ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಆರ್ ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ನವ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರು ಹಾಗೂ ಸಂವಿಧಾನ ಶಿಲ್ಪಿ ಆಗಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 113ನೇ ಜನ್ಮ ದಿನಾಚರಣೆ ಹಿನ್ನೆಲೆ ನಾಡಿನ ಜನತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭಾಷಯ ಕೋರಿದ್ದಾರೆ.

"ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವದ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು ಡಾ. ಬಿ.ಆರ್ ಅಂಬೇಡ್ಕರ್ ಎಳೆದು ತಂದು ನಿಲ್ಲಿಸಿದ ವಿಮೋಚನಾ ರಥವನ್ನು ಮುಂದಕ್ಕೆ ಒಯ್ಯಲು ನಾವೆಲ್ಲ ಕೈಜೋಡಿಸೋಣ," ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ 2022: ಇತಿಹಾಸ, ಸತ್ಯಗಳು ಮತ್ತು ಮಹತ್ವಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ 2022: ಇತಿಹಾಸ, ಸತ್ಯಗಳು ಮತ್ತು ಮಹತ್ವ

ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸರ್ವಧರ್ಮ ಸಹಿಷ್ಣುತೆ ಮುಂತಾದ ಉದಾತ್ತ ಚಿಂತನೆಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದ್ದಾರೆ. ಸಂವಿಧಾನದ ಈ ಆಶಯಗಳಂತೆ ಬದುಕುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

Opposition Party Chief Siddaramaiah Tweet on BR Ambedkar Jayanti

ಬಾಲ್ಯದಲ್ಲಿ ಬಾಬಾ ಸಾಹೇಬರು ಎದುರಿಸಿದ ಸವಾಲು:

ಕಳೆದ 1891ರ ಇದೇ ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನಿಸಿದರು. ಅವರು ಬಾಲ್ಯದ ದಿನಗಳಲ್ಲಿ ಕಷ್ಟವನ್ನು ಸವಾಲಾಗಿ ಸ್ವೀಕರಿಸಿದ ಅವರು ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶಪಥಗೈದರು. ಏಕೆಂದರೆ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿಗೆ ಸಿಲುಕಿದ ಅಂಬೇಡ್ಕರ್ ಕುಟುಂಬ, ಭಾರೀ ಅವಮಾನ ಎದುರಿಸಿತ್ತು.

ಇದು ಸಮಾನತೆ ದಿನ:

ಭೀಮ ರಾವ್ ಅಂಬೇಡ್ಕರ್ ಕೆಳಜಾತಿ ಸಮುದಾಯಕ್ಕೆ ಸೇರಿದವರು ಮತ್ತು ತಮ್ಮ ಬಾಲ್ಯದ ವರ್ಷಗಳಲ್ಲಿ ತಾರತಮ್ಯವನ್ನು ಎದುರಿಸಿದರು. ಬಿ.ಆರ್. ಅಂಬೇಡ್ಕರ್ ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅನೇಕ ಸಾಹಸಗಳನ್ನು ಅನುಸರಿಸಿದರು. ವಿದೇಶದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪದವಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ಈ ಮಹಾನ್ ನಾಯಕ ಭಾರತದ ಜಾತಿ ಆಧಾರಿತ ವ್ಯವಸ್ಥೆಗಾಗಿ ಸಕ್ರಿಯವಾಗಿ ಕೆಲಸ ಮಾಡಿದರು ಮತ್ತು ಆದ್ದರಿಂದ ಅವರ ಜನ್ಮದಿನವನ್ನು ದೇಶದಲ್ಲಿ "ಸಮಾನತೆ ದಿನ' ಎಂದು ಆಚರಿಸಲಾಗುತ್ತದೆ.

Recommended Video

Kieron Pollard ಔಟ್ ಆದ ನಂತರ ಪಿಚ್ ಮದ್ಯೆ ನಡೆದಿದ್ದೇನು | Oneindia Kannada

English summary
Opposition Party Chief Siddaramaiah Tweet on BR Ambedkar Jayanti. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X