಾರೆ. ಯಾರಿವರು? ಇವರ ಜೀವನ, ಸಾಧನೆ ವಿವರ ಇಲ್ಲಿದೆ.
1962ರ ಡಿಸೆಂಬರ್ 4ರಂದು ಸಾಂಪ್ರದಾಯಿಕ ಕುಟುಂಬದಲ್ಲಿ ಇವರು ಜನಿಸಿದರು. ಆರ್.ಶಂಕರನಾರಾಯಣ ಅಯ್ಯರ್ ಮತ್ತು ಅಲಮೇಲಮ್ಮ ಇವರ ತಂದೆ-ತಾಯಿ. ಇವರ ಮಾತೃಭಾಷೆ ತಮಿಳಾದರೂ ಸಹಿತ ಇವರು ವಿದ್ಯಾಭ್ಯಾಸ ಕಲಿತದ್ದು ಅಚ್ಚ ಕನ್ನಡದಲ್ಲಿ. ನೆರೆಯ ತೆಲುಗು ಭಾಷೆಯ ಪ್ರಭಾವವು ಇವರ ಮೇಲಿದೆ. ಇದೆಲ್ಲ ಕಾರಣದಿಂದ ಹಾಗೂ ಸತತ ಅಭ್ಯಾಸ, ಆಸಕ್ತಿ ಕಾರಣದಿಂದ ಶತಾವಧಾನಿ ಆರ್. ಗಣೇಶ್ ಅವರದ್ದು ತೆಲುಗು, ಕನ್ನಡ, ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ ಅಪರೂಪದ ವ್ಯಕ್ತಿತ್ವ.

ಶೈಕ್ಷಣಿಕ ಜೀವನ, ಆಸಕ್ತಿಯ ವಿಷಯಗಳು
ಆರಂಭಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದರು. ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ ಗೌರಿಬಿದನೂರಿನಲ್ಲಿ ಪ್ರೌಢ ಶಿಕ್ಷಣ ಕಲಿತ ಅವರು, ವಿದ್ಯಾಭ್ಯಾಸದಲ್ಲಿ ಯಾವಾಗಲೂ ಮುಂದಿರುತ್ತದೆ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ಅವರು ನಗರದ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ (TATA institute)ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಪಡೆದರು. ಇದರ ಜೊತೆ ಜೊತೆಯಲ್ಲಿಯೇ ಅವರಿಗೆ ಸಂಗೀತ, ನೃತ್ಯ ಮತ್ತು ಸಾಹಿತ್ಯ, ಲಲಿತಕಲೆಗಳಲ್ಲಿ ಇನ್ನಿಲ್ಲದಂತೆ ಆಸಕ್ತಿ ಬೆಳೆಯಿತು. ಅದು ಅವರಿಗೆ ಸಾಕಷ್ಟು ಹೆಸರು, ಗೌರವವನ್ನು ತಂದು ಕೊಟ್ಟಿತು.
ಆಧ್ಯಾತ್ಮಿಕ ಸಾಹಿತ್ಯದತ್ತ ಅಪಾರ ಒಲವು
ಶಿಕ್ಷಣ ಮುಗಿಸಿದ ಬಳಿಕ ಅವರು ಅಧ್ಯಾಪಕ ವೃತ್ತಿ ಶುರು ಮಾಡಿದರೂ ಸಹಿತ ಅವರ ಒಲವು ಇದ್ದದ್ದು ಆಧ್ಯಾತ್ಮಿಕ ಸಾಹಿತ್ಯದ ಕಡೆಗೆ. ಇದೇ ಅವರನ್ನು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಿತು. ಬಾಲ್ಯದಿಂದ ತಾವೊಬ್ಬ ಹೆಸರಾಂತ ಕವಿ ಆಗಬೇಕೆನ್ನುವ ಆಸೆ, ತುಡಿತ ಅವರಲ್ಲಿತ್ತು. ಅಷ್ಟೇ ಅಲ್ಲದೇ ಶಾಸ್ತ್ರದಿಂದ ಹಿಡಿದು ತತ್ವಶಾಸ್ತ್ರದವರೆಗೆ, ಸಂಗೀತ, ರಾಜಕೀಯ, ಪ್ರಸಕ್ತ ವಿಷಯ ಹೀಗೆ ಹಲವು ವಿಷಯಗಳಲ್ಲಿ ಸಾಕಷ್ಟು ಪರಿಣಿತಿ ಪಡೆದರು. ಅಕ್ಷರ ಲೋಕದ ದಿಗ್ಗಜರಾಗಿ ಬೆಳೆದರು.
ನಡೆದಾಡುವ ವಿಶ್ವಕೋಶ
ಧರ್ಮಶಾಸ್ತ್ರದ ಕುರಿತು ಯಾವುದಾದರೂ ಪರಿಹಾರಗಳು ಬೇಕಿದ್ದಲ್ಲಿ ಧರ್ಮಗ್ರಂಥಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಲ್ಲಿ ತಡಕಾಡುತ್ತೇವೆ. ಈಗಂತೂ ಗೂಗಲ್‌ನಲ್ಲಿ ಹುಡುಕುತ್ತೇವೆ. ಆದರೆ ಆರ್. ಗಣೇಶರು ತರ್ಕ, ಶಾಸ್ತ್ರ, ಲೌಕಿಕ, ಅಲೌಕಿಕ, ರಾಜಕೀಯ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಲಲತಕಲೆ, ತಂತ್ರಜ್ಞಾನ, ಪ್ರಸಕ್ತ ವಿಷಯಗಳು ಹೀಗೆ ಯಾವುದರ ಬಗ್ಗೆ ಕೇಳಿದರೂ ಥಟ್ ಉತ್ತರಿಸಬಲ್ಲವರಾಗಿದ್ದಾರೆ. ಹೀಗಾಗಿಯೇ ಇವರನ್ನು ನಡೆದಾಡುವ ವಿಶ್ವಕೋಶ ಎಂದೇ ಕರೆಯಲಾಗುತ್ತದೆ.
ಬಹು ಭಾಷೆಗಳಲ್ಲಿ ಅವಧಾನ ಪ್ರದರ್ಶಿಸಿದ ಏಕೈಕ ಸಾಧಕ
1980ರ ನಂತರ ಎರಡೇ ವರ್ಷದಲ್ಲಿ ಆರ್ ಗಣೇಶ್ ಆವರು ಅವಧಾನವನ್ನು ಕರಗತ ಮಾಡಿಕೊಂಡು 1982ರಲ್ಲಿ ಮೊದಲು ಬಾರಿಗೆ ಅವಧಾನ ಕಲೆಯನ್ನು ಪ್ರಚುರಪಡಿಸಿದರು. ಮುಂದೆ ಅವರು ತಮ್ಮ ಹುಟ್ಟೂರಿನಲ್ಲಿ 100ನೇ ಹಾಗೂ 200ನೇ ಅವಧಾನ ಕಲೆ ಪ್ರದರ್ಶಿಸಿದ್ದು ಇತಿಹಾಸ ಪುಟ ಸೇರಿದೆ. ಇನ್ನೂ ವಿಶೇಷವೆಂದರೆ ಸುಮಾರು ಎಂಟು ಭಾಷೆಗಳಲ್ಲಿ ಅವರು ಅವಧಾನ ಪ್ರಚುರಪಡಿಸಬಲ್ಲ ಸಾಮರ್ಥ್ಯ ಹೊಂದಿರುವ ಸಾಧಕರಾಗಿದ್ದಾರೆ. ಕರ್ನಾಟಕ, ಅಂತಾರಾಜ್ಯ, ಅಂತಾರಾಷ್ಟ್ರ ಮಟ್ಟದಲ್ಲೂ ಪ್ರಖ್ಯಾತಿ ಪಡೆದರು. ನಾಲ್ಕು ಭಾಷೆಗಳಲ್ಲಿ ಅವಧಾನ ನಡೆಸಿಕೊಂಡ ದೇಶದ ಏಕೈಕ ಸಾಧಕರೆಂದರೆಅದು ಶತಾವಧಾನಿ ಆರ್. ಗಣೇಶ್ ಅವರು.
ಬೈರಪ್ಪನವರ ಕಾದಂಬರಿ ಸಂಸ್ಕೃತಕ್ಕೆ ಅನುವಾದ
ಇವರು ಚಿಂತಕರೂ ಹೌದು, ಉತ್ತಮ ಕವಿ ಮತ್ತು ಉಪನ್ಯಾಸಕರು ಆಗಿದ್ದಾರೆ. ಕನ್ನಡ, ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ,ಯಕ್ಷಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅನೇಕ ಆಸಕ್ತಿದಾಯಕವಾದ ವಿಚಾರಗಳಲ್ಲಿ ಈವರೆಗೆ ಅವರು ನೂರಕ್ಕೂ ಹೆಚ್ಚಿನ ಲೇಖನ ಬರೆದಿದ್ದಾರೆ. ಹಿಂದೂ ಧರ್ಮ ಮಾತ್ರವಲ್ಲದೇ ದೇಶದ ಇತರ ಧರ್ಮಗಳ ಕುರಿತು ಸಾಕಷ್ಟು ತಿಳಿದುಕೊಂಡಿದ್ದಾರೆ. ಸಾಹಿತಿ ಎಸ್.ಎಲ್.ಬೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಈ ಎಲ್ಲ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಈಗಾಗಲೇ ಸಂದಿವೆ. ಆ ಪಟ್ಟಿಗೀಗ ದೇಶದ ಉನ್ನತ ಗೌರವ 'ಪ್ರದ್ಮಶ್ರೀ' ಸಹ ಲಭಿಸಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications