ರಾಜ್ಯ ರಾಜಕಾರಣ ಬದಲಾವಣೆ ನಿರೀಕ್ಷೆ:ಯಡಿಯೂರಪ್ಪ ಬರ ಪ್ರವಾಸ ಮುಂದೂಡಿಕೆ
ಬೆಂಗಳೂರು, ಜುಲೈ 03: ಯಡಿಯೂರಪ್ಪ ಅವರ ಎರಡನೇ ಹಂತದ ಬರ ಪ್ರವಾಸ ಮುಂದೂಡಲಾಗಿದೆ. ಯಡಿಯೂರಪ್ಪ ಅವರು ಇಂದು ಎರಡನೇ ಹಂತದ ಬರ ಪ್ರವಾಸ ಮಾಡಬೇಕಿತ್ತು.
ಮೊದಲ ಹಂತದ ಬರ ಪ್ರವಾಸವನ್ನು ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಿಂದ ಆರಂಭಿಸಿದ್ದ ಯಡಿಯೂರಪ್ಪ ಅವರು, ಇಂದು ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬರ ಪ್ರವಾಸ ಮಾಡಬೇಕಿತ್ತು. ಆದರೆ ಇಂದಿನ ಬರ ಪ್ರವಾಸ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ.
ರಾಜ್ಯದಲ್ಲಿ ರಾಜಕೀಯ ಘಟನೆಗಳು ನಡೆಯುತ್ತಿರುವ ಕಾರಣ ಯಡಿಯೂರಪ್ಪ ಅವರು ಬರ ಪ್ರವಾಸ ಮುಂದೂಡಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಯಡಿಯೂರಪ್ಪ ಅವರು ಬರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದ್ದು, ಇನ್ನಷ್ಟು ಶಾಸಕರು ರಾಜೀನಾಮೆಯ ಹಾದಿ ಹಿಡಿಯಬಹುದು ಎನ್ನಲಾಗುತ್ತಿದೆ. ಬಿಜೆಪಿಗೆ ತಾನಾಗಿಯೇ ಒಲಿಯುತ್ತಿರುವ ಈ ಅವಕಾಶವನ್ನು ಕೈಜಾರಲು ಸಿದ್ಧವಿಲ್ಲದ ಯಡಿಯೂರಪ್ಪ ಅವರು ಬರ ಪ್ರವಾಸವನ್ನು ಮುಂದೂಡಿ ರಾಜಕಾರಣ ಗಮನಿಸುತ್ತಿದ್ದಾರೆ.












Click it and Unblock the Notifications