Get Updates
Get notified of breaking news, exclusive insights, and must-see stories!

ಭೂ ಮಾಲೀಕತ್ವ: ಜಮೀನು ಮಾಲೀಕರಿಗೆ ನೆಮ್ಮದಿ ತಂದ ಕೋರ್ಟ್ ತೀರ್ಪು

ಬೆಂಗಳೂರು, ಆಗಸ್ಟ್ 04: ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಜಮೀನಿನ ಸಂಪೂರ್ಣ ಹಕ್ಕನ್ನು ಕೊಡವರಿಗೆ ನೀಡುವುದಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಅಲ್ಲದೆ, ಈ ಸಂಬಂಧ ಸರ್ಕಾರ ಜಾರಿಗೊಳಿಸಿದ್ದ ಕರ್ನಾಟಕ ಭೂ ಕಂದಾಯ ಕಾಯಿದೆಗೆ 2011ರ ಸೆಕ್ಷನ್ 20(2)ರ ತಿದ್ದಪಡಿಯ ಕಾನೂನು ಸಿಂಧುತ್ವವನ್ನು ಎತ್ತಿಹಿಡಿದಿದೆ. ಹಾಗಾಗಿ ಜಮ್ಮಾ ಬಾಣೆ ಮಾಲೀಕತ್ವ ಕೊಡವರಿಗೆ ಅನಾಯಾಸವಾಗಿ ದೊರಕುವುದು ನಿಶ್ಚಿತವಾಗಿದೆ.

ಕಾಯಿದೆಯ ತಿದ್ದಪಡಿ ಕೊಡವ ಕುಟುಂಬ ವ್ಯವಸ್ಥೆ ಅಥಾವ ಸಂಪ್ರಾಯಗಳಿಗೆ ವಿರುದ್ಧವಾಗಿಲ್ಲ. ಬದಲಾಗಿ ಕೊಡಗು ಜಿಲ್ಲೆಯಲ್ಲಿನ ಜಮ್ಮಾ ಬಾಣೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವದ ಹಕ್ಕುಗಳು ಕೊಡವರಿಗೆ ಲಭ್ಯವಾಗಲಿದೆ ಎಂದು ಪೀಠ ತಿಳಿಸಿದೆ.

Ownership Of Jamma Bane Land HC Uphold Amendment To The Karnataka Land Revenue Act

ಬ್ರಿಗೇಡಿಯರ್ ಮಾಳೇಟಿರ ಎ ದೇವುಯ್ಯ ಮತ್ತಿತರರು ಕರ್ನಾಟಕ ಭೂ ಕಂದಾಯ ಕಾಯಿದೆ ಸೆಕ್ಷನ್ 2 ಮತ್ತು 80ಕ್ಕೆ ತಿದ್ದುಪಡಿ ಮಾಡಿರುವ ಸಾಂವಿಧಾನಿಕ ಸಿಂಧುತ್ವವ್ವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಕಾಯಿದೆಯಲ್ಲಿ ತಿದ್ದುಪಡಿ ಮಾಡಿರುವುದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?: ಈ ತಿದ್ದುಪಡಿಯಿಂದ ಕೊಡಗು ಜಿಲ್ಲೆಯಲ್ಲಿ ಸರ್ಕಾರದ ಅಧೀನದಲ್ಲಿದ್ದ ಜಮ್ಮಾ ಬಾಣೆ ಭೂಮಿಗೆ ಕೊಡವ ಕುಟುಂಬಕ್ಕೆ ಸೇರಿದ ಎಲ್ಲ ಸದಸ್ಯರ ಮಾಲೀಕತ್ವವನ್ನು ಪಡೆದುಕೊಳ್ಳಲಿದ್ದಾರೆ. ಜತೆಗೆ, ಆರ್‌ಟಿಸಿಯ ಕಲಂ 9ರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ನಮೂದಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪೀಠ ತಿಳಿಸಿದೆ.

ಜಮ್ಮಾ ಬಾಣೆ ಜಮೀನುಗಳ ಸಂಬಂಧಿಸಿದಂತೆ ಕೊಡವ ಕುಟುಂಬದ ಸದಸ್ಯರು ತಮ್ಮ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಪರಭಾರೆ ಮಾಡಲು ನಿರ್ಬಂಧವಿದೆ. ಇದೀಗ ಕಾಯಿದೆಗೆ ತಿದ್ದುಪಡಿ ಮಾಡಿರುವುದು ಕೊಡವ ಕುಟುಂಬ ವ್ಯವಸ್ಥೆ ಮತ್ತು ಅವಿಭಕ್ತ ಕುಟುಂಬ ಪದ್ದತಿಗಳು ಮತ್ತು ಸಂಪ್ರದಾಯಗಳಿಗೆ ಅಡ್ಡಿಯಾಗಲಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಜಮ್ಮಾ ಬಾಣೆ ಭೂಮಿಯನ್ನು ಭೂ ಹಿಡುವಳಿ ಪದ್ದತಿಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಕೊಡವರ ಪದ್ದತಿ ಅಥಾವ ಬಳಕೆ ಆಧಾರದಲ್ಲಿ ಅಲ್ಲ. ಕೊಡವ ಕುಟುಂಬದ ಆಸ್ತಿ ಪರಭಾರೆ ಅಥಾವ ವಿಭಜನೆಯನ್ನು ನಿಷೇಧಿಸುವ ಪದ್ದತಿ ಅಥಾವ ಸಂಪ್ರದಾಯ ಜಾರಿ ಮಾಡಿಲ್ಲ ಎಂದು ತಿಳಿಸಿದೆ.

ಅಲ್ಲದೆ, ತಿದ್ದುಪಡಿಯಿಂದ ಜಮ್ಮಾ ಬಾಣೆ ಜಮೀನಿಗೆ ಕೊಡವ ಕುಟುಂಬದ ಎಲ್ಲ ಸದಸ್ಯರನ್ನು ಭೂ ದಾಖಲೆಗಳಲ್ಲಿ ನೋಂದಾಯಿಸಬಹುದಾಗಿದೆ. ಜತೆಗೆ, ಈ ಹಿಂದೆ ಜಮ್ಮಾ ಬಾಣೆ ಜಮೀನು ಮತ್ತು ಅದರಲ್ಲಿದ ಮರಗಳ ಹಕ್ಕುಗಳು ಸರ್ಕಾರದ ಅಧೀನದಲ್ಲಿತ್ತು. ಇದೀಗ ಕೊಡವ ಕುಟುಂಬಕ್ಕೆ ಎಲ್ಲ ಹಕ್ಕುಗಳು ಸಿಗಲಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ಕಾಯಿದೆಯ ತಿದ್ದುಪಡಿ ಅವಿಭಕ್ತ ಕುಟುಂಬ ಆಸ್ತಿಯನ್ನು ಪರಭಾರೆ ಮಾಡದಂತೆ ಕೊಡವರ ಸಾಂಪ್ರದಾಯಿಕ ಕಾನೂನು ನಿರ್ಬಂಧಿಸುತ್ತದೆ ಮತ್ತು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಕುಟುಂಬದ ಯಾವುದೇ ಸದಸ್ಯರಿಗೆ ವೈಯಕ್ತಿಕ ಹಕ್ಕು ಇರುವುದಿಲ್ಲ. ಆಕ್ಷೇಪಾರ್ಹ ತಿದ್ದುಪಡಿಯ ಮೂಲಕ ರಾಜ್ಯ ಸರ್ಕಾರ ಕೊಡವರ ಸಂಸ್ಕೃತಿಯನ್ನು ತೊಡೆದುಹಾಕಿದೆ ಆ ಮೂಲಕ ಸಂವಿಧಾನದ ಪರಿಚ್ಚೇದ 51ಎ(ಎಫ್) ಅನ್ನು ಉಲ್ಲಂಘಿಸಿದೆ ಎಂದು ನ್ಯಾಯಪೀಠಕ್ಕೆ ಕೋರಿದ್ದರು.

ಸಚಿವರ ಸಭೆ: 2023ರ ಫೆಬ್ರವರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ, "ಜಿಲ್ಲೆಯಲ್ಲಿ ಹಲವು ದಶಕಗಳಿಂದ ಜಮ್ಮಾ ಬಾಣೆ ಭೂಮಿ ಸರ್ವೆ ಮಾಡಲು ಬಾಕಿ ಇದ್ದು, ಆ ನಿಟ್ಟಿನಲ್ಲಿ ಸಾಗುವಳಿ ಮಾಡುವವರಿಗೆ ಆರ್‌ಟಿಸಿ (ಪಹಣಿ) ಮಾಡಿಕೊಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲು ಮುಂದಾಗುವಂತೆ" ಸೂಚಿಸಿದ್ದರು.

ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್‌ಟಿಸಿ ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್‌ಟಿಸಿ ಮಾಡಿಕೊಡಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೇ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು.

ಕೊಡಗು ಜಿಲ್ಲೆಯಲ್ಲಿ 25 ಸಾವಿರ ಜನರು ಜಮ್ಮಾ ಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್‌ಟಿಸಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳುವಂತೆ ಕಂದಾಯ ಸಚಿವರು ಹೇಳಿದ್ದರು.

ಜಮ್ಮಾ ಬಾಣೆ ಭೂಮಿ ಸಂಬಂಧ ತಕರಾರು ಇಲ್ಲದಿದ್ದಲ್ಲಿ ನೇರವಾಗಿ ಸರ್ವೆ ಮಾಡಬಹುದಾಗಿದೆ. ತಕರಾರು ಇದ್ದಲ್ಲಿ ಗ್ರಾಮ ಸಭೆಯಲ್ಲಿ ಇಟ್ಟು ಗ್ರಾಮಸ್ಥರ ಸಹಕಾರ ಪಡೆಯಬಹುದಾಗಿದೆ. ಇದನ್ನು ಆಂದೋಲನ ರೂಪದಲ್ಲಿ ಕೈಗೊಳ್ಳಬೇಕಿದ್ದು, ತಹಶೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ತಂಡವು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+