ಪ್ರಭಾವಿ ಸಚಿವರ ಸಭೆ; ಸರ್ಕಾರಕ್ಕೆ ಕಾದಿದ್ಯಾ ಆಪತ್ತು: ಪ್ರಿಯಾಂಕ್ ಖರ್ಗೆ ಏನಂದ್ರು?
ಹುಬ್ಬಳ್ಳಿ, ಫೆಬ್ರವರಿ 01: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪ್ರಭಾವಿ ಸಚಿವರು ಸಭೆ ನಡೆಸಿದ್ದು, ಹಲವು ಅನುಮಾನಗಳಿಕೆ ಕಾರಣವಾಗಿದೆ.
ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಆಪ್ತ ಶಾಸಕರ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳಲು ಸಿದ್ದತೆ ನಡೆಯುತ್ತಿದ್ದು, ಇದೀಗ ಪ್ರಭಾವಿ ಸಚಿವರು ವಿಧಾನಸೌಧದಲ್ಲಿ ಗುಪ್ತವಾಗಿ ಸಭೆ ನಡೆಸಿದ್ದು, ಸರ್ಕಾರಕ್ಕೆ ಆಪತ್ತು ಕಾದಿದ್ಯಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಉತ್ತರಿಸಿದ್ದು, ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನು ಆಗಲ್ಲ. ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇ ಬಾರದಾ? ಎರಡಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಯಲ್ಲೇ ಇರ್ತೇನೆ. ನಮ್ಮ ಪಕ್ಷದವರು ಕೂಡ ಹೋಗಬಾರದು ಅಂದ್ರೆ ಹೇಗೆ? ಗೃಹ ಸಚಿವ ಡಾ. ಜಿ ಪರಮೇಶ್ವರ, ಸುರ್ಜೆವಾಲಾ, ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕದ ಬಗ್ಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ. ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಮರ್ಥನೆ ನೀಡಿದ ಅವರು, ಗಂಗಾ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತಾ? ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ. ನಮ್ಮ ದೇಶದಲ್ಲಿ ಬುದ್ದಿಸಮ್, ಜೈನಿಸಮ್, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ. ಈ ನಾಲ್ಕು ಧರ್ಮಗಳು ಹುಟ್ಟಿದ್ದು ಹಿಂದೂ ಧರ್ಮದ ವಿರುದ್ಧವಾಗಿ ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲ ಅದರ ವಿರುದ್ಧ ಹುಟ್ಟಿವೆ. ಬಸವಣ್ಣ ಅವರು ದೇಶ ದ್ರೋಹಿ ನಾ? ಹಿಂದೂ ವಿರೋಧಿನಾ? ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ? ಕೇವಲ ಗಂಗಾ ಅಷ್ಟೇ ಅಲ್ಲ. ದೇಶದ ಯಾವುದೇ ನದಿಯಲ್ಲಿ ಹೋಗಿ ಮುಳುಗಿ ಬಂದ್ರೆ ಪಾಪ ಪರಿಹಾರ ಆಗೋದಿಲ್ಲ. ನಾವು ದುಡಿತಾ ಇರೋದಕ್ಕೆ ಅನುದಾನ ಕೊಡಿ ಸಾಕು ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ್ ಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ಅವರ ಆಚರಣೆ ನನ್ನ ಮೇಲೆ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಆಗೋದಿಲ್ಲ. ನಿಮ್ಮ ಭಕ್ತಿ ನಿಮಗೆ, ನಮ್ಮ ಭಕ್ತಿ ನಮಗೆ. ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರ್ಬೇಕು. ಭಕ್ತಿ ವ್ಯಕ್ತಿಗೆ ಬಂದ್ರೆ ಸರ್ವಧಿಕಾರಿ ಆಗ್ತಾನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು.
ಇಡಿ ಯಾಕೆ ಮುಡಾ ತನಿಖೆ ಮಾಡ್ತಾ ಇದೆ? ಮನಿ ಲ್ಯಾಡರಿಂಗ್ ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಅಂತ ಬಿಂಬಿಸಿದ್ದಾರೆ. ವಿಜಯೇಂದ್ರ ಸಲ್ಲಿಸಿರೋ ಅಫಿಡೆವಿಟ್ ನಲ್ಲಿ ಮನಿ ಲ್ಯಾಂಡರಿಂಗ್ ಅಂಶವಿದೆ. ಆದರೆ ವಿಜಯೇಂದ್ರ ಅವರ ವಿಚಾರ ಇದುವರೆಗೂ ಬಹಿರಂಗಗೊಂಡಿಲ್ಲ. ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತೆ. ಇದೆಲ್ಲ ಪೂರ್ವ ನಿಯೋಜಿತ ಅಷ್ಟೇ ಎಂದು ಹೇಳಿದರು.
ನಮ್ಮ ಬೇವರು, ನಮ್ಮ ದುಡಿಮೆ ಅವರಿಗೆ ಬೇಕಂತೆ ನೆರವು ಕೇಳೋದು ತಪ್ಪಾ. ನಮ್ಮಿಂದ ತಾನೇ ದೇಶ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಾ ಇದೆ. ಬಜೆಟ್ ಮೇಲೆ ನಮಗೆ ನಿರೀಕ್ಷೆ ಇಲ್ಲ. ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ನಿರುದ್ಯೋಗ ತಾಂಡವ ಆಡ್ತಾ ಇದೆ. ಮಧ್ಯಮ ವರ್ಗ ನಿರ್ನಾಮವಾಗಿದೆ. ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ. ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ.ಯುಪಿ ಅವರಿಗೆ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ.












Click it and Unblock the Notifications